ಪರ್ತ್ ಮೂಲದ 57 ವರ್ಷದ ಮಹಿಳೆಯೊಬ್ಬರು ಡೇಟಿಂಗ್ ಆ್ಯಪ್ ನಲ್ಲಿ ಬರೋಬ್ಬರಿ 4.3 ಕೋಟಿ ರೂಪಾಯಿ ವಂಚನೆಗೆ ಒಳಗಾಗಿ ಇದೀಗ ಎಲ್ಲವನ್ನೂ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ.
57 ವರ್ಷದ ಆನೆಟ್ ಫೋರ್ಡ್ ವಂಚನೆಗೆ ಒಳಗಾದ ಮಹಿಳೆ. 2018 ರಲ್ಲಿ ಆಕೆಯ ಪತಿ ಬೇರೊಂದು ಮಹಿಳೆಯೊಂದಿಗೆ ಹೋದ ಹಿನ್ನಲೆ ತಮ್ಮ 33 ವರ್ಷದ ದಾಂಪತ್ಯ ಜೀವನ ಕೊನೆಗೊಂಡಿದೆ. ಇದರಿಂದ ಬೇಸರಗೊಂಡಿದ್ದ ಅನೆಟ್ ಅವರು ಹೊಸ ಜೀವನ ನಡೆಸಲು ಮುಂದಾಗಿದ್ದಾರೆ.
ಹೊಸ ಜೀವನಕ್ಕೆ ಕಾಲಿಡಲು ಮುಂದಾಗಿದ್ದ ಆನೆಟ್ ಗೆ ಆನ್ಲೈನ್ ನಲ್ಲಿ ಪ್ಲೆಂಟಿ ಆಫ್ ಫಿಶ್ ಎಂಬ ಡೇಟಿಂಗ್ ಸೈಟ್‌ಗೆ ಹೋಗಿ ಅಲ್ಲಿ ವಿಲಿಯಂ ಎಂಬಾತನೊಂದಿಗೆ ಮಾತುಕತೆ ನಡೆಸುತ್ತಿದ್ದರು. ಡೇಟಿಂಗ್ ಆ್ಯಪ್ ನಲ್ಲಿ ಇಬ್ಬರು ಕನೆಕ್ಟ್ ಅದ ಕೆಲವೇ ದಿನಗಳಲ್ಲಿ ಆನೆಟ್ ಅವರ ಸಂಪೂರ್ಣ ವಿಶ್ವಾಸವನ್ನು ವಂಚಕ ವಿಲಿಯಂ ಗಳಿಸಿದ..
ಇದನ್ನೇ ಬಂಡವಾಳವಾಗಿಸಿಕೊಂಡ ವಿಲಿಯಂ ನಾನು ಆಸ್ಪತ್ರೆಯಲ್ಲಿ ದಾಖಲಾಗಿದ್ದೇನೆ ನನ್ನ ಎಲ್ಲ ಹಣ ಕಳ್ಳತನವಾಗಿದೆ ಎಂದು ಹೇಳಿದ ಅಷ್ಟೇ ಅಲ್ಲದೆ ಆಸ್ಪತ್ರೆಯ ಬಿಲ್ ಹಾಗೂ ನಕಲಿ ನ್ಯೂಸ್ ಅನ್ನು ತಾನೇ ಮಾಡಿ ಆಕೆಗೆ ಕಳಿಸಿದ್ದಾನೆ. ಇದನ್ನು ನೋಡಿದ ಆನೆಟ್ ನಿಜವೆಂದು ನಂಬಿ ವಂಚಕನಿಗೆ ಹಂತ ಹಂತವಾಗಿ 1.6 ಕೋಟಿ ರೂಪಾಯಿ ನೀಡಿದಳು.
ಈ ವೇಳೆ ವಂಚನೆ ಹೋಗಿರುವುದನ್ನು ತಿಳಿದ ಆನೆಟ್ ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ, ಇದಾಗಿ ಕೆಲ ವರ್ಷಗಳ ನಂತರ ಆನೆಟ್ ಫೋರ್ಡ್ ಫೇಸ್ ಬುಕ್ ನಲ್ಲಿ ನೆಲ್ಸನ್ ಎಂಬ ಮತ್ತೋರ್ವ ವಂಚಕನ ಕೈಗೆ ಸಿಕ್ಕಿ ಬಿದ್ದರು.
ನನ್ನ ಸ್ನೇಹಿತ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಎಫ್‌ಬಿಐ) ನಲ್ಲಿ ತನ್ನ ಸ್ನೇಹಿತನಿದ್ದಾನೆ ಮತ್ತು ಯಾವುದೋ ಪ್ರಕರಣಕ್ಕೆ ಸಂಬಂಧ ತನಿಖೆಗೆ ಸಹಾಯ ಮಾಡಲು ಅವನಿಗೆ $2500 ಅಗತ್ಯವಿದೆ ದಯವಿಟ್ಟು ನೀಡಿ ಸದ್ಯದಲ್ಲೇ ಹಣ ವಾಪಸ್ ಕೊಡುವುದಾಗಿ ತಿಳಿಸಿದ್ದಾನೆ.
ಆರಂಭದಲ್ಲಿ ನಿರಾಕರಿಸಿದ ಆನೆಟ್ ಬಳಿಕ ಆತನ ಒತ್ತಾಯಕ್ಕೆ ಮಣಿದು ಹಣವನ್ನು ನೀಡಿದ್ದಾಳೆ. ಬಳಿಕ ಹಣವನ್ನು ಬಿಟ್‌ಕಾಯಿನ್ ಎಟಿಎಂಗೆ ಜಮಾ ಮಾಡುವಂತೆ ತಿಳಿಸಿದ್ದಳು. ಆದರೆ ಆನೆಟ್ ಅವರ ಖಾತೆಯಿಂದ ಆಕೆಗೆ ತಿಳಿಯದಂತೆ ಹಣ ಆಕೆಯ ಖಾತೆಯಲ್ಲಿದ್ದ 1.5 ಕೋಟಿ ಹಣ ವಂಚಕರ ಪಾಲಾಗಿತ್ತು.
ಇದೀಗ ಬರೋಬ್ಬರಿ 4.3 ಕೋಟಿ ಹಣ ಕಳೆದುಕೊಂಡು ಬೀದಿಗೆ ಬಿದ್ದಿರುವ ಅನೆಟ್ ಆಸ್ಟ್ರೇಲಿಯನ್ನರು ಇಂತಹ ವಂಚನೆಗಳಿಗೆ ಬಲಿಯಾಗಬೇಡಿ ಎಂದು ಜನರಲ್ಲಿ ಕೇಳಿಕೊಳ್ಳುತ್ತಿದ್ದಾರೆ.