ಬಾಗಲಕೋಟೆ: ರಾಜ್ಯದಲ್ಲಿ ಒಳಮೀಸಲಾತಿ ವಿಚಾರಕ್ಕೆ ಬಂಜಾರ ಲಂಬಾಣಿ ಸಮುದಾಯಗಳು ಕೆಂಡ ಕಾರುತ್ತಿವೆ. ನೆನ್ನೆ ಶಿವಮೊಗ್ಗ ಜಿಲ್ಲೆಯಲ್ಲಿ ಸಮುದಾಯದ ಜನ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮನೆಗೆ ಕಲ್ಲು ತೂರಿ ಆಕ್ರೋಶ ವ್ಯಕ್ತಪಡಿಸಿದ್ರೆ.. ಇಂದು ಬಾಗಲಕೋಟೆಯ ಜಿಲ್ಲೆಯ ಹಲವೆಡೆ ಪ್ರತಿಭಟನೆಯ ಕಿಚ್ಚು ಹತ್ತಿದೆ
ಲಂಬಾಣಿ ತಾಂಡಾದೊಳಗೆ ಬಿಜೆಪಿ ರಾಜಕೀಯ ಮುಖಂಡರಿಗೆ ಪ್ರವೇಶ ನಿಷೇಧಸಿ ತಾಂಡಾದ ಹಲವೆಡೆ ಪೋಸ್ಟ್ ಅಂಟಿಸಲಾಗಿದೆ. ಕರ್ನಾಟಕ ಸರಕಾರ ಕೇಂದ್ರಕ್ಕೆ ಶಿಪಾರಸ್ಸು ಮಾಡಿರುವ ಒಳಮೀಸಲಾತಿ ಹಿಂಪಡೆಯಬೇಕು ಎಂದು ಬ್ಯಾನರ್ ಅಂಟಿಸಿರುವ ಲಂಬಾಣಿ ಜನ ಬಿಜೆಪಪಿ ವಿರುದ್ಧ ಸಿಡಿದೆದ್ದಿದ್ದಾರೆ
ಹುನಗುಂದ ತಾಲ್ಲೂಕಿನ ಅಮೀನಗಢ ತಾಂಡಾ, ಕಮತಗಿ ತಾಂಡಾ, ಬಾಗಲಕೋಟೆ ತಾಲ್ಲೂಕಿನ ಅಚನೂರು , ನೀಲಾನಗರ,ಜಡ್ರಾಮನಕುಂಟೆ,ಲವಳೇಶ್ವರ,ಗುಲಬಾಳ,ಶಿರಗುಪ್ಪಿ ತಾಂಡಾ,ಬೀಳಗಿ ತಾಲ್ಲೂಕಿನ ಸುನಗ ತಾಂಡಾ ಸೇರಿದಂತೆ ವಿವಿಧ ತಾಂಡಾಗಳಲ್ಲಿ ಬ್ಯಾನರ್ ಹಾಕಿ ಆಕ್ರೋಶ ಹೊರಹಾಕಿದ್ದಾರೆ
ಒಳಮೀಸಲಾತಿ ವಿಚಾರಕ್ಕೆ ಸಿಟ್ಟಾಗಿರುವ ಬಂಜಾರ ಸಮುದಾಯದ ಪ್ರತಿಭಟನಾಕಾರರು ಇಲ್ಲಿನ ಬಿಜೆಪಿ ಕಚೇರಿ ಮತ್ತು ರಸ್ತೆಗಳಲ್ಲಿನ ಲೈಟ್ ಕಂಬಗಳಿಗೆ ಕಟ್ಟಲಾಗಿದ್ದ ಬಿಜೆಪಿ ಧ್ಚಜಗಳನ್ನು ಕಿತ್ತು ಹಾಕಿ ಆಕ್ರೋಶ ವ್ಯಕ್ತಪಡಿಸಿದ್ರು. ಇದೇ ವೇಳೆ ಬಿಜೆಪಿಯ ಶಾಸಕ ಹಾಗೂ ಸಂಸದರನ್ನು ತಾಂಡಾದೊಳಗೆ ಕಾಲಿಡಲು ಬಿಡುವುದಿಲ್ಲ ಎಂದು ಬಂಜಾರ ಸಮುದಾಯದವರು ಬಿಜೆಪಿಗೆ ಎಚ್ಚರಿಕೆ ನೀಡಿದ್ರು