Saturday, January 25, 2025
Homeಟಾಪ್ ನ್ಯೂಸ್ದೇವರ ದರ್ಶನಕ್ಕೆ ಬಂದ ನವಜೋಡಿ : ರಸ್ತೆ ಅಪಘಾತದಲ್ಲಿ ಸಾವು

ದೇವರ ದರ್ಶನಕ್ಕೆ ಬಂದ ನವಜೋಡಿ : ರಸ್ತೆ ಅಪಘಾತದಲ್ಲಿ ಸಾವು

ಬೆಳಗಾವಿ : 10 ದಿನಗಳ ಹಿಂದೆಷ್ಟೇ ಮದುವೆಯಾಗಿದ್ದ ನವಜೋಡಿ ರಸ್ತೆ ಅಪಘಾತದಲ್ಲಿ ಮೃತಪಟ್ಟ ದಾರುಣ ಘಟನೆ ಬೆಳಗಾವಿಯಲ್ಲಿ ನಡೆದಿದೆ. ನಿಪ್ಪಾಣಿ- ಮುದೋಳ ರಾಜ್ಯ ಹೆದ್ದಾರಿಯಲ್ಲಿ ಶನಿವಾರ ಭೀಕರ ಅಪಘಾತ ನಡೆದಿದೆ.

ಮಹಾರಾಷ್ಟ್ರದಲ್ಲಿ ಕಳೆದ 10 ದಿನಗಳ ಹಿಂದೆಯಷ್ಟೇ ಮದುವೆ ಮಾಡಿಕೊಂಡಿದ್ದ ನವದಂಪತಿ, ಹೊಸ ಕಾರಿನಲ್ಲಿ ದೇವರ ದರ್ಶನಕ್ಕೆಂದು ಬಾದಾಮಿಯ ಬನಶಂಕರಿ ದೇವಾಲಯಕ್ಕೆ ಹೋಗಿದ್ದರು. ದೇವರ ದರ್ಶನ ಪಡೆದು ಮರಳುವಾಗ ಟ್ಯಾಂಕರ್‌ಗೆ ಗುದ್ದಿ ಸಾವನ್ನಪ್ಪಿದ್ದಾರೆ.

ಮೃತರನ್ನು ಇಂದ್ರಜಿತ್ ಮೋಹನ್ ಡಮ್ಮಣಗಿ(27) ಹಾಗೂ ಕಲ್ಯಾಣಿ ಇಂದ್ರಜಿತ್ ಡಮ್ಮಣಗಿ(24) ಎಂದು ಗುರುತಿಸಲಾಗಿದೆ. ಮೃತ ನವದಂಪತಿ ಮಹಾರಾಷ್ಟ್ರದ ಇಸ್ಲಾಂಪುರ ಮೂಲದವರು ಎಂದು ತಿಳಿದುಬಂದಿದೆ. ಮದುವೆ ಸಂಭ್ರಮದಲ್ಲಿದ್ದ ಕುಟುಂಬಕ್ಕೆ ಈಗ ಸೂತಕದ ಛಾಯೆ ಆವರಿಸಿದೆ.

ಹೆಚ್ಚಿನ ಸುದ್ದಿ

error: Content is protected !!