Thursday, April 16, 2026
Homeಟಾಪ್ ನ್ಯೂಸ್BASAVARAJ BOMMAI: ‘ಕಾಗಿನೆಲೆ ಪೀಠ ಕ್ರಿಶ್ಚಿಯನ್ ಪೀಠ ಆಗಬಹುದು..’ ಸಿಎಂ ಸಿದ್ದರಾಮಯ್ಯಗೆ ಬೊಮ್ಮಾಯಿ ಟಾಂಗ್

BASAVARAJ BOMMAI: ‘ಕಾಗಿನೆಲೆ ಪೀಠ ಕ್ರಿಶ್ಚಿಯನ್ ಪೀಠ ಆಗಬಹುದು..’ ಸಿಎಂ ಸಿದ್ದರಾಮಯ್ಯಗೆ ಬೊಮ್ಮಾಯಿ ಟಾಂಗ್

ಬೆಂಗಳೂರು : ಜಾತಿ ಜನಗಣತಿ (Caste census) ಲೆಕ್ಕಾಚಾರ ರಾಜ್ಯದಲ್ಲಿ ಭಾರೀ ಕುತೂಹಲ ಮೂಡಿಸಿದೆ. ಗಣತಿಯಲ್ಲಿ ಕ್ರಿಶ್ಚಿಯನ್ (Christian) ಜೊತೆ ಹಿಂದೂ (Hindu) ಉಪಜಾತಿ ಸೇರ್ಪಡೆಯಾಗಿದ್ದು, ಕ್ರಿಶ್ಚಿಯನ್ ಕುರುಬ, ಕ್ರಿಶ್ಚಿಯನ್ ಬ್ರಾಹ್ಮಣ, ಕ್ರಿಶ್ಚಿಯನ್ ದಲಿತ, ಲಿಂಗಾಯತ ಕ್ರಿಶ್ಚಿಯನ್​, ಒಕ್ಕಲಿಗ ಕ್ರಿಶ್ಚಿಯನ್​, ಮರಾಠ ಕ್ರಿಶ್ಚಿಯನ್​, ಬಲಿಜ ಕ್ರಿಶ್ಚಿಯನ್​, ಮಾದಾರ ಕ್ರಿಶ್ಚಿಯನ್​, ಬಂಜಾರ ಕ್ರಿಶ್ಚಿಯನ್​, ಬೋವಿ ಕ್ರಿಶ್ಚಿಯನ್​, ಹೀಗೆ 47 ಜಾತಿ ಸೇರಿಸಿದ್ದಕ್ಕೆ ಆಕ್ರೋಶ ಸ್ಫೋಟಗೊಂಡಿದೆ. ಇಂದು ಮಾಜಿ ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಇದೀಗ ಲಿಂಗಾಯತರ ಸಭೆ ನಡೆದಿದ್ದು, ಈ ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಮಾಜಿ ಸಿಎಂ, ಸಂಸದ ಬಸವರಾಜ್ ಬೊಮ್ಮಾಯಿ (Basavaraj bommai) ಕೂಡಾ ಆಗಮಿಸಿದ್ದರು.

ಇದನ್ನೂ ಓದಿ : ಶಿಕ್ಷಕರಿಗಿಲ್ಲ ದಸರಾ ರಜೆ, ಗೌರವಧನವನ್ನೂ ಕೊಡ್ತಿಲ್ವಂತೆ ಸರ್ಕಾರ!

