Sunday, November 10, 2024
Homeಟಾಪ್ ನ್ಯೂಸ್ಮೋದಿಯಿಲ್ಲ, ಪಾದಿಯಿಲ್ಲ.. ನಾನೇ ದೇವರು - ಇದು ಶಿವರಾಜ್ ಪಾಟೀಲ್ ಆಡಿಯೋನಾ?

ಮೋದಿಯಿಲ್ಲ, ಪಾದಿಯಿಲ್ಲ.. ನಾನೇ ದೇವರು – ಇದು ಶಿವರಾಜ್ ಪಾಟೀಲ್ ಆಡಿಯೋನಾ?

ರಾಯಚೂರು: ಚುನಾವಣೆ ಹೊತ್ತಲ್ಲಿ ಬಿಜೆಪಿ ಶಾಸಕ ಶಿವರಾಜ್‌ಪಾಟೀಲ್ ಪ್ರಧಾನಿ ಮೋದಿ ಬಗ್ಗೆ ಡೋಂಟ್ ಕೇರ್ ಎಂದಿದ್ದಾರೆ. ಶಿವರಾಜ್‌ ಪಾಟೀಲ್ ಆಡಿಯೋ ವೈರಲ್‌ ಆಗಿದ್ದು, ಮೋದಿನೂ ಇಲ್ಲ.. ಯಾರೂ ಇಲ್ಲ, ನಾನು ಸಿಂಗಲ್ ಮ್ಯಾನ್ ಅಂತ ಮಾತನಾಡಿರುವ ವ್ಯಕ್ತಿಯ ಧ್ವನಿ ರಾಯಚೂರು ನಗರ ಬಿಜೆಪಿ ಶಾಸಕ ಶಿವರಾಜ್ ಪಾಟೀಲ್ ಅವರದ್ದು ಎನ್ನಲಾಗಿದೆ.
ಒಟ್ಟು 3 ನಿಮಿಷ 19 ಸೆಕೆಂಡ್ ಗಳ ಫೋನ್ ಸಂಭಾಷಣೆಯ ಆಡಿಯೋದಲ್ಲಿ ಮೋದಿ, ಶಾಸಕ ಸೋಮಶೇಖರ್ ರೆಡ್ಡಿ ಹಾಗೂ ಶ್ರೀರಾಮುಲು ಬಗ್ಗೆಯೂ ಹಗುರವಾಗಿ ಮಾತನಾಡಿದ್ದು ಚುನಾವಣೆ ಹೊತ್ತಲ್ಲೇ ಆಡಿಯೋ ಬಾಂಬ್ ಸ್ಪೋಟಗೊಂಡಿದೆ.

ಆಡಿಯೋದಲ್ಲೇನಿದೆ?

ಯಾವ ಮೋದಿಯಿಲ್ಲ,ಪಾದಿಯಿಲ್ಲ.. ನಾನೊಬ್ಬನೇ ಶಿವರಾಜ್ ಪಾಟೀಲ್.. ಯಾವ ಬದನೆಕಾಯಿ ಮಾತು ನಾನು ಕೇಳಲ್ಲ.. ಮೋದಿ ರೈಟ್ ಹ್ಯಾಂಡ್‌ ಗೆ ನಾನು ಕೇಳಲ್ಲ. ನಾನೇ ಸಿಂಗಲ್ ಆರ್ಮಿ, ನನಗೆ ರೈಟ್ ಇಲ್ಲ, ಲೆಫ್ಟ್ ಇಲ್ಲ. ನನ್ನ ಕೈ ನನ್ನ ಕಾಲು ನಾನೇ.
ನಾನೇ ಮೋದಿ,ನಾನೇ ಟ್ರಂಪ್..ಯಾವನ ಬದನೆಕಾಯಿ ಮಾತು ಸಹ ನಾನು‌ ಕೇಳಲ್ಲ. ನನ್ನ ಮುಂದೆ ಹೇಳಿದ್ರೆ ಏನೂ ನಡೆಯಂಗಿಲ್ಲ. ಮೊದಲಿನಿಂದಲೂ ನನ್ನ ಕ್ಷೇತ್ರಕ್ಕೆ ಲೀಡರ್ ಗಳಿಗೆ ಬಾ ಅಂತೀನಾ..? ನನಗೆ ಯಾರೂ‌ ಇಲ್ಲ..ನಾನು‌ ಸಿಂಗಲ್ ಆರ್ಮಿ. ಎಲೆಕ್ಷನ್ ನಲ್ಲಿ ಸೋತರು ಚಿಂತೆಯಿಲ್ಲ,ಗೆದ್ರು ಚಿಂತೆಯಿಲ್ಲ,ಮಲಗಿದರು ಚಿಂತೆಯಿಲ್ಲ.. ಜಗತ್ತಿನಲ್ಲಿ ಚಿಂತೆಯಿಲ್ಲದ ಪುರುಷ ಅಂದ್ರೆ ಅದು ಶಿವರಾಜ್ ಪಾಟೀಲ್. ನಾನು ದೇವರು ಇದ್ದಂಗೆ,ಅದಕ್ಕೆ ನಮ್ಮ ಹುಡುಗರಿಗೆ ದಿನಾಲೂ ನನ್ನ ಕಾಲಿಗೆ ನಮಸ್ಕಾರ ಮಾಡ್ರಿ ಅಂತ ಹೇಳ್ತಿನಿ.. ಎಂದು ಮಾತುಗಳನ್ನಾಡಿರುವ ಆಡಿಯೋ ಇದೀಗ ವೈರಲ್ ಆಗಿದೆ.

ಚುನಾವಣೆ ಹೊತ್ತಲ್ಲಿ ಶಿವರಾಜ್ ಪಾಟೀಲ್ ಅವರದ್ದು ಎನ್ನಲಾದ ಆಡಿಯೋ ವೈರಲ್ ಆಗಿದ್ದು, ಕ್ಷೇತ್ರದಲ್ಲಿ ಸಂಚಲನ ಮೂಡಿಸಿದೆ. ಆದ್ರೆ, ಈ ಬಗ್ಗೆ ಶಾಸಕ ಶಿವರಾಜ್ ಪಾಟೀಲ್ ಇದುವರೆಗೂ ಯಾವುದೇ ಪ್ರತಿಕ್ರಿಯೆಗೆ ಲಭ್ಯವಾಗಿಲ್ಲ.

ಹೆಚ್ಚಿನ ಸುದ್ದಿ

error: Content is protected !!