ಬೆಂಗಳೂರು: ಬಾಗಲಕೋಟೆ ಜಿಲ್ಲಾಧ್ಯಕ್ಷ ನಂಜಯ್ಯನಮಠ್ ಹಾಗೂ ಮಾಜಿ ಸಚಿವ ತಿಮ್ಮಾಪೂರ್ ಮಾತಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗಿದ್ದು ಸಾಕಷ್ಟು ಕೋಲಾಹಲಕ್ಕೆ ಕಾರಣವಾಗಿದೆ. ಸದ್ಯ, ಆಡಿಯೋ ವೈರಲ್ (audio viral) ಸಂಬಂಧ ಆರ್.ಬಿ ತಿಮ್ಮಾಪುರ (rb thimmapur)ಅವರು ಸ್ಪಷ್ಟನೆ ನೀಡಿದ್ದಾರೆ.
ಮಾತನಾಡಿರುವ ಶಾಸಕ ಆರ್.ಬಿ ತಿಮ್ಮಾಪುರ, ಆಡಿಯೋದಲ್ಲಿ ನನ್ನ ಹೆಸರು ಇರಬಹುದು, ಆದರೆ ನಾನು ಮಾತಾಡಿಲ್ಲ, ಹೈಕಮಾಂಡ್ ಆಗಲಿ ಸಿಎಂಗಾಗಲಿ ಟಾರ್ಗೆಟ್ ಮಾಡಿ ಮಾತಾಡಿಲ್ಲ, ಇದರಲ್ಲಿ ಯಾಕೆ ನನ್ನನ್ನು ಎಳಿತೀರಾ? ಎಂದು ಪ್ರಶ್ನೆ ಮಾಡಿದ್ದಾರೆ.
ವಿಜಯಾನಂದ ಕಾಶಪ್ಪನವರ ಬಗ್ಗೆ ಚರ್ಚೆ ನಡೀತಿತ್ತು, ಜಿಲ್ಲಾ ಮಂತ್ರಿ ಬಗ್ಗೆ ಚರ್ಚೆ ಮಾಡ್ತಾಯಿದ್ವಿ, ನಮ್ಮ ಜಿಲ್ಲೆಯ ವಿಚಾರ ಪಕ್ಷದಲ್ಲಿ ಮಾತಾಡುತ್ತೇವೆ. ವಿಜಯಾನಂದ ಕಾಶಪ್ಪನವರಗೆ ಸಚಿವ ಸ್ಥಾನ ಕೊಟ್ಟಿದ್ದು ಖುಷಿ. ನಾನು ಮೂರು ವರ್ಷ ಸಚಿವನಾಗಿ ಕೆಲಸ ಮಾಡಿದ್ದೇನೆ ಎಂದರು.
ನಂಜಯ್ಯನಮಠ್ ಜೊತೆ ಮಾತಾಡಿದ್ದಾನೆ ಎನ್ನಲಾಗುತ್ತಿದೆ. ನಾನು ಯಾವುದೇ ಪಕ್ಷ ನಾಯಕರ ಬಗ್ಗೆ ಮಾತಾಡಿಲ್ಲ, ಜಿಲ್ಲಾಧ್ಯಕ್ಷರು ಮಾತಾಡಿದ ಬಗ್ಗೆ ನನಗೆ ಗೊತ್ತಿಲ್ಲ, ಜಿಲ್ಲಾಧ್ಯಕ್ಷ ಅವರನ್ನೇ ಕೇಳಿ, ನಾನು ಅದಕ್ಕೆ ಪ್ರತಿಕ್ರಿಯೆ ನೀಡಲ್ಲ, ನಾನು ತಪ್ಪು ಮಾತಾಡಿದರೇ ನನಗೆ ಕೇಳಿ ಎಂದು ಆರ್.ಬಿ ತಿಮ್ಮಾಪುರ್ ಅವರು ಹೇಳಿದರು.
ಸಚಿವ ಸ್ಥಾನಕ್ಕೆ 80 ಪರ್ಸೆಂಟ್ ಕಮಿಷನ್ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ ಆರ್.ಬಿ ತಿಮ್ಮಾಪುರ್, ನಮ್ಮ ಪಾರ್ಟಿ ಅಲ್ಲಿ ಇಂತಹದಕ್ಕೆ ಸಾಧ್ಯವಿಲ್ಲ. ಕಾಶಪ್ಪನವರ್ ಅವರ ಕಾರ್ಯಕರ್ತರಿಗೆ ತಿಳುವಳಿಕೆ ಇಲ್ಲ, ಹೀಗಾಗಿ ಪ್ರತಿಭಟನೆ ಮಾಡುತ್ತಿರಬಹುದು. ಆಡಿಯೋದಲ್ಲಿ ನಾನು ಏನೂ ಮಾತಾಡಿಲ್ಲ. ನನ್ನ ಸಚಿವ ಸ್ಥಾನದಿಂದ ಯಾಕೆ ತೆಗೆದರು ಅಂತ ನನಗೆ ಹೇಳಲಿ, ಬೇರೆಯವರ ಬಗ್ಗೆ ನಾನ್ಯಾಕೆ ಹೇಳಲಿ, ಹೈಕಮಾಂಡ್ ತೀರ್ಮಾನಕ್ಕೆ ನಾನು ಬದ್ಧ, ನಾಳೆ ಏನ್ ತೀರ್ಮಾನ ತೆಗೆದುಕೊಂಡರು ನಾನು ಬದ್ಧ ಎಂದು ಆರ್.ಬಿ.ತಿಮ್ಮಾಪುರ ಹೇಳಿದರು.
ಅನುಕಂಪದ ದೃಷ್ಟಿಯಿಂದ ತಿಮ್ಮಾಪುರ್ ಜೊತೆ ಮಾತಾಡಿದ್ದೇನೆ. ನಾವು ಇಬ್ಬರು ಒಳ್ಳೆಯ ಗೆಳೆಯರು. ಶೋಕ ಆದಾಗ ಸಮಾಧಾನ ಮಾಡೋದು ನಮ್ಮ ಸಂಸ್ಕೃತಿ. ತಿಮ್ಮಾಪೂರ್ ಮಂತ್ರಿ ಆಗಬೇಕಿತ್ತು ಅಂತಾ ಮಾತಾಡಿದ್ದೇನೆ. ನಾನು ಮಾತಾಡಿದ್ದು ನಿಜ ಎಂದು ನಂಜಯ್ಯನಮಠ್ ಒಪ್ಪಿಕೊಂಡಿದ್ದಾರೆ.
ಇದನ್ನೂ ಓದಿ: R ASHOK: ಅಧಿವೇಶನದಲ್ಲಿ ಕಾಂಗ್ರೆಸ್ ವಿರುದ್ಧ ಬಿಜೆಪಿ-ಜೆಡಿಎಸ್ ಜಂಟಿ ಸಮರ: ಹೆಚ್‌ಡಿಕೆ ಭೇಟಿ ಬಳಿಕ ಆರ್ ಅಶೋಕ್ ಘೋಷಣೆ!