Monday, January 20, 2025
Homeಟಾಪ್ ನ್ಯೂಸ್R ASHOK: ವರಿಷ್ಠರಿಂದ ಬುಲಾವ್ - ದೆಹಲಿಗೆ ಹಾರಿದ ಪ್ರತಿಪಕ್ಷ ನಾಯಕ ಆರ್.ಅಶೋಕ್!

R ASHOK: ವರಿಷ್ಠರಿಂದ ಬುಲಾವ್ – ದೆಹಲಿಗೆ ಹಾರಿದ ಪ್ರತಿಪಕ್ಷ ನಾಯಕ ಆರ್.ಅಶೋಕ್!

ಬೆಂಗಳೂರು : ಬಿಜೆಪಿ ಪಕ್ಷದಲ್ಲಿ ಬುಧವಾರ ಬೆಳ್ಳಂಬೆಳಗ್ಗೆ ರಾಜಕೀಯ ಬೆಳವಣಿಗೆ ನಡೆದಿದೆ. ವಿಪಕ್ಷ ನಾಯಕ ಆರ್ ಅಶೋಕ್ ಗೆ ಕೇಂದ್ರದ ವರಿಷ್ಠರ ಬುಲಾವ್ ಬಂದ ಹಿನ್ನೆಲೆ ಧಿಡೀರ್ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ.

ವಿಮಾನದ ಮೂಲಕ ದೆಹಲಿಗೆ ಅಶೋಕ್ ಪ್ರಯಾಣ ಬೆಳೆಸಿದ್ದು, ವರಿಷ್ಠರ ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಲಿದ್ದಾರೆ. ಅಶೋಕ್ ದೆಹಲಿ ಭೇಟಿ ತೀವ್ರ ಕುತೂಹಲ ಕೆರಳಿಸಿದೆ.

ವಕ್ಫ್ ಹೋರಾಟ ಮೊಟಕುಗೊಳಿಸಿ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಬಿಜೆಪಿಯಲ್ಲಿ ಆಂತರಿಕ ಭಿನ್ನಾಭಿಪ್ರಾಯ ಭುಗಿಲೆದ್ದಿರುವ ಹಿನ್ನೆಲೆಯಲ್ಲಿ ಅಶೋಕ್ ಭೇಟಿ ಸಾಕಷ್ಟು ಮಹತ್ವ ಪಡೆದುಕೊಂಡಿದೆ. ವಿಜಯೇಂದ್ರ ಹಾಗೂ ಬಸನಗೌಡ ಪಾಟೀಲ್ ಯತ್ನಾಳ್ ನಡುವಿನ ವಾಗ್ಯುದ್ಧದ ವಿಚಾರವೇ ಚರ್ಚೆಯ ಪ್ರಮುಖ ವಿಚಾರವಾಗಿದೆ ಎನ್ನಲಾಗುತ್ತಿದೆ.

ಹೆಚ್ಚಿನ ಸುದ್ದಿ

error: Content is protected !!