ರಾಜ್ಯದಲ್ಲಿ ಜಾತಿಗಣತಿ ವರದಿ ಬಗ್ಗೆ ಈಗಾಗಲೇ ಒಂದೇ ದಿನ 2 ಸಭೆ ನಡೆಸಲಾಗಿದೆ. ಅತ್ತ ಲಿಂಗಾಯತರ ಸಭೆ ನಡೆದರೆ, ಇತ್ತ ಸಾಮಾಜಿಕ ಜಾಗೃತಿ ವೇದಿಕೆ ಮೂಲಕ ಬಿಜೆಪಿ ನಿಯೋಗ ಸಭೆ ನಡೆಸಿತ್ತು. ಈ ಮಧ್ಯೆ ಲಿಂಗಾಯತರ ಸಭೆ ಬಳಿಕ ಮಾತನಾಡಿದ ಬಸವರಾಜ್‌ ಬೊಮ್ಮಾಯಿ ಜಾತಿಯ ಮುಂದೆ ಕ್ರಿಶ್ಚಿಯನ್‌ ಹೆಸರು ಸೇರಿಸಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸಭೆ ಬಳಿಕ ಮಾತನಾಡಿದ ಸಂಸದ ಬಸವರಾಜ್ ಬೊಮ್ಮಾಯಿ, ‘ಧರ್ಮದ ಕಲಂನಲ್ಲಿ ನಾಸ್ತಿಕರನ್ನು ಸೇರಿಸುತ್ತಿದ್ದಾರೆ.. ಇದು ಯಾಕೆ? ಎಂದು ಕೇಳಿದ್ದಾರೆ. ಅಲ್ಲದೇ ಕ್ರಿಶ್ಚಿಯನ್ ಧರ್ಮದ ಹೆಸರಲ್ಲೂ ಸಿದ್ದರಾಮಯ್ಯನವರು ಗೊಂದಲ ಮಾಡ್ತಿದಾರೆ. ಈಗಾಗಲೇ ಅನೇಕ ಗುರುಗಳು ಈ ಬಗ್ಗೆ ಮಾತನಾಡಿದ್ದಾರೆ. ಹಿಂದಿನಿಂದಲೂ ಸಿದ್ದರಾಮಯ್ಯ ಲಿಂಗಾಯತರನ್ನ ಒಡೆಯುತ್ತಲೇ ಬಂದಿದ್ದಾರೆ. ಸಮಾಜ ಒಡೆದು ತಮ್ಮ ರಾಜಕೀಯ ರೊಟ್ಟಿ ತಟ್ಟಲು ಮುಂದಾಗಿದ್ದಾರೆ. ಇಡೀ‌ ಕರ್ನಾಟಕದಲ್ಲಿ ಲಿಂಗಾಯತರು ಒಗ್ಗಟ್ಟಾಗಿರಬೇಕು. ಮುಂದೆ ಹೀಗೆ ಆದರೆ ಕಾಗಿನೆಲೆ ಕ್ರಿಶ್ಚಿಯನ್ ಪೀಠ ಆಗಬಹುದು’ ಎಂದು ಸಿಎಂ ಸಿದ್ದರಾಮಯ್ಯಗೆ ಟಾಂಗ್ ಕೊಟ್ಟಿದ್ದಾರೆ.

‘ಕ್ರೈಸ್ತ’ ಸೇರ್ಪಡೆ ಕಿಚ್ಚು

ಕ್ರಿಶ್ಚಿಯನ್ ಮತಾಂತರಿಗಳಿಗೆಂದೇ ಸಿದ್ದರಾಮಯ್ಯ ಸರ್ಕಾರ ಹೊಸ ಜಾತಿ ಸೃಷ್ಟಿಸಿದೆ.ಮತಾಂತರವಾದವರನ್ನ ಕ್ರೈಸ್ತ ಧರ್ಮಕ್ಕೆ ಸೇರಿಸಿಲ್ಲ. ಅದರ ಬದಲಿಗೆ ಮೂಲ ಜಾತಿ ಜೊತೆ ಕ್ರಿಶ್ಚಿಯನ್ ಎಂದು ಸೇರಿಸಿ ಹೊಸ ಜಾತಿ ಸೃಷ್ಟಿಸಲಾಗಿದೆ. ಉದಾಹಗಣೆಗೆ ಕುರುಬ ಕ್ರಿಶ್ಚಿಯನ್, ಒಕ್ಕಲಿಕ ಕ್ರಿಶ್ಚಿಯನ್, ನೇಕಾರ ಕ್ರಿಶ್ಚಿಯನ್ ಹೀಗೆ ಹಲವು ಜಾತಿಗಳ ಜೊತೆ ಕ್ರಿಶ್ಚಿಯನ್ ಎಂದು ಕಾಲಂ ಮಾಡಲಾಗಿದೆ. ಈ ಬಗ್ಗೆ ಬಿಜೆಪಿ ನಾಯಕರು ಹಿಂದುಳಿದ ವರ್ಗಗಳ ಆಯೋಗಕ್ಕೆ ಆಕ್ಷೇಪಣಾ ಪತ್ರ ಬರೆದಿದ್ದಾರೆ.ಅದರಲ್ಲೂ ವೀರಶೈವ ಲಿಂಗಾಯತ ಒಳಪಂಗಡದಲ್ಲೂ ಗೊಂದಲ ಸೃಷ್ಟಿಸಲಾಗಿದೆ.ವೀರಶೈವ ಮಹಾಸಭಾದಿಂದ 92 ಒಳಪಂಗಡಕ್ಕೆ ಮನವಿ ಮಾಡಿದ್ರೆ, 135 ಒಳಪಂಗಡ‌ ಸೇರ್ಪಡೆ ಮಾಡಲಾಗಿದೆ.ಇದಕ್ಕೆ ಅಖಿಲ ಭಾರತ ವೀರಶೈವ ಮಹಾಸಭಾ ತೀವ್ರ ವಿರೋಧ ವ್ಯಕ್ತಪಡಿಸಿದೆ. ಆದ್ದರಿಂದ ಮಹಾಸಭಾದಿಂದ ಆಕ್ಷೇಪಣೆ ಕೂಡ ಸಲ್ಲಿಕೆಯಾಗಿದೆ. ಆದ್ರೆ, ಆಯೋಗ ಹೇಗೆ ಪರಿಗಣಿಸುತ್ತೆ ಎಂಬ ಗೊಂದಲ ಮೂಡಿದೆ.

ಹೆಚ್ಚಿನ ಸುದ್ದಿ

Change Language »
error: Content is protected !!