ಮಂಗಳೂರು: ಬೆಳ್ತಂಗಡಿ (Belthangady) ತಾಲೂಕಿನ ನೆರಿಯ ಗ್ರಾಮದ ಮನೆಯೊಂದರ ಗೋಡೆಯಲ್ಲಿ ಸಿಕ್ಕ ನಾಗರಹಾವಿನ 16 ಮೊಟ್ಟೆಗಳನ್ನು ಸಂರಕ್ಷಿಸಿ, ಕೃತಕ ಕಾವು ನೀಡುವ ಮೂಲಕ ಮರಿಗಳನ್ನು ಯಶಸ್ವಿಯಾಗಿ ಕಾಡಿಗೆ ಬಿಡಲಾಗಿದೆ. ಉರಗ ಪ್ರೇಮಿ ಸ್ನೇಕ್ ಅನಿಲ್ ಅವರ ಸಮಯಪ್ರಜ್ಞೆಯಿಂದಾಗಿ ಇಷ್ಟೊಂದು ಸಂಖ್ಯೆಯ ಹಾವಿನ ಮರಿಗಳಿಗೆ ಜೀವದಾನ ಸಿಕ್ಕಂತಾಗಿದೆ.
ಇರುವೆಗಳ ದಾಳಿಯಿಂದ ರಕ್ಷಣೆ
ನೆರಿಯ ಗ್ರಾಮದ ಬೊಮ್ಮಣ್ಣ ಗೌಡ ಎಂಬುವರ ಮನೆಯ ಗೋಡೆಯ ಸಂದಿಯಲ್ಲಿ ನಾಗರಹಾವೊಂದು ಕಾಣಿಸಿಕೊಂಡಿತ್ತು. ತಕ್ಷಣವೇ ಕಕ್ಕಿಂಜೆಯ ಉರಗ ಮಿತ್ರ ಸ್ನೇಕ್ ಅನಿಲ್ ಅವರಿಗೆ ಮಾಹಿತಿ ನೀಡಲಾಗಿತ್ತು. ಅನಿಲ್ ಅವರು ಸ್ಥಳಕ್ಕೆ ಬಂದು ಹಾವನ್ನು ಹಿಡಿದಾಗ, ಅಲ್ಲಿ 16 ಮೊಟ್ಟೆಗಳು ಪತ್ತೆಯಾಗಿದ್ದವು. ಆ ಮೊಟ್ಟೆಗಳಿಗೆ ಇರುವೆಗಳು ಮುತ್ತಿಕೊಂಡಿದ್ದು, ಅವು ನಾಶವಾಗುವ ಭೀತಿಯಲ್ಲಿದ್ದವು. ಇದನ್ನು ಗಮನಿಸಿದ ಅನಿಲ್, ಮೊಟ್ಟೆಗಳನ್ನು ಸುರಕ್ಷಿತವಾಗಿ ಹೊರತೆಗೆದು ತಮ್ಮ ಮನೆಗೆ ಕೊಂಡೊಯ್ದಿದ್ದರು.
ಕೃತಕ ಕಾವು ನೀಡಿದ ಸ್ನೇಕ್ ಅನಿಲ್
ಅಪಾಯದ ಸ್ಥಿತಿಯಲ್ಲಿದ್ದ ಮೊಟ್ಟೆಗಳಿಗೆ ಅನಿಲ್ ಅವರು ತಮ್ಮ ಮನೆಯಲ್ಲಿ ವ್ಯವಸ್ಥಿತವಾಗಿ ಕೃತಕ ಕಾವು ನೀಡುವ ಮೂಲಕ ಆರೈಕೆ ಮಾಡಿದ್ದರು. ಪರಿಣಾಮವಾಗಿ, ಕೆಲವು ದಿನಗಳ ನಂತರ ಎಲ್ಲ 16 ಮೊಟ್ಟೆಗಳಿಂದ ಮರಿಗಳು ಆರೋಗ್ಯವಾಗಿ ಹೊರಬಂದಿವೆ. ಹೀಗೆ ಹುಟ್ಟಿದ ಪುಟ್ಟ ನಾಗರಹಾವಿನ ಮರಿಗಳನ್ನು ಅರಣ್ಯ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಚಾರ್ಮಾಡಿ ಘಾಟಿ ಪ್ರದೇಶದ ದಟ್ಟ ಅರಣ್ಯಕ್ಕೆ ಬಿಡಲಾಗಿದೆ.
