Monday, April 21, 2025
Homeಟಾಪ್ ನ್ಯೂಸ್ಗರ್ಭಿಣಿ ಮೇಲೆ ಹಲ್ಲೆ, ಮಗು ಹೊಟ್ಟೆಯಲ್ಲೇ ಸಾವು: ವೈದ್ಯೆ ವಿರುದ್ಧ ಗಂಭೀರ ಆರೋಪ

ಗರ್ಭಿಣಿ ಮೇಲೆ ಹಲ್ಲೆ, ಮಗು ಹೊಟ್ಟೆಯಲ್ಲೇ ಸಾವು: ವೈದ್ಯೆ ವಿರುದ್ಧ ಗಂಭೀರ ಆರೋಪ

ಗದಗದ ಜಿಮ್ಸ್‌ ಆಸ್ಪತ್ರೆಯ ವೈದ್ಯೆ ಮೇಲೆ ಗಂಭೀರ ಆರೋಪ ಕೇಳಿ ಬಂದಿದೆ. ವೈದ್ಯೆ ಗರ್ಭಿಣಿಯ ಮೇಲೆ ವೈದ್ಯೆ ಹಲ್ಲೆ ಮಾಡಿದ್ದು, ಮಗು ಹೊಟ್ಟೆಯಲ್ಲಿಯೇ ಮೃತಪಟ್ಟಿದೆ ಎಂದು ಆರೋಪಿಸಲಾಗಿದೆ.

ಹೆರಿಗೆಗೆಂದು ಬಂದ ಮಹಿಳೆಯನ್ನು ಹೆರಿಗೆಗೆ ಒಳಪಡಿಸದೆ ವಿಳಂಬ ಮಾಡಲಾಗಿದೆ, ಈ ಬಗ್ಗೆ ಪ್ರಶ್ನಿಸಿದಾಗ ಗರ್ಭಿಣಿಯ ಕಪಾಳಕ್ಕೆ ವೈದ್ಯೆ ಹೊಡೆದಿದ್ದಾರೆ ಎಂಬ ಆರೋಪವನ್ನು ಸಂತ್ರಸ್ತೆಯ ಕುಟುಂಬಸ್ಥರು ಮಾಡಿದ್ದಾರೆ.

ಅದಾಗ್ಯೂ, ಮಗುವಿನ ಸಾವಿಗೆ ನಿಖರ ಕಾರಣ ಏನು ಅನ್ನುವುದು ತಿಳಿದು ಬಂದಿಲ್ಲ. ವೈದ್ಯರು ಈ ಬಗ್ಗೆ ತಿಳಿಸಿಲ್ಲ ಎಂದು ಮಹಿಳೆಯ ಕುಟುಂಬಸ್ಥರು ಹೇಳಿದ್ದಾರೆ.

ವೈದ್ಯೆಯ ಮೇಲೆ ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ ನಡೆಸಿರುವ ಆರೋಪವೂ ಇದೆ. ನೂರಾರು ಆಶಾ ಕಾರ್ಯಕರ್ತೆಯರು ಆಸ್ಪತ್ರೆ ಎದುರು ಜಮಾಯಿಸಿ ಪ್ರತಿಭಟನೆ ನಡೆಸಿದ್ದು, ವೈದ್ಯರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರ ಹಾಕಿದ್ದಾರೆ.

ಆಶಾ ಕಾರ್ಯಕರ್ತೆಯರೊಬ್ಬರನ್ನು ಒಂಟಿಗಾಲಿನಲ್ಲಿ ನಿಲ್ಲಿಸಿ ಕಿರುಕುಳ ನೀಡಿದ್ದಾರೆ ಎಂಬ ಆರೋಪವೂ ವೈದ್ಯೆಯ ಮೇಲೆ ಹೊರಿಸಲಾಗಿದೆ.

ಹೆಚ್ಚಿನ ಸುದ್ದಿ

error: Content is protected !!