Wednesday, March 26, 2025
Homeಟಾಪ್ ನ್ಯೂಸ್ಸಚಿವೆ ಮನೆಮುಂದೆಯೇ ಕಾರು ಹತ್ತಿಸಿ ಕೊಲೆಯತ್ನ!

ಸಚಿವೆ ಮನೆಮುಂದೆಯೇ ಕಾರು ಹತ್ತಿಸಿ ಕೊಲೆಯತ್ನ!

ಬೆಂಗಳೂರು: ಆಸ್ತಿ ವಿವಾದವೊಂದರಲ್ಲಿ ತನ್ನ ಸ್ನೇಹಿತನ ಮೇಲೆಯೇ ಕಾರು ಹತ್ತಿಸಿ ಕೊಲ್ಲಲು ಯತ್ನಿಸಿರುವ ಘಟನೆ ಸಚಿವೆ ಶಶಿಕಲಾ ಜೊಲ್ಲೆಯವರ ಮನೆಯ ಮುಂದೆ ಮಂಗಳವಾರ ನಡೆದಿದೆ.

ಜೆಸಿನಗರ ಠಾಣಾ ವ್ಯಾಪ್ತಿಯ ಜಯಮಹಲ್ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಗಾಯಾಳುವಾಗಿರುವ ಗಗನ್ ಶರ್ಮಾ ಸ್ಥಿತಿ ಗಂಭೀರವಾಗಿದೆ. ಪ್ರಕರಣದ ಪ್ರಮುಖ ಆರೋಪಿ , ಬಿಬಿಎಂಪಿ ಟ್ಯಾಕ್ಸ್ ಕಲೆಕ್ಟರ್ ಸುನಿಲ್ ಎಂಬಾತನನ್ನು ಬಂಧಿಸಲಾಗಿದ್ದು, ಮಿಕ್ಕ ಇಬ್ಬರು ಪರಾರಿಯಾಗಿದ್ದಾರೆ.

ಗಾಯಾಳು ಗಗನ್ ಶರ್ಮಾ ಜೆಸಿನಗರ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಕೂಡಾ ಹೌದು. ಆರೋಪಿ ಸುನಿಲ್ ಮತ್ತಿತರರು ಗಗನ್ ಸ್ನೇಹಿತರಾಗಿದ್ದರು‌. ಆದರೆ ಕೆಲದಿನಗಳ ಹಿಂದೆ ಇವರ ನಡುವೆ ಆಸ್ತಿವಿಷಯದಲ್ಲಿ ಮನಸ್ತಾಪ ನಡೆದಿತ್ತು. ಇದೇ ವಿಷಯದ ಬಗ್ಗೆ ಮಾತಾನಾಡಬೇಕೆಂದು ಸುನಿಲ್ ಸೋಮವಾರ ರಾತ್ರಿ ಗಗನ್ ನನ್ನು ಕರೆಸಿಕೊಂಡಿದ್ದ. ತಮ್ಮ ಅಸ್ಸೆಂಟ್ ಕಾರ್‌ನಲ್ಲಿ ಆತನನ್ನು ಕೂರಿಸಿಕೊಂಡು ಮಂಗಳವಾರ ಮುಂಜಾನೆಯವರೆಗೆ ಮನಸೋಇಚ್ಛೆ ಹಲ್ಲೆ ಗೈದಿದ್ದರು. ಬಳಿಕ ಮಂಗಳವಾರ ಮುಂಜಾನೆ ಆತನನ್ನು ಜಯಮಹಲ್ ರಸ್ತೆಯಲ್ಲಿ ಇಳಿಸಿ ಮೂರು ಬಾರಿ ಆತನ ಮೇಲೆ ಕಾರು ಹತ್ತಿಸಿ ವಿಕೃತಿ ಮೆರೆದಿದ್ದಾರೆ. ವಿಕ್ಟೋರಿಯ ಆಸ್ಪತ್ರೆಯಲ್ಲಿ ದಾಖಲಾಗಿರುವ ಗಗನ್ ಸ್ಥಿತಿ ಗಂಭೀರವಾಗಿದೆ.

ಪ್ರಕರಣ ದಾಖಲಿಸಿಕೊಂಡಿರುವ ಜೆಸಿ ನಗರ ಠಾಣೆಯ ಪೊಲೀಸರು ಇನ್ನಿಬ್ಬರು ಆರೋಪಿಗಳಿಗಾಗಿ ಶೋಧ ನಡೆಸಿದ್ದಾರೆ.

ಹೆಚ್ಚಿನ ಸುದ್ದಿ

error: Content is protected !!