Sunday, January 25, 2026
Homeಟಾಪ್ ನ್ಯೂಸ್ARYAN KHAN : ಕಾಂಗ್ರೆಸ್ ನಾಯಕರ ಪುತ್ರರ ಜೊತೆ ಕಾಣಿಸಿಕೊಂಡ ಶಾರುಖ್‌ ಪುತ್ರ ಮಾಡಿದ್ದೇನು ನೋಡಿ!-...

ARYAN KHAN : ಕಾಂಗ್ರೆಸ್ ನಾಯಕರ ಪುತ್ರರ ಜೊತೆ ಕಾಣಿಸಿಕೊಂಡ ಶಾರುಖ್‌ ಪುತ್ರ ಮಾಡಿದ್ದೇನು ನೋಡಿ!- VIDEO

ಬೆಂಗಳೂರು : ನಟ ಶಾರುಖ್ ಖಾನ್ (Shahrukh Khan) ಮಗ ಆರ್ಯನ್ ಖಾನ್ (Aryan Khan) ಮತ್ತೆ ಕೆಟ್ಟ ಕಾರಣಕ್ಕೆ ಸುದ್ದಿಯಲ್ಲಿದ್ದಾನೆ. ಡ್ರಗ್ಸ್ ಕೇಸ್​​ನಲ್ಲಿ ಜೈಲು ಸೇರಿದ್ದರೂ ಆರ್ಯನ್ ಖಾನ್​ಗೆ ಬುದ್ಧಿ ಬಂದಂತೆ ಕಾಣಿಸುತ್ತಿಲ್ಲ. ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದ ಆರ್ಯನ್ ಖಾನ್, ಪಬ್​ನಲ್ಲಿ ನಿಂತು ಮಧ್ಯದ ಬೆರಳು ತೋರಿಸಿ ದುರ್ವರ್ತನೆ ತೋರಿದ್ದಾನೆ. ಈ ವಿಡಿಯೋ ಈಗ ವೈರಲ್‌ ಆಗಿದೆ

ಬೆಂಗಳೂರಿನ ಪ್ರಮುಖ ಮತ್ತು ಜನಪ್ರಿಯ ಪಬ್‌ ಒಂದಕ್ಕೆ ವಿಶೇಷ ಅತಿಥಿಯಾಗಿ ಆರ್ಯನ್ ಆಗಮಿಸಿದ್ದರು. ಮೂಲಗಳ ಪ್ರಕಾರ, ಆರ್ಯನ್ ಖಾನ್ ರಾತ್ರಿ ಸರಿಯಾಗಿ 11 ಗಂಟೆಗೆ ಎಂಟ್ರಿ ಕೊಟ್ಟರು. ಸುಮಾರು 12:45 ರವರೆಗೂ ಅಂದರೆ ನಡುರಾತ್ರಿಯವರೆಗೂ ಅಲ್ಲೇ ಇದ್ದು, ಬೆಂಗಳೂರಿನ ನೈಟ್ ಲೈಫ್ ಅನ್ನು ಸವಿದಿದ್ದಾರೆ.

ಮುಂಬೈನಿಂದ ನೇರವಾಗಿ ವಿಮಾನ ಏರಿ ಬೆಂಗಳೂರಿಗೆ ಬಂದಿಳಿದ ಆರ್ಯನ್ ಖಾನ್‌ಗೆ ಸಿಕ್ಕ ಸ್ವಾಗತವೇನು ಸಾಮಾನ್ಯವಾದದ್ದಲ್ಲ. ಸಾಕ್ಷಾತ್ ಶಾರುಖ್ ಖಾನ್ ಅವರಿಗೆ ಸಿಗುವಂತೆಯೇ ಅದ್ದೂರಿಯಾದ ಮತ್ತು ಅಭಿಮಾನದ ಸ್ವಾಗತ ಆರ್ಯನ್ ಅವರಿಗೂ ದೊರೆಯಿತು.

ಸಾಮಾನ್ಯವಾಗಿ ಕ್ಯಾಮೆರಾ ಕಣ್ಣುಗಳಿಂದ ದೂರವಿರುವ ಮತ್ತು ತಮ್ಮ ಕೆಲಸದಲ್ಲಿ ಮಗ್ನರಾಗಿರುವ ಆರ್ಯನ್ ಖಾನ್, ಕಳೆದ ವಾರಾಂತ್ಯದಲ್ಲಿ ನಮ್ಮ ಸಿಲಿಕಾನ್ ಸಿಟಿ ಬೆಂಗಳೂರಿಗೆ ದಿಢೀರ್ ಭೇಟಿ ನೀಡುವ ಮೂಲಕ ಇಲ್ಲಿನ ಸಿನಿ ಪ್ರಿಯರಲ್ಲಿ ಮತ್ತು ಪಾರ್ಟಿ ಪ್ರಿಯರಲ್ಲಿ ಸಂಚಲನ ಮೂಡಿಸಿದ್ದಾರೆ. ಆಗ್ಲೇ ಮಧ್ಯದ ಬೆರಳು ತೋರಿಸಿ ಉದ್ಧಟತನ ತೋರಿದ್ದಾನೆ.

