Saturday, May 16, 2026
Homeಕ್ರೀಡೆBABAR AZAM : ರೋಹಿತ್‌ ಶರ್ಮಾ ಶೈಲಿಯ ಕೆಟ್ಟ ಅನುಕರಣೆ - ಟ್ರೋಲ್‌ ಆದ ಬಾಬರ್‌...

BABAR AZAM : ರೋಹಿತ್‌ ಶರ್ಮಾ ಶೈಲಿಯ ಕೆಟ್ಟ ಅನುಕರಣೆ – ಟ್ರೋಲ್‌ ಆದ ಬಾಬರ್‌ ಅಜಮ್‌! VIDEO

ಲಾಹೋರ್ : ಲಾಹೋರ್‌ನ ಗಡಾಫಿ ಕ್ರೀಡಾಂಗಣದಲ್ಲಿ ನಡೆದ ಪಾಕಿಸ್ತಾನ್ ಸೂಪರ್ ಲೀಗ್ (PSL) 2026ರ ರೋಚಕ ಫೈನಲ್ ಪಂದ್ಯದಲ್ಲಿ ಬಾಬರ್ ಅಜಮ್ (Babar Azam) ನಾಯಕತ್ವದ ಪೆಶಾವರ್ ಝಲ್ಮಿ ತಂಡ ಭರ್ಜರಿ ಜಯ ಸಾಧಿಸಿ ಚಾಂಪಿಯನ್ ಪಟ್ಟಕ್ಕೇರಿದೆ. ಆದರೆ, ತಂಡದ ಈ ಐತಿಹಾಸಿಕ ಗೆಲುವಿಗಿಂತ ನಾಯಕ ಬಾಬರ್ ಅಜಮ್ ಅವರು ಟ್ರೋಫಿ ಸ್ವೀಕರಿಸುವ ವೇಳೆ ಮಾಡಿದ ಸಂಭ್ರಮಾಚರಣೆ ಈಗ ಸಾಮಾಜಿಕ ಜಾಲತಾಣಗಳಲ್ಲಿ (Video Viral) ಭಾರಿ ಚರ್ಚೆಗೆ ಗ್ರಾಸವಾಗಿದೆ.

ರೋಹಿತ್ ಶರ್ಮಾ ನಡಿಗೆ ಅನುಕರಿಸಿದ ಬಾಬರ್

ಹೈದರಾಬಾದ್ ಕಿಂಗ್ಸ್‌ಮೆನ್ ವಿರುದ್ಧದ ಗೆಲುವಿನ ನಂತರ ವೇದಿಕೆಯ ಮೇಲೆ ಟ್ರೋಫಿ ಪಡೆಯಲು ಆಗಮಿಸಿದ ಬಾಬರ್ ಅಜಮ್, ಭಾರತದ ಮಾಜಿ ನಾಯಕ ರೋಹಿತ್ ಶರ್ಮಾ ಅವರ ಐಕಾನಿಕ್ ಸ್ಟೈಲ್ ಅನ್ನು ಅನುಕರಿಸಲು ಪ್ರಯತ್ನಿಸಿದರು. 

2024ರ ಟಿ20 ವಿಶ್ವಕಪ್ ಗೆದ್ದಾಗ ರೋಹಿತ್ ಶರ್ಮಾ ಮಾಡಿದ್ದ ಆ ಪ್ರಸಿದ್ಧ ‘ಗ್ಲೋ ಮೋಷನ್’ ಅಥವಾ ‘ಸ್ಟೋ ವಾಕ್’ ನಡಿಗೆಯನ್ನು ಬಾಬರ್ ಕಾಪಿ ಮಾಡಲು ಹೋಗಿ ಎಡವಟ್ಟಾಗಿದೆ. ಬಾಬರ್ ಅವರ ಅತಿರೇಕದ ಹಾವಭಾವಗಳು ನೋಡುಗರಿಗೆ ವಿಚಿತ್ರವಾಗಿ ಕಂಡಿದ್ದು, ನೆಟ್ಟಿಗರು ಇದನ್ನು ಕಂಡು ಹಿಗ್ಗಾಮುಗ್ಗಾ ಕಾಲೆಳೆಯುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಬಾಬರ್ ಅವರ ಈ ವಿಡಿಯೋ ಇಟ್ಟುಕೊಂಡು ಭಾರಿ ಮೀಮ್‌ಗಳು ಹರಿದಾಡುತ್ತಿವೆ.

ಪಂದ್ಯದ ಮುಖ್ಯಾಂಶಗಳು

ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಪೆಶಾವರ್ ಝಲ್ಮಿ ತಂಡದ ನಿರ್ಧಾರ ಸಫಲವಾಯಿತು. ಶಿಸ್ತಿನ ಬೌಲಿಂಗ್ ದಾಳಿ ನಡೆಸಿದ ಪೆಶಾವರ್, ಹೈದರಾಬಾದ್ ಕಿಂಗ್ಸ್‌ಮೆನ್ ತಂಡವನ್ನು ಕೇವಲ 129 ರನ್‌ಗಳಿಗೆ ಆಲೌಟ್ ಮಾಡಿತು. ಪೆಶಾವರ್ ಪರ ಆ್ಯರನ್ ಹಾರ್ಡಿ 4 ವಿಕೆಟ್ ಪಡೆಯುವ ಮೂಲಕ ತಂಡಕ್ಕೆ ಆಸರೆಯಾದರು.

ನಂತರ 130 ರನ್‌ಗಳ ಸಾಧಾರಣ ಗುರಿ ಬೆನ್ನಟ್ಟಿದ ಪೆಶಾವರ್ ತಂಡ, 15.2 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ ಗೆಲುವಿನ ಗುರಿ ತಲುಪಿತು. ಆ್ಯರನ್ ಹಾರ್ಡಿ (ಔಟಾಗದೆ 56) ಮತ್ತು ಅಬ್ದುಲ್ ಸಮದ್ (48) ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಪೆಶಾವರ್ ತಂಡ 2026ರ ಪಿಎಸ್‌ಎಲ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.

ಗೆಲುವಿನ ಬಗ್ಗೆ ನಾಯಕ ಬಾಬರ್ ಅಜಮ್ ಪ್ರತಿಕ್ರಿಯಿಸಿದ್ದು, ಇದು ನನಗೆ ಮತ್ತು ಅಭಿಮಾನಿಗಳಿಗೆ ಸಂದ ದೊಡ್ಡ ಜಯ. ಟೂರ್ನಿಯುದ್ದಕ್ಕೂ ನಮ್ಮ ತಂಡ ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ಎಂಬ ಮೂರೂ ವಿಭಾಗಗಳಲ್ಲಿ ಶಿಸ್ತಿನ ಪ್ರದರ್ಶನ ನೀಡಿದೆ. ಪ್ರತಿಯೊಬ್ಬ ಆಟಗಾರನೂ ಮ್ಯಾನೇಜ್‌ಮೆಂಟ್ ನೀಡಿದ ಯೋಜನೆಯನ್ನು ಅಚ್ಚುಕಟ್ಟಾಗಿ ಜಾರಿಗೆ ತಂದಿದ್ದಾರೆ ಎಂದು ಸಂತಸ ಹಂಚಿಕೊಂಡಿದ್ದಾರೆ.

ಹೆಚ್ಚಿನ ಸುದ್ದಿ

Change Language »
error: Content is protected !!