Saturday, March 15, 2025
Homeಕ್ರೈಂCHEATING: ಮೂವರು ಸಿಬ್ಬಂದಿಯಿಂದಲೇ ಬ್ಯಾಂಕಿಗೆ 19 ಲಕ್ಷ ಉಂಡೆನಾಮ..!

CHEATING: ಮೂವರು ಸಿಬ್ಬಂದಿಯಿಂದಲೇ ಬ್ಯಾಂಕಿಗೆ 19 ಲಕ್ಷ ಉಂಡೆನಾಮ..!

ಬಳ್ಳಾರಿ: ಬೇಲಿಯೇ ಎದ್ದು ಹೊಲ ಮೇಯ್ದ ಘಟನೆ ಬಳ್ಳಾರಿಯ ಸಿರಗುಪ್ಪ ಪಟ್ಟಣದ ಬ್ಯಾಂಕ್ ಒಂದರಲ್ಲಿ ನಡೆದಿದೆ. ಬ್ಯಾಂಕ್ ನಲ್ಲಿ ಕೆಲಸ ಮಾಡುತ್ತಿದ್ದ ಮೂವರು ಸಿಬ್ಬಂದಿ ಬರೋಬ್ಬರಿ 19 ಲಕ್ಷ ವಂಚನೆಯನ್ನು ಎಸೆಗಿದ್ದಾರೆ.

ಅಡಮಾನ ವಿಭಾಗದ ಮುಖ್ಯಸ್ಥ ಕಾರ್ತಿಕ್, ಶ್ರೀನಿವಾಸ್ ಮತ್ತು ಅಕ್ಕಸಾಲಿಗ ರಾಮನಗೌಡ ಎಂಬ ಮೂವರು ಬ್ಯಾಂಕ್ ಸಿಬ್ಬಂದಿಗಳು ನಕಲಿ ಚಿನ್ನವಿಟ್ಟು ವಂಚನೆ ಎಸಗಿದ್ದಾರೆ. ಇದೀಗ ಈ ಮೂವರ ವಿರುದ್ಧ ಸಿರುಗುಪ್ಪ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಮೂವರು ಆರೋಪಿಗಳು ವಿವಿಧ ರೀತಿಯಲ್ಲಿ ವಂಚನೆಯನ್ನ ಎಸಗಿದ್ದಾರೆ. ಆರೋಪಿಗಳು ಕಳೆದ ವರ್ಷ ಆಕ್ಸಿಸ್ ಬ್ಯಾಂಕ್ ನಿಂದ ವರ್ಗಾವಣೆಯಾಗಿದ್ದಾರೆ. ವರ್ಗಾವಣೆಯಾದ ಒಂದು ವರ್ಷಗಳ ಬಳಿಕ ಘಟನೆ ಬೆಳಕಿಗೆ ಬಂದಿದೆ. ಹೇಮಾವತಿ ಎನ್ನುವವರ ಹೆಸರಿನಲ್ಲಿ 339 ಗ್ರಾಂ ಬಂಗಾರ ಅಡವಿಟ್ಟು 10.35 ಲಕ್ಷ ರೂ. ಸಾಲ ನೀಡಿದ್ದಾರೆ. ಯಾಸೀನ್ ಎನ್ನುವರು 42 ಗ್ರಾಂ ಚಿನ್ನ ಇಟ್ಟು, ವರ್ಷದ ನಂತರ ಸಾಲ ತೀರಿಸಲು ಬಂದಾಗ ಅಕೌಂಟ್ ಕ್ಲೋಸ್ ಆಗಿ ಚಿನ್ನ ಮಾಯ‌ವಾಗಿದೆ. ಬಸವರಾಜ್ ಎನ್ನುವರು ಚಿನ್ನದ ಸಾಲ ಕಟ್ಟಿದ್ರೂ ಅವರ 4.2 ಗ್ರಾಂ ಉಂಗುರ ಮಾಯವಾಗಿದೆ.

ಹೆಚ್ಚಿನ ಸುದ್ದಿ

error: Content is protected !!