ನವೆಂಬರ್ 28ರಂದು ನಡೆದ ಘಟನೆ

ನವೆಂಬರ್ 28ರಂದು ಸಿನಿಮ ಪ್ರಚಾರಕ್ಕಾಗಿ ಬೆಂಗಳೂರಿಗೆ ಆಗಮಿಸಿದ್ದ ಆರ್ಯನ್ ಖಾನ್, ಬೆಂಗಳೂರುನ ಪ್ರತಿಷ್ಠಿತ ಪಬ್ ಗೆ ತೆರಳಿದ್ದರು. ಈ ವೇಳೆ ಪಬ್ ನ ಬಾಲ್ಕನಿಯಲ್ಲಿ ನಿಂತು ಸಾರ್ವಜಿನಿಕವಾಗಿ ಕೈ ಬೀಸುತ್ತಾ ಮಿಡಲ್ ಫಿಂಗರ್ ತೋರಿಸಿ ದುರ್ವರ್ತನೆ ಮೆರೆದಿದ್ದಾರೆ. ಇದೇ ವೇಳೆ ಆರ್ಯನ್ ಖಾನ್ ಪಕ್ಕದಲ್ಲಿ ಯುವ ಕಾಂಗ್ರೆಸ್ ನಾಯಕ ಮೊಹಮ್ಮದ್ ನಲಪಾಡ್ ಕೂಡ ನಿಂತಿದ್ದರು. ಸಾಮಾನ್ಯ ಜನರಾಗಿದ್ರೆ ಪೊಲೀಸರು ಬಿಡ್ತಿದ್ರಾ ಎಂದು ಜನರು ಪ್ರಶ್ನೆ ಮಾಡುತ್ತಿದ್ದಾರೆ.

ಸಾರ್ವಜನಿಕವಾಗಿ ಅಸಭ್ಯವಾಗಿ ವರ್ತಿಸಿದ ಆರ್ಯನ್ ಖಾನ್ ವರ್ತನೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಅಶೋಕನಗರ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ನಿರ್ದೇಶನಕ್ಕಿಳಿದಿರೋ ಆರ್ಯನ್ ಖಾನ್

ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ನಿರ್ದೇಶನ ಮಾಡಿರುವ ಬ್ಯಾಡ್ಸ್ ಆಫ್ ಬಾಲಿವುಡ್ ವೆಬ್ ಸರಣಿ ಇತ್ತೀಚೆಗಷ್ಟೆ ಬಿಡುಗಡೆ ಆಗಿ ದೊಡ್ಡ ಹಿಟ್ ಆಗಿದೆ. ಶಾರುಖ್ ಖಾನ್ ಪುತ್ರನ ಚಿತ್ರರಂಗದ ಪ್ರವೇಶ ಎಂಬ ಕಾರಣಕ್ಕೆ ಈ ವೆಬ್ ಸರಣಿ ಬಹಳ ಸದ್ದು ಮಾಡಿತ್ತು. ನಿರೀಕ್ಷೆಗೆ ತಕ್ಕಂತೆ ವೆಬ್ ಸರಣಿ ಪ್ರೇಕ್ಷಕನಿಗೆ ಇಷ್ಟವಾಗಿದ್ದು ದೊಡ್ಡ ಹಿಟ್ ಆಗಿದೆ.

ಇಮ್ರಾನ್ ಹಶ್ಮಿ ಅಂತೂ ‘ಬ್ಯಾಡ್ಸ್ ಆಫ್ ಬಾಲಿವುಡ್’ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದ್ದಿದ್ದರೆ 600 ಕೋಟಿಗೂ ಹೆಚ್ಚು ಗಳಿಸುತ್ತಿತ್ತು ಎಂದಿದ್ದಾರೆ. ಚಿಕ್ಕ ಪರದೆಯಲ್ಲಿ ಭಾರಿ ಯಶಸ್ಸು ಗಳಿಸಿರುವ ಶಾರುಖ್ ಖಾನ್ ಪುತ್ರ ಇದೀಗ ದೊಡ್ಡ ಪರದೆಯತ್ತ ಹೆಜ್ಜೆ ಹಾಕಿದ್ದಾರೆ.

ಆರ್ಯನ್ ಖಾನ್ ನಿರ್ದೇಶಿಸಿದ ಬ್ಯಾಡ್ಸ್ ಆಫ್ ಬಾಲಿವುಡ್ ವೆಬ್ ಸರಣಿಗಾಗಿ ಶಾರುಖ್ ಖಾನ್ ಬಂಡವಾಳ ಹೂಡಿಕೆ ಮಾಡಿದ್ದು. ಮಾತ್ರವಲ್ಲದೆ ಅತಿಥಿ ಪಾತ್ರಕ್ಕೆ ಆಮಿರ್ ಖಾನ್, ಸಲ್ಮಾನ್ ಖಾನ್, ರಾಜಮೌಳಿ, ಬಾದ್​​ಶಾ, ಹೃತಿಕ್ ರೋಷನ್, ಇಮ್ರಾನ್ ಹಶ್ಮಿ, ಕರಣ್ ಜೋಹರ್ ಇನ್ನೂ ಹಲವು ಬಾಲಿವುಡ್ ದಿಗ್ಗಜರನ್ನು ಒಟ್ಟಿಗೆ ಸೇರಿಸಿದರು.

ಹೆಚ್ಚಿನ ಸುದ್ದಿ

Change Language »
While viewing the website, tap in the menu bar. Scroll down the list of options, then tap Add to Home Screen.
Use Safari for a better experience.
error: Content is protected !!