Wednesday, August 19, 2026
Homeಕ್ರೈಂBREAKING NEWS : ನಟ ದರ್ಶನ್ ಜಾಮೀನು ಅರ್ಜಿ ಮುಂದೂಡಿದ ಸುಪ್ರೀಂ ಕೋರ್ಟ್

BREAKING NEWS : ನಟ ದರ್ಶನ್ ಜಾಮೀನು ಅರ್ಜಿ ಮುಂದೂಡಿದ ಸುಪ್ರೀಂ ಕೋರ್ಟ್

ನವದೆಹಲಿ : ರೇಣುಕಾ ಸ್ವಾಮಿ (renukaswamy case) ಕೊಲೆ ಪ್ರಕರನದಲ್ಲಿ ಎ2 ಆರೋಪಿಯಾಗಿರುವ ನಟ ದರ್ಶನ್‌ (actor darshan) ಜಾಮೀನು ಅರ್ಜಿಯನ್ನು ಜು. 24 ಕ್ಕೆ ಮುಂದೂಡಲಾಗಿದೆ. ನಟ ದರ್ಶನ್ ಮತ್ತು ಇತರರು ಸೇರಿ ರೇಣುಕಾಸ್ವಾಮಿ ಕೊಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಅವರ ಜಾಮೀನು ರದ್ದು ಮಾಡುವಂತೆ ಕೋರಿದ್ದ ಅರ್ಜಿಯ ವಿಚಾರಣೆ  ನಡೆಸಿದ ಸುಪ್ರೀಂ ಕೋರ್ಟ್ (supreme court) ನ್ಯಾಯಾಧೀಶರು ಪ್ರಕರಣವನ್ನು ಗುರುವಾರಕ್ಕೆ ಮುಂದೂಡಿ ಆದೇಶ ಹೊರಡಿಸಿದ್ದಾರೆ.

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್‌ಗೆ ಜಾಮೀನು ಸಿಕ್ಕಿದೆ. ಇದನ್ನ ರದ್ದು ಮಾಡುವಂತೆ ರಾಜ್ಯ ಸರ್ಕಾರ ಮೇಲ್ಮನವಿ ಸಲ್ಲಿಕೆ ಮಾಡಿತ್ತು, ಅದರಂತೆ ಇದೀಗ ಈ ಅರ್ಜಿಯನ್ನ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಪರ್ದಿವಾಲಾ, ನ್ಯಾಯಮೂರ್ತಿ ಮಹದೇವನ್ ನೇತೃತ್ವದ ಪೀಠ ವಿಚಾರಣೆ ನಡೆಸಿತು.

ದರ್ಶನ್ ಹಾಗೂ ಇತರರ ಜಾಮೀನು ರದ್ದು ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಜುಲೈ 22 ಕ್ಕೆ ಮುಂದೂಡಿತ್ತು. ಬೇಲ್‌ ರದ್ದು ಕೋರಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ದರ್ಶನ್‌ ಬಂಧನಕ್ಕೆ ಕಾರಣಗಳನ್ನು ಕೇಳಿ ತೀರ್ಪು ಕಾಯ್ದಿರಿಸಲಾಗಿತ್ತು.

ಇದನ್ನೂ ಓದಿ : ಶೂಟಿಂಗ್ ಜೊತೆ ಪಾರ್ಟಿಯಲ್ಲೂ ದರ್ಶನ್ ಬ್ಯುಸಿ, ಇತ್ತ ಪವಿತ್ರಾಗೌಡ ಸಹ ಫುಲ್ ಸೌಂಡ್

ದರ್ಶನ್, ಪವಿತ್ರಾಗೌಡ ಸೇರಿದಂತೆ ಏಳು ಜನರ ವಿರುದ್ಧ ದಾಖಲಾಗಿರುವ ಕೊಲೆ ಕೇಸ್‌ನಲ್ಲಿ ಕರ್ನಾಟಕ ಹೈಕೋರ್ಟ್ ಬೇಲ್‌ ನೀಡಿತ್ತು. ಇದನ್ನು ಪ್ರಶ್ನಿಸಿ ಬೆಂಗಳೂರು ಪೊಲೀಸರು ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದರು. ಅದರಂತೆ ನಿನ್ನೆ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ವಾದ ಪ್ರತಿವಾದ ಆಲಿಸಿ ಜುಲೈ 22ಕ್ಕೆ ತೀರ್ಪು ನೀಡಲಿದೆ.

2024ರ ಜೂ.8ರಂದು ರೇಣುಕಾಸ್ವಾಮಿ ಅವರನ್ನು ಅಪಹರಿಸಿ ಕೊಲೆ ಮಾಡಿದ್ದಾರೆ ಎಂಬ ಆರೋಪದಡಿ ದರ್ಶನ್, ಪವಿತ್ರಾ ಗೌಡ ಸೇರಿದಂತೆ 17 ಮಂದಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದರು. ಬಂಧನವಾಗಿ 6 ತಿಂಗಳ ಬಳಿಕ, 2024ರ ಡಿ.13 ರಂದು ಹೈಕೋರ್ಟ್‌ ಅವರಿಗೆ ಜಾಮೀನು ನೀಡಿತ್ತು.

ಇದರ ನಡುವೆಯೇ ಡೆವಿಲ್ ಸಿನೆಮಾದ ಅಂತಿಮ ಹಂತದ ಶೂಟಿಂಗ್ ಗಾಗಿ ಕುಟುಂಬದ ಜೊತೆ ನಟ ದರ್ಶನ್ ಥಾಯ್ಲೆಂಡ್​ಗೆ ಹಾರಿದ್ದು, ಸದ್ಯ ಡೆವಿಲ್‌ ಶೂಟಿಂಗ್‌ನಲ್ಲೇ ಬ್ಯುಸಿಯಾಗಿದ್ದಾರೆ. ಚಿತ್ರತಂಡದ ಜೊತೆ ಡೆವಿಲ್ ಚಿತ್ರೀಕರಣಕ್ಕೆ ತೆರಳಿದ ದರ್ಶನ್ ಫೋಟೋ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.ಏರ್ ಪೋರ್ಟ್‌‌ನಲ್ಲಿ ಫ್ಯಾಮಿಲಿ ಜೊತೆ ನಟ ದರ್ಶನ್ ಕಾಣಿಸಿಕೊಂಡಿದ್ದಾರೆ.

ಹೆಚ್ಚಿನ ಸುದ್ದಿ

Change Language »
error: Content is protected !!