ಬೆಂಗಳೂರು : ತನ್ನ ತಂದೆಯನ್ನು ನೋಡಲು ಹೋದ ಮಹಿಳೆಯೊಬ್ಬರ ಮೇಲೆ ಸ್ವತಃ ಆಕೆಯ ಕಿರಿಯ ಸೋದರ ಆಸ್ತಿಗಾಗಿ ದೊಣ್ಣೆಯಿಂದ ಹಲ್ಲೆ ನಡೆಸಿರುವ ಘಟನೆ (Crime news) ಬೆಂಗಳೂರಿನಲ್ಲಿ ನಡೆದಿದೆ. ಕಳೆದ ತಿಂಗಳು ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಆಸ್ತಿ ವಿಷಯಕ್ಕೆ ಕಿರಿಕ್, ಅಕ್ಕನ ಮೇಲೆ ತಮ್ಮನಿಂದ ಹಲ್ಲೆ!#Property #Eldersister #brothersister #Bengaluru #KannadaNews #navasamajanews pic.twitter.com/touhHO7seU
— navasamaja (@navasamajanews) January 9, 2026
ತಂಗಮಣಿ ಹಲ್ಲೆಗೊಳಗಾದ ಮಹಿಳೆಯಾಗಿದ್ದು, ಅವರ ಸೋದರ ವೆಂಕೆಟೇಶ್ ವಿರುದ್ದ ದೂರು ದಾಖಲಾಗಿದೆ.
ತಂಗಮಣಿಯವರ ತಂದೆ ಆರೋಗ್ಯ ಸಮಸ್ಯೆಯಿಂದ ನರಳುತ್ತಿದ್ದರು. ಇತ್ತೀಚಿಗಷ್ಟೇ ಆಸ್ಪತ್ರೆಗೆ ದಾಖಲಾಗಿ ಮನೆಗೆ ಬಂದಿದ್ದರು. ಅವರನ್ನು ನೋಡಲು ತಂಗಮಣಿ ಮನೆಗೆ ಧಾವಿಸಿದ್ದರು. ಈ ವೇಳೆ ತಮ್ಮ ವೆಂಕಟೇಶ್ ಮತ್ತು ಆತನ ಪತ್ನಿ ಸವಿತಾ ಆಸ್ತಿ ವಿಷಯಕ್ಕೆ ಬಂದಿದ್ದಾರೆಂದು ಆರೋಪಿಸಿ ತಂಗಮಣಿಯವರ ಮೇಲೆ ದೊಣ್ಣೆಯಿಂದ ಭೀಕರವಾಗಿ ಹಲ್ಲೆ ನಡೆಸಿದ್ದರು.
ಗಾಯಗೊಂಡಿದ್ದ ತಂಗಮಣಿ ಯಲಹಂಕ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ತಮ್ಮ ವೆಂಕಟೇಶ್ ಹಾಗೂ ಆತನ ಪತ್ನಿ ವಿರುದ್ದ ದೂರು ದಾಖಲಿಸಿದ್ದಾರೆ. ಇಬ್ಬರ ವಿರುದ್ದವೂ ಎಫ್‌ಐಆರ್ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.