Wednesday, December 4, 2024
Homeಟಾಪ್ ನ್ಯೂಸ್By Election : ಪುತ್ರನೊಂದಿಗೆ ತೆರಳಿ ವೋಟ್​​ ಮಾಡಿದ ಬಸವರಾಜ ಬೊಮ್ಮಾಯಿ

By Election : ಪುತ್ರನೊಂದಿಗೆ ತೆರಳಿ ವೋಟ್​​ ಮಾಡಿದ ಬಸವರಾಜ ಬೊಮ್ಮಾಯಿ

ಹಾವೇರಿ : ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಮತದಾನ ಹಿನ್ನೆಲೆಯಲ್ಲಿ ಸಂಸದ ಬಸವರಾಜ ಬೊಮ್ಮಾಯಿ ಅವರು ಸರತಿ ಸಾಲಿನಲ್ಲಿ ನಿಂತು ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದರು.


ಬಸವರಾಜ ಬೊಮ್ಮಾಯಿ ಅವರು ಎನ್​​​ಡಿಎ ಅಭ್ಯರ್ಥಿ ಹಾಗೂ ತಮ್ಮ ಪುತ್ರ ಭರತ್ ಬೊಮ್ಮಾಯಿ ಅವರೊಂದಿಗೆ ತೆರಳಿ ಶಿಗ್ಗಾಂವಿಯ ಸರ್ಕಾರಿ ಶಾಲೆಯ ಮತಗಟ್ಟೆಯಲ್ಲಿ ವೋಟ್​​​​​ ಮಾಡಿದರು.

ಬಳಿಕ ಮಾತನಾಡಿದ ಅವರು, ಶಿಗ್ಗಾಂವಿ ಸವಣೂರಿನ ಅಭಿವೃದ್ಧಿ ಮಾಡೆಲ್ ಅನ್ನು ಮುಂದುವರಿಸುವ ನಿಟ್ಟಿನಲ್ಲಿ  ಮತ ಚಲಾಯಿಸಿರುವುದಾಗಿ ತಿಳಿಸಿದರು. ಶಿಗ್ಗಾಂವಿ ಸವಣೂರಿನ ಮತದಾರರೆಲ್ಲರೂ ಈ ಪ್ರಜಾಪ್ರಭುತ್ವದ ಹಬ್ಬದಲ್ಲಿ ಭಾಗಿಯಾಗಿ, ದಾಖಲೆ ಪ್ರಮಾಣದಲ್ಲಿ ಮತದಾನ ಮಾಡಬೇಕು ಎಂದು ಬಸವರಾಜ ಬೊಮ್ಮಾಯಿ ಮನವಿ ಮಾಡಿದರು.

ಹೆಚ್ಚಿನ ಸುದ್ದಿ

error: Content is protected !!