ಕೊಲ್ಕತ್ತಾ: ಬಿಜೆಪಿ ನಾಯಕರೊಬ್ಬರನ್ನು ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಂಡಿಕ್ಕಿ ಹತ್ಯೆಗೈದ ಘಟನೆ ಪಶ್ಚಿಮ ಬಂಗಾಳದ ಪೂರ್ವ ಬರ್ಧಮಾನ್ ಜಿಲ್ಲೆಯಲ್ಲಿ ನಡೆದಿದೆ. ಮೃತಪಟ್ಟ ವ್ಯಕ್ತಿಯನ್ನು ರಾಜು ಝಾ ಎಂದು ಗುರುತಿಸಲಾಗಿದೆ.
ರಾಜು ಝಾ ಹಲವು ಪ್ರಕರಣಗಳನ್ನು ಎದುರಿಸುತ್ತಿದ್ದು, ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದ ಆರೋಪವಿತ್ತು. 2021ರ ವಿಧಾನಸಭಾ ಚುನಾವಣೆಗೂ ಮುನ್ನ ಅವರು ಬಿಜೆಪಿ ಸೇರಿದ್ದರು.
ರಾಜು ಝಾ ಮತ್ತು ಸ್ನೇಹಿತರು ಕೊಲ್ಕತ್ತಾಗೆ ಹೊರಟಾಗ ಶಕ್ತಿಗರ್ ನಲ್ಲಿ ಅವರು ಕಾರು ನಿಲ್ಲಿಸಿದ್ದರು. ಕೂಡಲೇ ಸ್ಥಳಕ್ಕಾಗಮಿಸಿದ ದುರ್ಷರ್ಮಿಗಳು ಗುಂಡಿಕ್ಕಿದ್ದಾರೆ.
ದಾಳಿಯಿಂದ ರಾಜು ಮೃತಪಟ್ಟರೆ ಅವರ ಸ್ನೇಹಿತ ಗಾಯಗೊಂಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.