ಅಸ್ಸಾಂ: ಈತ ಮೂಡೆಯಯಲ್ಲಿ ಹಣ ತಂದಿದ್ದ.. ಅದೂ ಕೂಡಾ ಸ್ಕೂಟರ್ ಕೊಳ್ಳೋದಕ್ಕೆ. ಅಸ್ಸಾಂನ ವ್ಯಕ್ತಿಯೊಬ್ಬರು ಕೇವಲ ನಾಣ್ಯಗಳನ್ನು ನೀಡಿ ಸ್ಕೂಟರ್ ಖರೀದಿಸಿದ್ದಾರೆ. ದರ್ರಾಂಗ್‌ನ ಸಿಪಜರ್ ಪ್ರದೇಶದ ನಿವಾಸಿ ಮಹಮ್ಮದ್ ಸೈದುಲ್ ಹಕ್ ಎಂಬವರು ನಾಣ್ಯಗಳನ್ನು ತುಂಬಿದ ಗೋಣಿ ಚೀಲವನ್ನು ಶೋರೂಂ ಗೆ ಕೊಂಡೊಯ್ದು ಸ್ಕೂಟರ್ ಖರೀದಿಸಿದ್ದಾರೆ.
ಸ್ಕೂಟರ್ ಕೊಳ್ಳುವ ಕನಸಿನಲ್ಲಿ ಹಲವು ವರ್ಷಗಳಿಂದ ಕಷ್ಟಪಟ್ಟು ಈ ನಾಣ್ಯಗಳನ್ನು ಸಂಗ್ರಹಿಸಿದ್ದರು. ಇಂತಹ ಗ್ರಾಹಕರೊಬ್ಬರು ನಮ್ಮ ಬಳಿಗೆ ಬಂದಿರುವುದು ಸಂತೋಷ ಎಂದು ಶೋರೂಂ ಮಾಲೀಕ ಮನೀಶ್ ಪೊದ್ದಾರ್ ಹೇಳಿದ್ದಾರೆ.
ಸೈದುಲ್ ಹಕ್ ಕಳೆದ 5-6 ವರ್ಷಗಳಿಂದ ನಾಣ್ಯಗಳನ್ನು ಸಂಗ್ರಹಿಸುತ್ತಿದ್ದು, ಸರಿ ಸುಮಾರು 90 ಸಾವಿರ ರೂ.ಗಳಷ್ಟು ನಾಣ್ಯಗಳನ್ನು ಸೇರಿಸಿಟ್ಟಿದ್ದರು ಎನ್ನಲಾಗಿದೆ.
ನಾನು ಬೋರಗಾಂವ್ ಪ್ರದೇಶದಲ್ಲಿ ಸಣ್ಣ ಅಂಗಡಿ ನಡೆಸುತ್ತಿದ್ದೇನೆ, ಸ್ಕೂಟರ್ ಖರೀದಿಸುವುದು ನನ್ನ ಕನಸಾಗಿತ್ತು, ಕಳೆದ 5-6 ವರ್ಷಗಳ ಹಿಂದೆ ನಾಣ್ಯಗಳನ್ನು ಸಂಗ್ರಹಿಸಲು ಪ್ರಾರಂಭಿಸಿದೆ. ಕೊನೆಗೂ, ನಾನು ನನ್ನ ಕನಸನ್ನು ನನಸಾಗಿಸಿದೆ. ನಾನು ಈಗ ನಿಜವಾಗಿಯೂ ಸಂತೋಷವಾಗಿದೆ ಎಂದು ಸೈದುಲ್ ಹಕ್ ಹೇಳಿದ್ದಾರೆ.