ಬೆಂಗಳೂರು : ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆ ಕೇಸರಿಪಾಳಯದಲ್ಲಿ ಹೊಸ ಚರ್ಚೆ ಹುಟ್ಟುಹಾಕಿದ್ದು , ಸದ್ಯ ಯತ್ನಾಳ್ ಏಕಾಂಗಿಯಾಗಿದ್ದಾರೆ. ಬಿಜೆಪಿ ಹೈ ಕಮಾಂಡ್ ನಿರ್ಧಾರ ರಾಜ್ಯದ ರೆಬೆಲ್ ನಾಯಕರಿಗೆ ಶಾಕ್ ತಂದಿದೆ.
ಈ ನಡುವೆ ಬಸನಗೌಡ ಪಾಟೀಲ್ ಯತ್ನಾಳ್ ಸೋಷಿಯಲ್ ಮೀಡಿಯಾದಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಕುಟುಂಬ ರಾಜಕಾರಣ ಬಗೆ ಮಾತಾಡಿದ್ದ ವಿಡಿಯೋ ಟ್ಯಾಗ್ ಮಾಡಿ ಸೈಲೆಂಟಾಗಿಯೇ ಟಾಂಗ್ ನೀಡಿದ್ದಾರೆ.
This is highly relevant at this moment! https://t.co/Tgh04QmpmR
— Basanagouda R Patil (Yatnal) (@BasanagoudaBJP) March 26, 2025
ಖಾಸಗಿ ವಾಹಿನಿಯೊಂದಕ್ಕೆ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ನೀಡಿದ್ದ ಸಂದರ್ಶನದ ವಿಡಿಯೋ ತುಣುಕನ್ನು ಹಂಚಿಕೊಂಡಿರೋ ಯತ್ನಾಳ್, ಈ ಸಂದರ್ಭಕ್ಕೆ ಈ ವಿಡಿಯೋ ಪೂರಕವಾಗಿದೆ ಎಂದು ಕೌಂಟರ್ ನೀಡಿದ್ದಾರೆ.
ವಿಡಿಯೋದಲ್ಲಿ ಮಾತಾಡಿರುವ ಜೆಪಿ ನಡ್ಡಾ ದೇಶದ ವಿವಿಧ ರಾಜಕೀಯ ಪಕ್ಷಗಳಲ್ಲಿನ ಕುಟುಂಬಗಳ ಪ್ರಭುತ್ವ ಹಾಗೂ ವಂಶ ರಾಜಕಾರಣದ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ವಿವಿಧ ರಾಜ್ಯದ ಕುಟುಂಬ ರಾಜಕಾರಣದ ಬಗ್ಗೆ ಕೌಂಟರ್ ಕೊಟ್ಟಿದ್ದು, ಬಿಜೆಪಿ ಇದರ ಹೊರತಾಗಿದೆ ಎಂದು ಮಾತಾಡಿದ್ದಾರೆ. ಇದೇ ವಿಡಿಯೋ ಶೇರ್ ಮಾಡಿಕೊಂಡಿರುವ ಯತ್ನಾಳ್ , ಸದ್ಯದ ಸಮಯಕ್ಕೆ ಇದು ಹೋಲುತ್ತೆ ಅನ್ನೋದ್ರ ಮೂಲಕ ಬಿಜೆಪಿ ಹೈ ಕಮಾಂಡ್ ಬಗ್ಗೆ ವ್ಯಂಗ್ಯವಾಡಿದ್ದಾರೆ .
ವಂಶ ರಾಜಕಾರಣದ ಬಗ್ಗೆ ಮಾತಾಡುವ ನಾಯಕರು ಕರ್ನಾಟಕದಲ್ಲಿ ಅದಕ್ಕೆ ನೀರೆರೆದು ಪೋಷಿಸುತ್ತಿದ್ದಾರೆ ಎಂಬ ಅರ್ಥ ಬರುವ ರೀತಿ ಕ್ಯಾಪ್ಶನ್ ಹಾಕಿದ್ದಾರೆ ಮ್ ನಿನ್ನೆಯಷ್ಟೇ ಯತ್ನಾಳ್ ರನ್ನು ಪಕ್ಷ ವಿರೋಧಿ ಚಟುವಟಿಕೆ ಹೆಸರಲ್ಲಿ ಉಚ್ಛಾಟನೆ ಮಾಡಲಾಗಿದೆ.