Monday, February 9, 2026
Homeಕ್ರೈಂREPUBLIC DAY : ದಯಾಮರಣದ ಬೇಡಿಕೆಯಿಟ್ಟಿದ್ದ ಆಟೋ ಡ್ರೈವರ್‌ಗೆ ಬಂತು ಗಣರಾಜ್ಯೋತ್ಸವಕ್ಕೆ ಆಹ್ವಾನ !

REPUBLIC DAY : ದಯಾಮರಣದ ಬೇಡಿಕೆಯಿಟ್ಟಿದ್ದ ಆಟೋ ಡ್ರೈವರ್‌ಗೆ ಬಂತು ಗಣರಾಜ್ಯೋತ್ಸವಕ್ಕೆ ಆಹ್ವಾನ !

ಕಾನ್ಪುರ: ಟ್ರಾಫಿಕ್ ಪೊಲೀಸ್ ಸಿಬ್ಬಂದಿಯಿಂದ ದೌರ್ಜನ್ಯಕ್ಕೆ ಒಳಗಾಗಿ ದೂರು ನೀಡಿದ್ದರು ನ್ಯಾಯ ಸಿಗದಿದ್ದಾಗ ದಯಾಮರಣಕ್ಕೆ ಅರ್ಜಿ ಸಲ್ಲಿಸಿದ ಆಟೋ ಡ್ರೈವರ್‌ಗೆ ಜಿಲ್ಲಾಧಿಕಾರಿ ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಆಹ್ವಾನಿಸುವ ಮೂಲಕ ಗೌರವಿಸಿದ್ದಾರೆ.

ಕಾನ್ಪುರದ ಹನುಮಂತ್ ವಿಹಾರ್‌ನ ಚಾಲಕ ರಾಕೇಶ್ ಕುಮಾರ್ ಸೋನಿ ಅವರು ದಯಾಮರಣಕ್ಕೆ ಅನುಮತಿ ಕೋರಿ ಕಾನ್ಪುರ ಜಿಲ್ಲಾ ಮ್ಯಾಜಿಸ್ಟ್ರೇಟ್ ಜಿತೇಂದ್ರ ಪ್ರತಾಪ್ ಸಿಂಗ್ ಅವರಿಗೆ ಪತ್ರ ಬರೆದಿದ್ದರು. ಈ ಬಗ್ಗೆ ಕೂಲಂಕಶವಾಗಿ ಪರಿಶೀಲಿಸಿದ ಜಿಲ್ಲಾಧಿಕಾರಿ, ಆಟೋ ಡ್ರೆöÊವರ್‌ಗೆ ಅನ್ಯಾಯವಾಗಿರುವುದು ಗಮನಕ್ಕೆ ಬಂದಿದೆ. ಹೀಗಾಗಿ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಹ್ವಾನಿಸಿ ಗೌರವಿಸುವ ನಿರ್ಧಾರಕ್ಕೆ ಬಂದಿದ್ದಾರೆ.

ದಯಾಮರಣಕ್ಕೆ ಬೇಡಿಕೆ ಇಟ್ಟಿದ್ದೇಕೆ ?

ಕಳೆದ ಡಿ.30, 2024ರಂದು ನಗರದ ನೌಬಸ್ತಾ ಜಂಕ್ಷನ್‌ನಲ್ಲಿ ಆಟೋ ಡ್ರೈವರ್ ರಾಕೇಶ್ ಕುಮಾರ್ ಸೋನಿ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿಕೊಂಡಿದ್ದಾರೆ. ಸಾಕಷ್ಟು ಸಮಯ ಕಾದರೂ ಟ್ರಾಫಿಕ್ ಸಮಸ್ಯೆ ಬಗೆ ಹರಿಯದೆ ಇದ್ದಾಗ ಸ್ವತಃ ಅವರೇ ಆಟೋದಿಂದ ಕೆಳಗೆ ಇಳಿದು ಟ್ರಾಫಿಕ್ ಜಾಮ್‌ನ್ನು ನಿಯಂತ್ರಿಸಲು ಮುಂದಾಗಿದ್ದಾರೆ. ಇದನ್ನು ಗಮನಿಸಿದ ಟ್ರಾಫಿಕ್ ಇನ್‌ಚಾರ್ಜ್ ಈಶ್ವರ್ ಸಿಂಗ್, ಆಟೋ ಡ್ರೈವರ್‌ನ್ನು ಹೊಡೆದು, ಅವಾಚ್ಯವಾಗಿ ನಿಂದಿಸಿ, ಆಟೋಗೆ ಹಾನಿ ಮಾಡಿದ್ದಾರೆ.

ಇದರಿಂದ ಬೇಸತ್ತ ಆಟೋ ಡ್ರೆöÊವರ್, ಮೇಲಿನ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ. ಆದರೆ, ಯಾವ ಅಧಿಕಾರಿಗಳಿಂದಲೂ ಅವರಿಗೆ ನ್ಯಾಯ ಸಿಗದೆ, ಅವಮಾನಿತರಾಗಿದ್ದಾರೆ. ಹೀಗಾಗಿ ಅವರು ದಯಾಮರಣ ಕೋರಿ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದರು. ಇದನ್ನು ಗಮನಿಸಿದ ಜಿಲ್ಲಾಧಿಕಾರಿ ಆಟೋ ಡ್ರೆöÊವರ್‌ನ್ನು ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲು ನಿರ್ಧಾರ ಮಾಡಿದ್ದಾರೆ.

ಹೆಚ್ಚಿನ ಸುದ್ದಿ

Change Language »
While viewing the website, tap in the menu bar. Scroll down the list of options, then tap Add to Home Screen.
Use Safari for a better experience.
error: Content is protected !!