ಕಳೆದ ತಿಂಗಳಷ್ಟೇ ತೋಟತ್ತಾಡಿ ಎಂಬಲ್ಲಿ 28 ನೀರು ಹಾವಿನ ಮೊಟ್ಟೆಗಳನ್ನು ರಕ್ಷಿಸಿ ಮರಿ ಮಾಡಿದ್ದ ಸ್ನೇಕ್ ಅನಿಲ್, ಈಗ ನಾಗರಹಾವಿನ ಮರಿಗಳನ್ನೂ ಕಾಪಾಡುವ ಮೂಲಕ ಪರಿಸರ ಪ್ರೇಮಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಜೀವಿಗಳ ಸಂರಕ್ಷಣೆಯೇ ತಮ್ಮ ಗುರಿ ಎಂದು ಈ ಸಂದರ್ಭದಲ್ಲಿ ಅವರು ತಿಳಿಸಿದ್ದಾರೆ.
ಶುಂಠಿ ಗದ್ದೆಯಲ್ಲಿ ಕೆಲಸ ಮಾಡುವಾಗ ಕಚ್ಚಿದ ಹಾವು – ಆರು ತಿಂಗಳ ಗರ್ಭಿಣಿ ಸಾವು
ಸಾಗರ ಜಿಲ್ಲೆಯ (Sagara) ಸಾಗರ ತಾಲೂಕಿನ ಆನಂದಪುರ ಸಮೀಪದ ಸುಳಗೋಡು ಗ್ರಾಮದಲ್ಲಿ ಭೀಕರ ದುರಂತವೊಂದು (Tragedy) ಸಂಭವಿಸಿದೆ. ಹಾವಿನ ಕಡಿತಕ್ಕೆ (Snake Bite) ತುತ್ತಾಗಿ ಆರು ತಿಂಗಳ ಗರ್ಭಿಣಿಯೊಬ್ಬರು ಮೃತಪಟ್ಟಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಸುಳಗೋಡು ಗ್ರಾಮದ ವೀರಭದ್ರ ಎಂಬುವವರ ಪತ್ನಿ ಸ್ವಾತಿ (26) ಮೃತಪಟ್ಟ ದುರ್ದೈವಿ. ಸ್ವಾತಿ ಅವರು ಆರು ತಿಂಗಳ ಗರ್ಭಿಣಿಯಾಗಿದ್ದರು. ಶನಿವಾರ ಮಧ್ಯಾಹ್ನ ಸುಮಾರು 3:30ರ ವೇಳೆಗೆ ಅವರು ತಮ್ಮ ಪತಿ ಮತ್ತು ಇತರ ಕೂಲಿ ಕಾರ್ಮಿಕರೊಂದಿಗೆ ಸುಳಗೋಡು ಗ್ರಾಮದ ಶುಂಠಿ ಗದ್ದೆಯಲ್ಲಿ ಕೆಲಸಕ್ಕೆ ತೆರಳಿದ್ದರು.
ಕೆಲಸದ ನಡುವೆ ಎಲ್ಲರೂ ಮಧ್ಯಾಹ್ನದ ಊಟ ಮುಗಿಸಿ ಸ್ವಲ್ಪ ಹೊತ್ತು ವಿಶ್ರಾಂತಿ ಪಡೆಯುತ್ತಿದ್ದರು. ಈ ಸಂದರ್ಭದಲ್ಲಿ ಅನಿರೀಕ್ಷಿತವಾಗಿ ಬಂದ ವಿಷಪೂರಿತ ಹಾವೊಂದು ಸ್ವಾತಿ ಅವರ ಬಲಗಾಲಿನ ಮೊಣಕಾಲು ಭಾಗಕ್ಕೆ ಕಚ್ಚಿದೆ.
ಇದನ್ನೂ ಓದಿ : ಮನೆಯ ಬಳಿ ಹಾವು ಬರದಂತೆ ಏನು ಮಾಡಬೇಕು? – ಇಲ್ಲಿದೆ ಮಾಹಿತಿ