ಪ್ರಧಾನಿ ನರೇಂದ್ರ ಮೋದಿಯವರು ದಿನವಿಡೀ ಕೋಪಗೊಳ್ಳುತ್ತಾರೆ. ಅವರಿಗೆ ನಿದ್ರಾಹೀನತೆ ಸಮಸ್ಯೆ ಇರೋದ್ರಿಂದ ರಾತ್ರಿಯಿಡೀ ನಿದ್ದೆ ಮಾಡದ ಮೋದಿ ಬೆಳಿಗ್ಗೆ ಸಿಟ್ಟಿನಲ್ಲಿರ್ತಾರೆ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ಜಂತರ್ ಮಂತರ್ನಲ್ಲಿ ಆಮ್ ಆದ್ಮಿ ಪಕ್ಷದ ಮೋದಿ ಹಠಾವೋ ದೇಶ್ ಬಚಾವೋ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದವರು ಮೋದಿ ಬಗ್ಗೆ ವ್ಯಂಗ್ಯವಾಡಿದ್ದಾರೆ.
ಕೇವರ ಒಂದು ಪೋಸ್ಟರ್ ಹಾಕಿದ್ದಕ್ಕೆ ಆಮ್ ಆದ್ಮಿ ಪಕ್ಷದವರ ಮೇಲೆ 130ಕ್ಕೂ ಹೆಚ್ಚು ಕೇಸ್‌ಗಳನ್ನು ಹಾಕಲಾಗಿದೆ. ಇದಕ್ಕೆ ಮೋದಯವರ ಸಿಟ್ಟೇ ಕಾರಣ ಎಂದಿದ್ದಾರೆ ಅರವಿಂದ್ ಕೇಜ್ರಿವಾಲ್.
ಶಹೀದ್ ದಿವಸ್ ಸಂದರ್ಭದಲ್ಲಿ ನಾನು ಓರ್ವ ಬಿಜೆಪಿ ಕಾರ್ಯಕರ್ತನೊಂದಿಗೆ ಮಾತನಾಡುತ್ಡಿತಿದ್ದ್ದೇದೆ. ಆಗ ಆತ ಮೋದಿಜಿ ದಿನಕ್ಕೆ 18 ಗಂಟೆ ಕೆಲಸ ಮಾಡುತ್ತಾರೆ, ಕೇವಲ ಮೂರು ಗಂಟೆ ಮಲಗುತ್ತಾರೆ ಎಂದಿದ್ದ. ಮೂರು ಗಂಟೆ ಮಾತ್ರ ನಿದ್ದೆ ಮಾಡಿದರೆ ಅವರು ಕೆಲಸ ಹೇಗೆ ಮಾಡುತ್ತಾರೆ ಎಂದು ನಾನು ಕೇಳಿದೆ, ಮೋದಿಜಿಗೆ ದೈವಿಕ ಶಕ್ತಿ ಇದೆ ಎಂದು ಅವರು ಹೇಳಿದರು. ಅದು ದೈವಿಕ ಶಕ್ತಿಯಲ್ಲ, ಇದು ನಿದ್ರಾಹೀನತೆ ಎಂದು ನಾನು ಹೇಳಿದೆ. ಅದಕ್ಕಾಗೇ ಅವರು ದಿನವಿಡೀ ಸಿಟ್ಟಿನಿಂದ ಇರುತ್ತಾರೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.