Monday, May 18, 2026
Homeಟಾಪ್ ನ್ಯೂಸ್SHUBHANSHU SHUKLA: ಬಾಹ್ಯಾಕಾಶದಲ್ಲಿ ಪರದಾಟ & ಒದ್ದಾಟ- ಗಗನಯಾತ್ರಿ ಶುಭಾಂಶು ಶುಕ್ಲಾ ಬಿಚ್ಚಿಟ್ಟ ಒಳನೋಟ!

SHUBHANSHU SHUKLA: ಬಾಹ್ಯಾಕಾಶದಲ್ಲಿ ಪರದಾಟ & ಒದ್ದಾಟ- ಗಗನಯಾತ್ರಿ ಶುಭಾಂಶು ಶುಕ್ಲಾ ಬಿಚ್ಚಿಟ್ಟ ಒಳನೋಟ!

ನವದೆಹಲಿ: ಭಾರತ ಬಾಹ್ಯಾಕಾಶ (Space) ಲೋಕದಲ್ಲಿ ಇತಿಹಾಸ ನಿರ್ಮಿಸುತ್ತಿದ್ದು, ಅಮೆರಿಕ ಸೇರಿದಂತೆ ಅಭಿವೃದ್ಧಿ ಹೊಂದಿದ ದೇಶಗಳಿಗೂ ಸವಾಲು ಹಾಕುವ ಹಂತಕ್ಕೆ ಬೆಳೆದು ನಿಂತಿದೆ. ಇಂತಹ ಸಂತಸ ತುಂಬಿದ ಸಮಯದಲ್ಲಿ ಗಗನಯಾತ್ರಿ (Astronaut) ಶುಭಾಂಶು ಶುಕ್ಲಾ (Shubhanshu Shukla) ತಮ್ಮ ಬಾಹ್ಯಾಕಾಶ ಯಾನದ ಅನುಭವ ಹಂಚಿಕೊಂಡಿದ್ದಾರೆ. ಬಾಹ್ಯಾಕಾಶದಲ್ಲಿ 18 ದಿನಗಳ ವಾಸ್ತವ್ಯದ ಸಮಯದಲ್ಲಿ ನಡೆದಿದ್ದ ಎಲ್ಲಾ ಆಗುಹೋಗುಗಳ ಬಗ್ಗೆ ಮನಸ್ಸು ತುಂಬಿ ಅನುಭವ ಹಂಚಿಕೊಂಡಿದ್ದಾರೆ ಶುಭಾಂಶು ಶುಕ್ಲಾ.

ಇದನ್ನೂ ಓದಿ : ʼಬಾಹ್ಯಾಕಾಶದಿಂದ ಭಾರತ ನಿಜವಾಗಿಯೂ ಸುಂದರವಾಗಿ ಕಾಣಿಸುತ್ತದೆʼ- VIDEO ಹಂಚಿಕೊಂಡ ಶುಭಾಂಶು!

ರಾಷ್ಟ್ರ ರಾಜಧಾನಿ ನವದೆಹಲಿ ಬಾಹ್ಯಾಕಾಶ ಲೋಕದ ವಿಸ್ಮಯಗಳಿಗೆ ಸಾಕ್ಷಿಯಾಗಿತ್ತು, ಶುಭಾಂಶು ಶುಕ್ಲಾ ಅವರು ನವದೆಹಲಿಯಲ್ಲಿ ಮಾತನಾಡುತ್ತ ತಮ್ಮ ಜೀವನದಲ್ಲಿ ಬಾಹ್ಯಾಕಾಶ ಯಾನ ಕಲಿಸಿದ ಪಾಠಗಳ ಬಗ್ಗೆ ಮುಕ್ತವಾಗಿ ಮಾಹಿತಿ ಹಂಚಿಕೊಂಡರು. ಈ ಪೈಕಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS) 18 ದಿನದ ವಾಸ್ತವ್ಯ ಸಮಯದಲ್ಲಿ ಶುಭಾಂಶು ಶುಕ್ಲಾ ಅವರು ನಡೆಸಿದ ಸೂಕ್ಷ್ಮ ಗುರುತ್ವಾಕರ್ಷಣೆ ಪ್ರಯೋಗಗಳ ಮಾದರಿಗಳನ್ನು ಹೊರ ತೆಗೆಯಲು, ಶುಕ್ಲಾ ಅವರು ಸತತ ಮೂರು ಗಂಟೆಗಳ ಕಾಲ ತನ್ನ ಸುತ್ತಲೂ ತಿರುಗಬೇಕಾಯಿತು ಎಂಬುದನ್ನು ಕೂಡ ತಿಳಿಸಿದ್ದಾರೆ.

ಬಾಹ್ಯಾಕಾಶದಲ್ಲಿ ಪೋಷಣೆ ಮೂಲವಾದ ಸೂಕ್ಷ್ಮ ಪಾಚಿ ಹೇಗೆ ಬೆಳೆಯುತ್ತದೆ? ಎಂಬುದರ ಕುರಿತಾಗಿ ಅಧ್ಯಯನಕ್ಕಾಗಿ ಸಿರಿಂಜ್ ಬಳಸಿ ಚೀಲದಿಂದ ಮಾದರಿ ಹೊರತೆಗೆಯಲು ಕನಿಷ್ಠ 3 ಗಂಟೆಗಳ ಕಾಲ ತನ್ನ ಸುತ್ತ ಸುತ್ತುತ್ತಾ ಕಳೆದಿದ್ದೇನೆ ಎಂದು ಶುಭಾಂಶು ಶುಕ್ಲಾ ಮಾಹಿತಿ ನೀಡಿದ್ದಾರೆ. ಅಲ್ಲದೆ ಇದೇ ಸಮಯದಲ್ಲಿ ತಾವು ಬಾಹ್ಯಾಕಾಶದಲ್ಲಿ ಗುರತ್ವಾಕರ್ಷಣೆ ರಹಿತಿ ಪರಿಸ್ಥಿತಿಯಲ್ಲಿ ಏನೆಲ್ಲಾ ಸವಾಲು ಎದುರಿಸಿದ್ದೇನೆ? ಎಂಬುದನ್ನು ಕೂಡ ಶುಭಾಂಶು ಶುಕ್ಲಾ ವಿವರಿಸಿದ್ದಾರೆ.

ಹೆಚ್ಚಿನ ಸುದ್ದಿ

Change Language »
error: Content is protected !!