Friday, March 13, 2026
Homeಕ್ರೈಂIILEGAL IMMIGRANTS: ಸಿಸಿಬಿ ಪೊಲೀಸರ ಭರ್ಜರಿ ಬೇಟೆ - ಅಕ್ರಮವಾಗಿ ನೆಲೆಸಿದ್ದ ವಿದೇಶಿ ಪ್ರಜೆಗಳು ಅರೆಸ್ಟ್

IILEGAL IMMIGRANTS: ಸಿಸಿಬಿ ಪೊಲೀಸರ ಭರ್ಜರಿ ಬೇಟೆ – ಅಕ್ರಮವಾಗಿ ನೆಲೆಸಿದ್ದ ವಿದೇಶಿ ಪ್ರಜೆಗಳು ಅರೆಸ್ಟ್

ಬೆಂಗಳೂರು : ವಿದೇಶದಿಂದ ಬೆಂಗಳೂರಿಗೆ (Bengaluru) ಬಂದು ತಮ್ಮ ಪಾಸ್ ಪೋರ್ಟ್(Passport) ಹಾಗೂ ವೀಸಾ (Visa) ಅವಧಿ ಅಂತ್ಯಗೊಂಡ ನಂತರವೂ ಅಕ್ರಮವಾಗಿ ಇಲ್ಲೇ ನೆಲೆಸಿದ್ದ ವಿದೇಶಿಗರನ್ನು ಸಿಸಿಬಿ (CCB) ಪೊಲೀಸರು ಬಂಧಿಸಿದ್ದಾರೆ. ಹೀಗೆ ಅಕ್ರಮವಾಗಿ ನೆಲೆಸಿದ್ದ ಒಟ್ಟು ಒಂಭತ್ತು ಮಂದಿ ವಿದೇಶಿ ಪ್ರಜೆಗಳನ್ನು (Illegal immigrants) ಅರೆಸ್ಟ್ ಮಾಡಿದ್ದಾರೆ. ಈ ಪೈಕಿ ನಾಲ್ವರು ನೈಜೀರಿಯಾ ಪ್ರಜೆಗಳು,ಇಬ್ಬರು ಘಾನಾ ಮತ್ತು ಸುಡಾನ್ ನ ಓರ್ವ ಪ್ರಜೆ ಸೇರಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಬೆಂಗಳೂರು ಸೇರಿದಂತೆ ರಾಜ್ಯದ ಬೇರೆ ಬೇರೆ ಕಡೆಗಳಲ್ಲಿ ಇದೇ ರೀತಿ ಸಾಕಷ್ಟು ಸಂಖ್ಯೆಯಲ್ಲಿ ಅಕ್ರಮವಾಗಿ ವಿದೇಶಿಗರು ನೆಲೆಸಿದ್ದಾರೆ.ಹೀಗಾಗಿ ಇಂದು (ಜು.22) ಬೆಂಗಳೂರಿನಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿರುವ ಸಿಸಿಬಿ ಪೊಲೀಸರು ಅಕ್ರಮ ನೆಲೆಸಿಗರನ್ನು ಬಂಧಿಸಿ ಡಿಟೆನ್ಷನ್ ಸೆಂಟರ್ ನಲ್ಲಿ ಇರಿಸಿದ್ದು, ಈಗಾಗಲೇ ಅವರವರ ದೇಶಗಳಿಗೆ ವಾಪಸ್ ಕಳುಹಿಸಲು ಅಧಿಕಾರಿಗಳು ಅಗತ್ಯ ಪ್ರಕ್ರಿಯೆಗಳನ್ನು ಆರಂಭಿಸಿದ್ದಾರೆ.

