Friday, March 13, 2026
Homeಟಾಪ್ ನ್ಯೂಸ್BALOCHISTAN: ಕೆಳಗಿಳಿಯಿತು ಪಾಕಿಸ್ತಾನ ಧ್ವಜ- ಸ್ವಾತಂತ್ರ್ಯ ಘೋಷಿಸಿಕೊಳ್ಳುತ್ತಾ ಬಲೂಚಿಸ್ತಾನ?: VIDEO

BALOCHISTAN: ಕೆಳಗಿಳಿಯಿತು ಪಾಕಿಸ್ತಾನ ಧ್ವಜ- ಸ್ವಾತಂತ್ರ್ಯ ಘೋಷಿಸಿಕೊಳ್ಳುತ್ತಾ ಬಲೂಚಿಸ್ತಾನ?: VIDEO

ಇಸ್ಲಾಮಾಬಾದ್: ಭಾರತ ಮತ್ತು ಪಾಕಿಸ್ತಾನ ಮಧ್ಯೆ ಯುದ್ಧ ಸನ್ನಿವೇಶ ಸೃಷ್ಟಿಯಾಗಿದೆ. ಈ ಸಂಘರ್ಷ ಕಾಲದಲ್ಲೇ ಬಲೂಚಿಸ್ತಾನ ಲಿಬರೇಷನ್‌ ಆರ್ಮಿ ಅಕ್ಷರಶಃ ಅಬ್ಬರಿಸುತ್ತಿದೆ.

ಭಾರತದ ದಾಳಿಯನ್ನೇ ಸುಸಂದರ್ಭ ಎಂದು ಭಾವಿಸಿರುವ ಬಲೂಚ್ ಲಿಬರೇಷನ್ ಆರ್ಮಿ, ಪ್ರತ್ಯೇಕ ದೇಶದ ಹೋರಾಟವನ್ನು ತೀವ್ರಗೊಳಿಸಿದೆ. ಬಿಎಲ್​ಎ ಹೋರಾಟ ಪಾಕಿಸ್ತಾನಕ್ಕೆ ಮತ್ತಷ್ಟು ಸಂಕಷ್ಟ ತಂದೊಡ್ಡಿದೆ.

ಭಾರತದ ಆಪರೇಷನ್ ಸಿಂಧೂರ, ಡ್ರೋನ್‌ ದಾಳಿಗಳ ನಡುವೆ ಬಲೂಚಿಸ್ತಾನದಲ್ಲಿ ಹಲವೆಡೆ ಪಾಕ್ ಧ್ವಜಗಳಿಗೆ ಗುಡ್ ಬೈ ಹೇಳುತ್ತಿದೆ. ಪಾಕಿಸ್ತಾನದ ಧ್ವಜಗಳನ್ನು ಇಳಿಸಿ ಬಲೂಚಿಸ್ತಾನದ ಧ್ವಜ ಹಾರಿಸುತ್ತಿದೆ. ಬಲೂಚಿಸ್ತಾನ ಪರ ಘೋಷಣೆ ಮೊಳಗುತ್ತಿದೆ.

ಪಾಕಿಸ್ತಾನದಿಂದ ನಮ್ಮನ್ನು ಬೇರ್ಪಡಿಸಿಕೊಳ್ಳುತ್ತೇವೆ. ವಿವಿಧ ದೇಶಗಳು ರಾಜತಾಂತ್ರಿಕ ಕಚೇರಿಗಳನ್ನು ಪಾಕಿಸ್ತಾನದಿಂದ ವಾಪಸ್ ಪಡೆದು, ಹೊಚ್ಚ ಹೊಸ ದೇಶವಾದ ಬಲೂಚಿಸ್ತಾನಕ್ಕೆ ಸ್ಥಳಾಂತರಿಸುವ ಸಮಯ ಬಂದಿದೆ ಎಂದು ಬಿಎಲ್​ಎ ಘೋಷಿಸಿದೆ.

ಈಗಾಗಲೇ ಬಲೂಚ್ ಲಿಬರೇಷನ್ ಆರ್ಮಿ ಪಾಕಿಸ್ತಾನ ಸೈನಿಕರನ್ನು ಗುರಿಯಾಗಿಟ್ಟುಕೊಂಡು ದಾಳಿ ಮಾಡುತ್ತಿದೆ. ಇದೀಗ ಪಾಕಿಸ್ತಾನಿ ಧ್ವಜಗಳನ್ನೇ ಕಿತ್ತೆಸೆಯುತ್ತಿದ್ದು, ಪಾಕಿಸ್ತಾನಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಹೆಚ್ಚಿನ ಸುದ್ದಿ

Change Language »
error: Content is protected !!