Saturday, April 26, 2025
Homeಟಾಪ್ ನ್ಯೂಸ್BANKING RULES : ಬ್ಯಾಂಕ್‌ ಗ್ರಾಹಕರೇ ಗಮನಿಸಿ : ಏಪ್ರಿಲ್ 1 ರಿಂದ ಈ ಸೇವೆಗಳ...

BANKING RULES : ಬ್ಯಾಂಕ್‌ ಗ್ರಾಹಕರೇ ಗಮನಿಸಿ : ಏಪ್ರಿಲ್ 1 ರಿಂದ ಈ ಸೇವೆಗಳ ಶುಲ್ಕ ಹೆಚ್ಚಳ !

ನವದೆಹಲಿ: ಪ್ರಸಕ್ತ ಸಾಲಿನ ಅರ್ಥಿಕ ವರ್ಷ ಮುಗಿಯಲು ದಿನಗಣನೆ ಆರಂಭವಾಗಿದ್ದು, 2025 ಏಪ್ರಿಲ್ 1 ರಿಂದ RBI ಬ್ಯಾಂಕಿಂಗ್ ಸೇವೆಗಳ ಶುಲ್ಕಗಳನ್ನು ಪರಿಷ್ಕರಣೆ ಮಾಡಿದೆ.

ಬ್ಯಾಂಕಿಂಗ್ ಸೇವೆಗಳಾದ ATM ಕ್ಯಾಷ್ ವಿತ್‌ಡ್ರಾ ಶುಲ್ಕ ಹೆಚ್ಚಳ,SB ಖಾತೆ ಹೆಚ್ಚು ಹಣಕ್ಕೆ ಹೆಚ್ಚು ಬಡ್ಡಿ ಸೇರಿದಂತೆ ಹಲವು ನಿಯಮಗಳಲ್ಲಿ ಪರಿಷ್ಕರಣೆ ತಂದಿದೆ.

ಎಟಿಎಂ ಹಣ ವಿತ್ ಡ್ರಾಗೆ ಸಂಬಂಧಿಸಿದಂತೆ ವಿಧಿಸುತ್ತಿದ್ದ ಶುಲ್ಕ ಹೆಚ್ಚಳ, ಹಾಗೂ ಕೆಲ ಬ್ಯಾಂಕುಗಳ ಕ್ರೆಡಿಟ್ ಕಾರ್ಡ್ ನಿಯಮಗಳು ಬದಲಾವಣೆಗಳಾಗುತ್ತಿವೆ.ಹಾಗೆಯೇ , ಮೇ 1, 2025 ರಿಂದ ಜಾರಿಗೆ ಬರುವಂತೆ ನಗದು ಹಿಂಪಡೆಯಲು ATM ಇಂಟರ್‌ಚೇಂಜ್ ಅನ್ನು 17 ರೂ.ಗಳಿಂದ 19 ರೂ.ಗಳಿಗೆ ಹೆಚ್ಚಿಸಲು ಅನುಮೋದನೆ ನೀಡಿವೆ. ಇನ್ನು,ಹಣಕಾಸುಯೇತರ ವಹಿವಾಟುಗಳು 7 ರೂ.ಗಳ ಇಂಟರ್‌ಚೇಂಜ್‌ಗೆ ಒಳಪಟ್ಟಿರುತ್ತವೆ.

ಬಹುತೇಕ ಎಲ್ಲಾ ಬ್ಯಾಂಕುಗಳು ಇಂಟರ್‌ಚೇಂಜ್ ಶುಲ್ಕಗಳನ್ನು ಹೆಚ್ಚಿಸಿವೆ. ಎಟಿಎಂಗಳಲ್ಲಿ ಅನುಮತಿಸಿದ ಮಿತಿಗಿಂತ ಹೆಚ್ಚು ಬಾರಿ ಹಣ ವಿತ್‌ಡ್ರಾ ಮಾಡಿದರೆ ಶುಲ್ಕ ಕಟ್ಟಬೇಕಾಗುತ್ತದೆ. ಈ ಶುಲ್ಕದ ದರವನ್ನು ಇದೀಗ ಹೆಚ್ಚಿಸಲಾಗಿದೆ. ಮೇ 1ರಿಂದ ಈ ನಿಯಮ ಜಾರಿಗೆ ಬರಲಿದೆ. ನಿಗದಿತ ಮಿತಿಯನ್ನು ಮೀರಿ ಹೆಚ್ಚು ಬಾರಿ ವಿತ್ ಡ್ರಾ ಮಾಡಿದರೆ ಆಗ ಪ್ರತೀ ಹೆಚ್ಚುವರಿ ಟ್ರಾನ್ಸಾಕ್ಷನ್‌ಗೂ ನಿರ್ದಿಷ್ಟ ಶುಲ್ಕ ಇರುತ್ತದೆ. ಮೇ 1ರಿಂದ ಈ ಶುಲ್ಕದಲ್ಲಿ 1-2 ರೂ ಹೆಚ್ಚಳ ಮಾಡಲಾಗುತ್ತಿದೆ. ಕ್ಯಾಷ್ ವಿತ್‌ಡ್ರಾ ಮಾಡಿದರೆ ವಿಧಿಸುವ ಶುಲ್ಕವನ್ನು 17 ರೂನಿಂದ 19 ರೂಗೆ ಹೆಚ್ಚಿಸಲಾಗುತ್ತಿದೆ. ಅಕೌಂಟ್ ಬ್ಯಾಲನ್ಸ್‌ ಪರಿಶೀಲನೆ ಸೇರಿದಂತೆ ನಾನ್-ಟ್ರಾನ್ಸಾಕ್ಷನ್ ಶುಲ್ಕ 6 ರೂ ಇದ್ದದ್ದು 7 ರೂ ಆಗುತ್ತದೆ ಎಂದು ಹೇಳಲಾಗಿದೆ.

ದೇಶದ ಅತೀ ದೊಡ್ಡ ಬ್ಯಾಂಕಿಂಗ್ ಸಂಸ್ಥೆ SBI, ಪಂಜಾಬ್ ನ್ಯಾಷನಲ್ ಬ್ಯಾಂಕ್, ಕೆನರಾ ಬ್ಯಾಂಕ್ ಮೊದಲಾದ ಪ್ರಮುಖ ಬ್ಯಾಂಕುಗಳು ತಮ್ಮ ಮಿನಿಮಮ್ ಬ್ಯಾಲನ್ಸ್ ನಿಯಮಗಳನ್ನು ಸಹ ಪರಿಷ್ಕರಿಸುತ್ತಿವೆ.

ಹೆಚ್ಚಿನ ಸುದ್ದಿ

error: Content is protected !!