ಇದನ್ನೂ ಓದಿ : ಮೂವರು ವಿದೇಶಿ ಡ್ರಗ್ ಪೆಡ್ಲರ್‌ಗಳ ಬಂಧನ- 4.5 ಕೋಟಿ ಮೌಲ್ಯದ ಮಾದಕ ದ್ರವ್ಯ ಜಪ್ತಿ

ಸಾಮಾನ್ಯವಾಗಿ ಹೀಗೆ ಅಕ್ರಮವಾಗಿ ನೆಲೆಸುವ ವಿದೇಶಿ ಪ್ರಜೆಗಳು ಬಹುತೇಕ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಾರೆ.ಅದರಲ್ಲೂ ಪ್ರಮುಖವಾಗಿ ನೈಜೀರಿಯಾ ಪ್ರಜೆಗಳು ಮಾದಕವಸ್ತು ಸಾಗಾಟ ಮತ್ತು ಮಾರಾಟ ಜಾಲದಲ್ಲಿ ತೊಡಗಿಸಿಕೊಂಡಿರುತ್ತಾರೆ.ಹೀಗಾಗಿ ಈ ರೀತಿಯ ಜಾಲವನ್ನು ಭೇದಿಸುವ ನಿಟ್ಟಿನಲ್ಲಿ ಸಿಸಿಬಿ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ.

ಇನ್ನು ಹೀಗೆ ಬಂಧಿಸುವ ವಿದೇಶಿ ಪ್ರಜೆಗಳು ಯಾವೆಲ್ಲ ಡ್ರಗ್ ಪೆಡ್ಲಿಂಗ್ ಜಾಲದಲ್ಲಿ ತೊಡಗಿಸಿಕೊಂಡಿದ್ದಾರೆ ಮತ್ತು ನಗರಕ್ಕೆ ಡ್ರಗ್ ಎಲ್ಲಿಂದ ಬರುತ್ತಿದೆ ಎಂಬುದನ್ನು ಪತ್ತೆ ಹಚ್ಚಲು ನೆರವಾಗುತ್ತದೆ.ಆದ್ರೆ ಭಾರತದ ಕಾನೂನಿನ ಪ್ರಕಾರ ವಿದೇಶಿ ಪ್ರಜೆಗಳನ್ನು ಕಾನೂನು ಪ್ರಕ್ರಿಯೆಗೆ ಒಳಪಡಿಸಲು ವಿದೇಶಿ ಕಾನೂನುಗಳ ತೊಡಕು ಎದುರಾಗುತ್ತದೆ. ಹೀಗಾಗಿ ಈ ಎಲ್ಲರನ್ನೂ ಪತ್ತೆಹಚ್ಚಿ ಸಾಧ್ಯವಷ್ಟು ಮಾಹಿತಿ ಕಲೆಹಾಕಿ,ತಡ ಮಾಡದೆ ವಿದೇಶಕ್ಕೆ ವಾಪಸ್ಸು ಕಳುಹಿಸುವ ಪ್ರಕ್ರಿಯೆಯನ್ನು ಕೈಗೊಳ್ಳಲಾಗುತ್ತದೆ.

ಕೇವಲ ಅಕ್ರಮ ಚಟುವಟಿಗಳಲ್ಲಿ ತೊಡಗುವುದಲ್ಲದೆ ಕಾನೂನು ಸುವ್ಯವಸ್ಥೆಗೂ ಧಕ್ಕೆ ತರುವ, ಶಾಂತಿ ಸುವ್ಯವಸ್ಥೆಗೂ ಭಂಗ ತರುವ ಕಿಡಿಕೇಡಿ ಕೃತ್ಯಗಳಲ್ಲಿ ಭಾಗಿಯಾಗಿ ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿವುದೂ ಉಂಟು.ಹೀಗಾಗಿ ಸಿಸಿಬಿ ಪೊಲೀಸರು ಅಕ್ರಮವಾಗಿ ನೆಲೆಸಿರುವ ವಿದೇಶಿಗರ ಮೇಲೆ ಹದ್ದಿನ ಕಣ್ಣಿಟ್ಟಿದ್ದು, ಕಾರ್ಯಾಚರಣೆ ಮುಂದುವರೆಸಿದ್ದಾರೆ.

ಹೆಚ್ಚಿನ ಸುದ್ದಿ

Change Language »
error: Content is protected !!