Sunday, January 25, 2026
Homeಟಾಪ್ ನ್ಯೂಸ್BELLARY: ಬಳ್ಳಾರಿ ಬ್ಯಾನರ್‌ ಗಲಾಟೆ ತನಿಖೆಯನ್ನು ಸಿಐಡಿಗೆ ವಹಿಸಿ ಸರ್ಕಾರ ಆದೇಶ

BELLARY: ಬಳ್ಳಾರಿ ಬ್ಯಾನರ್‌ ಗಲಾಟೆ ತನಿಖೆಯನ್ನು ಸಿಐಡಿಗೆ ವಹಿಸಿ ಸರ್ಕಾರ ಆದೇಶ

ಬೆಂಗಳೂರು: ಬಳ್ಳಾರಿಯಲ್ಲಿ (Bellary) ಬ್ಯಾನರ್ ಗಲಾಟೆ (Banner Fight) ವೇಳೆ ಗುಂಡಿನ ದಾಳಿ ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರವು ಸಿಐಡಿಗೆ (CID) ವರ್ಗಾಯಿಸಿ ಆದೇಶ ಮಾಡಿದೆ. ಬ್ರೂಸ್ ಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಲ್ಲಾ ಪ್ರಕರಣವನ್ನ ಸಿಐಡಿಗೆ ವರ್ಗಾಯಿಸಲಾಗಿದೆ.

ಘಟನೆ ರಾಜಕೀಯ ಸ್ವರೂಪ ಪಡೆದುಕೊಂಡು ತೀವ್ರ ವಿವಾದ ಸೃಷ್ಟಿಸಿರುವ ಹಿನ್ನೆಲೆ ಸರ್ಕಾರ ಮಹತ್ವದ ನಿರ್ಣಯ ಕೈಗೊಂಡಿದೆ. ಬಳ್ಳಾರಿ ಪ್ರಕರಣ ಸಿಐಡಿಗೆ ವಹಿಸುವ ವಿಚಾರ ಸಂಬಂಧ ಇಂದೇ ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿ ಚರ್ಚೆ ಮಾಡ್ತೇನೆ ಎಂದು ಗೃಹ ಸಚಿವ ಪರಮೇಶ್ವರ್​​ ಹೇಳಿದ್ದರು. ಆ ಬೆನ್ನಲ್ಲೇ ಆದೇಶ ಹೊರಬಿದ್ದಿದೆ.

ಬ್ಯಾನರ್​​ ಗಲಾಟೆ ಪ್ರಕರಣದ ಕೇಸ್​​ ತನಿಖೆ ಸಿಐಡಿಗೆ ವಹಿಸುವ ವಿಚಾರ ಸಂಬಂಧ ಈ ಹಿಂದೆಯೂ ಗೃಹ ಸಚಿವ ಪರಮೇಶ್ವರ್​​ ಸುಳಿವು ನೀಡಿದ್ದರು. ಪೊಲೀಸರ ಗನ್ ಹಾಗೂ ರಿವಾಲ್ವರ್​ನಿಂದ ಫೈರಿಂಗ್​ ಆಗಿಲ್ಲ, ಖಾಸಗಿ ಗನ್​ನಿಂದ ಫೈರಿಂಗ್​ ಆಗಿದ್ದೆಂದು ಎಡಿಜಿಪಿ ದೃಢಪಡಿಸಿದ್ದಾರೆ. ಕಾನೂನು ಚೌಕಟ್ಟಿನಲ್ಲಿ ಆರೋಪಿಗಳನ್ನು ಬಂಧಿಸುತ್ತೇವೆ. ಹತ್ಯೆಗೆ ಪೆಟ್ರೋಲ್ ಬಾಂಬ್ ಬಳಕೆ ಮಾಡಿದ್ದಾರೆಂಬ ಆರೋಪವೂ ಇದ್ದು, ತನಿಖೆ ಆದಮೇಲೆ ಅದೆಲ್ಲ ಗೊತ್ತಾಗುತ್ತೆ. ಅಗತ್ಯಬಿದ್ದರೆ ಸಿಐಡಿಗೆ ಪ್ರಕರಣ ಕೊಡುತ್ತೇವೆ ಎಂದು ಹೇಳಿದ್ದರು.

ಇದನ್ನೂ ಓದಿ: ಬಳ್ಳಾರಿ ಕೇಸ್​​​, 25 ಆರೋಪಿಗಳಿಗೆ ಜಾಮೀನು ಮಂಜೂರು

ಇತ್ತ ಪ್ರಕರಣದ ತನಿಖೆ ಬಗ್ಗೆ ಶಾಸಕ ಜನಾರ್ದನ ರೆಡ್ಡಿ ಅಸಮಾಧಾನ ಹೊರ ಹಾಕಿದ್ದರು. ಘಟನೆಯಲ್ಲಿ ಮೃತಪಟ್ಟಿದ್ದ ರಾಜಶೇಖರ್​​ ಮತೃದೇಹ ಹೂಳಲು ಮೊದಲು ಗುಂಡಿ ತೋಡಿ, ಆ ನಂತರ ಶವ ಸುಡಲಾಗಿದೆ. ಶಾಸಕ ಭರತ್ ರೆಡ್ಡಿ ನಿರ್ದೇಶನದಂತೆ ಕೊಲೆಯಾಗಿದೆ. ತಂದೆ ಸಮಾಧಿ ಬಳಿ ರಾಜಶೇಖರ್ ಅಂತ್ಯಕ್ರಿಯೆ ಆಗಬೇಕು ಎಂದಿದ್ದರು. ಆದರೆ ಹೂಳಲು ತೋಡಿದ್ದ ಗುಂಡಿ ಮುಚ್ಚುವಂತೆ ನಿರ್ದೇಶನ ಬಂದಿದೆ. ಹೀಗಾಗಿ ಸ್ಮಶಾನದಲ್ಲಿ ತೋಡಿದ್ದ ಗುಂಡಿಯನ್ನು ತೆಂಗಿನಕಾಯಿ ನೀರು ಹಾಕಿ ಮುಚ್ಚಿದ್ದಾರೆ. ಬಳಿಕ ಯಾವುದೇ ಸಾಕ್ಷ್ಯ ಸಿಗದ ಹಾಗೆ ರಾಜಶೇಖರ್​ ಮೃತದೇಹವನ್ನು ಗ್ಯಾಸ್‌ನಿಂದ ಸುಡಲಾಗಿದೆ.

ಇನ್ನು ಘಟನೆ ನಡೆದು 9 ದಿನಗಳಾದರೂ ಒಬ್ಬ ಗನ್​ಮ್ಯಾನ್ ಮಾತ್ರ ಬಂಧನ ಮಾಡಲಾಗಿದೆ. ಭರತ್​​ ರೆಡ್ಡಿಯನ್ನು ಯಾಕೆ ಬಂಧಿಸಿಲ್ಲ ಎಂದು ಪ್ರಶ್ನಿಸಿದ್ದ ರೆಡ್ಡಿ, ಘಟನೆಗೆ ಕಾರಣಕರ್ತರಾದ ಶಾಸಕನ ಬಂಧನವಾಗಬೇಕು. ಜೊತೆಗೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದ್ದರು.

ಹೆಚ್ಚಿನ ಸುದ್ದಿ

Change Language »
While viewing the website, tap in the menu bar. Scroll down the list of options, then tap Add to Home Screen.
Use Safari for a better experience.
error: Content is protected !!