Thursday, March 12, 2026
Homeಟಾಪ್ ನ್ಯೂಸ್AR RAHMAN : ಎ.ಆರ್. ರೆಹಮಾನ್​​​​​​​​​ಗೆ ಮತ್ತೊಂದು ಗೌರವ, ರಾಜ್ಯ ಪ್ರಶಸ್ತಿ ಪ್ರಕಟ

AR RAHMAN : ಎ.ಆರ್. ರೆಹಮಾನ್​​​​​​​​​ಗೆ ಮತ್ತೊಂದು ಗೌರವ, ರಾಜ್ಯ ಪ್ರಶಸ್ತಿ ಪ್ರಕಟ

ತಮಿಳುನಾಡು : ಆಸ್ಕರ್ ಪ್ರಶಸ್ತಿ (Oscar award) ವಿಜೇತ ಸಂಗೀತ ನಿರ್ದೇಶಕ (Music composer) ಎ. ಆರ್. ರೆಹಮಾನ್ (AR Rahman) ಅವರಿಗೆ ಅತ್ಯುತ್ತಮ ಸಂಗೀಂತ ನಿರ್ದೇಶಕ ರಾಜ್ಯ ಪ್ರಶಸ್ತಿ ಘೋಷಣೆ ಮಾಡಲಾಗಿದ. ಮಣಿರತ್ನಂ ಅವರ ಪೊನ್ನಿಯಿನ್ ಸೆಲ್ವನ್ – ಐ ಚಿತ್ರದ ಹಾಡಿಗೆ ರೆಹಮಾನ್ ಅವರಿಗೆ ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ ನೀಡಲಾಗಿದೆ.

ಇದನ್ನೂ ಓದಿ : ಬಾಲಿವುಡ್‌ನಲ್ಲಿ ಅವಕಾಶ ಕಡಿಮೆ: ಕೋಮುವಾದದ ಮನಸ್ಥಿತಿ ಕಾರಣವಾಗಿರಬಹುದು ಎಂದ ಎ.ಆರ್. ರೆಹಮಾನ್

ಈ ಬಗ್ಗೆ ಪ್ರತಿಕ್ರಿಯಿಸಿರುವ ರೆಹಮಾನ್, ನನ್ನ ಪೊನ್ನಿಯಿನ್ ಸೆಲ್ವನ್ – ಐ ಚಿತ್ರಕ್ಕಾಗಿ ತಮಿಳುನಾಡು ರಾಜ್ಯ ಸರ್ಕಾರದ ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿಯನ್ನ ನೀಡಿರುವುದು ಗೌರವ ತಂದಿದೆ. ಈ ಮನ್ನಣೆಗಾಗಿ ತಮಿಳುನಾಡು ಸರ್ಕಾರಕ್ಕೆ ನನ್ನ ಹೃತ್ಪೂರ್ವಕ ಧನ್ಯವಾದಗಳು ಎಂದು ರೆಹಮಾನ್ ಪೋಸ್ಟ್ ಮಾಡಿದ್ದಾರೆ.

ಕಳೆದ ಕೆಲವೇ ದಿನಗಳ ಹಿಂದೆ ಬಾಲಿವುಡ್ ನಲ್ಲಿ ತಮಗೆ ಅವಕಾಶ ಸಿಗದಿರಲು ಕೋಮುವಾದಿ ಮನಸ್ಥಿತಿಗಳು ಹೆಚ್ಚಾಗಿರುವುದೇ ಕಾರಣ ಇರಬಹುದು ಎಂಬ ಹೇಳಿಕೆ ನೀಡುವ ಮೂಲಕ ಸಂಗೀತ ನಿರ್ದೇಶ ಎ.ಆರ್ ರೆಹಮಾನ್ ದೊಡ್ಡ ವಿವಾದ ಸೃಷ್ಟಿಸಿದ್ದರು.

ಹೆಚ್ಚಿನ ಸುದ್ದಿ

Change Language »
error: Content is protected !!