ಬಾಗಲಕೋಟೆ : ನಿನ್ನೆಯಷ್ಟೇ ಸ್ವಾಮೀಜಿ ಓರ್ವರ ಕಾಲಿಗೆ ಸಮವಸ್ತ್ರದಲ್ಲೇ ಪೊಲೀಸರು ನಮಸ್ಕಾರ ಮಾಡಿ ನೋಟು ಪಡೆದುಕೊಂಡ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಅಲ್ಲದೇ ನೆಟ್ಟಿಗರ ಕೆಂಗಣ್ಣಿಗೂ ಗುರಿಯಾಗಿತ್ತು. ವಿಡಿಯೋ ವೈರಲ್ ಬೆನ್ನಲ್ಲೇ ಆರು ಜನ ಪೊಲೀಸರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.
ಇವತ್ತಿನ ಕಾರ್ಯಾಂಗ ವ್ಯವಸ್ಥೆ ಈ ರೀತಿಯ ಧಾರ್ಮಿಕ ಗುಲಾಮಿಗಿರಿಯಲ್ಲಿರೋದ್ರಿಂದ ನ್ಯಾಯಾಂಗ ವ್ಯವಸ್ಥೆ ಉಳ್ಳವರ ಪಾಲಾಗುತ್ತಿದೆ..#Police #Government pic.twitter.com/J0lQliNjLn
— DEEPU GOWDRU (@DEEPUVAJRAMUNI) March 13, 2025
ವಿಡಿಯೋದಲ್ಲಿ ಸಿದ್ದನಕೊಳ್ಳ ಶಿವಕುಮಾರ ಸ್ವಾಮೀಜಿ ಎಂದು ತಿಳಿದುಬಂದಿದ್ದು, ಕಾಲಿಗೆ ಪೊಲೀಸರು ನಮಸ್ಕಾರ ಮಾಡಿ, ಹಣ ಪಡೆದಿದ್ದ ದೃಶ್ಯ ಸೆರೆಯಾಗಿತ್ತು. ಸ್ವಾಮೀಜಿ ಏಕವಚನದಲ್ಲೇ ಬೈಯುತ್ತಲೇ ಪೊಲೀಸರು ಕಾಲಿಗೆ ಬಿದ್ದಾಗ ಆಶೀರ್ವಾದವೂ ಮಾಡಿದ್ದರು.
ಈ ಘಟನೆಗೆ ಸಂಬಂಧಿಸಿ ಇದೀಗ ಆರು ಜನ ಪೊಲೀಸ್ ಅಧಿಕಾರಿಗಳನ್ನು ಬಾದಾಮಿಯಿಂದ ವಿವಿಧ ಠಾಣೆಗಳಿಗೆ ವರ್ಗಾವಣೆ ಮಾಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಆದೇಶ ಹೊರಡಿಸಿದ್ದಾರೆ. ಎಎಸ್ಐ ಜಿಬಿ ದಳವಾಯಿ, ಡಿಜೆ ಶಿವಪುರ, ನಾಗರಾಜ ಅಂಕೋಲೆ, ಜಿಬಿ ಅಂಗಡಿ, ರಮೇಶ್ ಈಳಗೇರ, ರಮೇಶ್ ಹುಲ್ಲೂರು ಹೀಗೆ ಎಲ್ಲರನ್ನು ನಾನಾ ಠಾಣೆಗಳಿಗೆ ವರ್ಗಾವಣೆ ಮಾಡಲಾಗಿದೆ.