Sunday, November 3, 2024
Homeಕ್ರೀಡೆಧೋನಿ ಕಾಲಿಗೆ ಬಿದ್ದ ಗಾಯಕ ಅರಿಜೀತ್ : ವಿಡಿಯೋ ವೈರಲ್

ಧೋನಿ ಕಾಲಿಗೆ ಬಿದ್ದ ಗಾಯಕ ಅರಿಜೀತ್ : ವಿಡಿಯೋ ವೈರಲ್

ಅಹಮದಾಬಾದ್: ಭಾರತೀಯ ಕ್ರಿಕೆಟ್ ದಿಗ್ಗಜ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಎಂದರೆ ಎಲ್ಲರಿಗೂ ತುಸು ಅಭಿಮಾನ ಹೆಚ್ಚು. ಅವರ ಆಟದ ವೈಖರಿ, ನಾಯಕತ್ವದ ಗುಣ, ತಂಡವನ್ನು ಮುನ್ನಡೆಸುವ ರೀತಿ ಹೀಗೆ ನಾನಾ ಕಾರಣಗಳಿಂದ ದೋನಿಯನ್ನು ಮೆಚ್ಚಿ ಕೊಂಡಾಡುತ್ತಾರೆ.

ಶುಕ್ರವಾರ ಇಲ್ಲಿನ ಮೊಟೇರಾದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಆರಂಭವಾದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಉದ್ಘಾಟನಾ ಸಮಾರಂಭದಲ್ಲಿ ಕಾರ್ಯಕ್ರಮ ನೀಡಿದ ಗಾಯಕ ಅರಿಜೀತ್ ಸಿಂಗ್ ಮಹೇಂದ್ರ ಸಿಂಗ್ ಧೋನಿ ಅವರ ಕಾಲು ಮುಟ್ಟಿ ನಮಸ್ಕರಿಸಿದ್ದು, ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಗಾಯಕ ಅರಿಜೀತ್ ಸಿಂಗ್ ಅವರು ಮಹೇಂದ್ರ ಸಿಂಗ್ ಧೋನಿ ಅವರ ಆಶೀರ್ವಾದ ಪಡೆಯುವುದರ ಮೂಲಕ ಗೌರವ ಅರ್ಪಿಸಿದ್ದಾರೆ.

ಬಹುಭಾಷಾ ನಟಿಯರಾದ ಕನ್ನಡತಿ ರಶ್ಮಿಕಾ ಮಂದಣ್ಣ ಹಾಗೂ ತಮನ್ನಾ ಭಾಟಿಯಾ ಸಹ ಸಮಾರಂಭದಲ್ಲಿ ನೃತ್ಯ ಪ್ರದರ್ಶನ ಮೂಲಕ ಕಾರ್ಯಕ್ರಮಕ್ಕೆ ಮೆರುಗು ನೀಡಿದರು.

ಸತತ 16ನೇ ಐಪಿಎಲ್ ಆಡುತ್ತಿರುವ ಧೋನಿ, ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕರಾಗಿದ್ದಾರೆ. ಅವರು ಉದ್ಘಾಟನಾ ಪಂದ್ಯದಲ್ಲಿ 8ನೇ ಕ್ರಮಾಂಕದಲ್ಲಿ ಕಣಕ್ಕಿಳಿದು ತಲಾ ಒಂದು ಬೌಂಡರಿ ಮತ್ತು ಸಿಕ್ಸರ್ ಸಹಿತ 7 ಎಸೆತಗಳಲ್ಲಿ 14 ರನ್ ಗಳಿಸಿ ಅಜೇಯವಾಗಿ ಉಳಿದರು.

ಹೆಚ್ಚಿನ ಸುದ್ದಿ

error: Content is protected !!