ಬೆಂಗಳೂರು: ವಕ್ಫ್ ವಿವಾದದ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪತ್ರ ಬರೆದಿದ್ದಾರೆ.
ಪತ್ರದಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ಯತ್ನಾಳ್ ವಕ್ಫ್ ಕಾನೂನಿನಿಂದಾಗಿ ಅನ್ಯಾಯ ನಡೆಯುತ್ತಿದ್ದು, ವಕ್ಫ್ ಆಸ್ತಿಗಳನ್ನು ರಾಷ್ಟ್ರೀಕರಣಗೊಳಿಸಲು ಮನವಿ ಮಾಡಿದ್ದಾರೆ.
ರೈತರು, ಮಠಗಳು, ದೇವಸ್ಥಾನಗಳು ಮತ್ತು ಭೂಮಾಲೀಕರ ಭೂಮಿಯನ್ನು ವಕ್ಫ್ ಮಂಡಳಿಯ ದೌರ್ಜನ್ಯದ ಬಗ್ಗೆ ರಾಜ್ಯದಲ್ಲಿ ನಡೆದ ಇತ್ತೀಚಿನ ಘಟನೆಗಳನ್ನು ತಿಳಿಸಿದ್ದಾರೆ.
ಅಸ್ತಿತ್ವದಲ್ಲಿರುವ ಕಾನೂನುಗಳಿಂದ ಅಧಿಕಾರ ಪಡೆದ ವಕ್ಫ್ ಮಂಡಳಿಗಳು ವ್ಯಕ್ತಿಗಳು, ರೈತರು ಮತ್ತು ದೀರ್ಘಕಾಲದ ಧಾರ್ಮಿಕ ಸಂಸ್ಥೆಗಳು ಸೇರಿದಂತೆ ಆಸ್ತಿಗಳನ್ನು ಅತಿಕ್ರಮಿಸುತ್ತಿವೆ ಎಂದು ವರದಿಯಾಗಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ. ಇದು ನಮ್ಮ ಸಂವಿಧಾನದಲ್ಲಿ ಪ್ರತಿಪಾದಿಸಿರುವ ಸಮಾನತೆಯ ತತ್ವಗಳಿಗೆ ವಿರುದ್ಧವಾಗಿದೆ ಎಂದು ತಿಳಿಸಿದ್ದಾರೆ.
ವಕ್ಫ್ ಬೋರ್ಡ್‌ಗಳು ಕಾರ್ಯನಿರ್ವಹಿಸುವ ಪ್ರಸ್ತುತ ವಕ್ಫ್ ಕಾಯಿದೆಯು ಖಾಸಗಿ ಭೂಮಿಗಳು, ಜಮೀನುಗಳು, ಐತಿಹಾಸಿಕ ಸಂಸ್ಥೆಗಳು ಮತ್ತು ಸ್ವಾತಂತ್ರ್ಯದ ಹಿಂದಿನ ಆಸ್ತಿಗಳ ಅನಧಿಕೃತ ಸ್ವಾಧೀನ ಸೇರಿದಂತೆ ವ್ಯಾಪಕ ಸಮಸ್ಯೆಗಳಿಗೆ ಕಾರಣವಾಗಿದೆ. ಇದರಿಂದಾಗಿ ನ್ಯಾಯಯುತ ಆಡಳಿತ ಖಚಿತಪಡಿಸಿಕೊಳ್ಳಲು ಮತ್ತು ಮುಂದಿನ ಅನ್ಯಾಯಗಳನ್ನು ತಡೆಗಟ್ಟಲು ವಕ್ಫ್ ಆಸ್ತಿಗಳನ್ನು ರಾಷ್ಟ್ರೀಕರಣಗೊಳಿಸಲು ನಾನು ನಿಮ್ಮ ಬಳಿ ವಿನಂತಿಸುತ್ತೇನೆ ಎಂದು ಮನವಿ ಮಾಡಿದರು.