ಬೆಂಗಳೂರು: ಇಂದಿಗೆ (ಏಪ್ರಿಲ್ 3, 2023) 50 ವರ್ಷಗಳ ಹಿಂದೆ ವಿಶ್ವವು ಮೊಟ್ಟ ಮೊದಲ ಮೊಬೈಲ್ ಕರೆ ಮಾಡುವ ಮೂಲಕ ಪ್ರಪಂಚವು ಐತಿಹಾಸಿಕ ಘಟನೆಯೊಂದಕ್ಕೆ ಸಾಕ್ಷಿಯಾಗಿತ್ತು.
ಏಪ್ರಿಲ್ 3, 1973 ರಂದು ಮೊಬೈಲ್ ಪಿತಾಮಹಾ ಎಂದೇ ಹೆಸರಾದ ಮಾರ್ಟಿನ್ ಕೂಪರ್ ಅವರು ಅಂದು ಡೈನಾಟಾಕ್ ಎಂದು ಕರೆಯಲ್ಪಡುವ ಮೊಬೈಲ್ ಸಾಧನದಿಂದ ಮೊಟ್ಟ ಮೊದಲ ಬಾರಿಗೆ ಕರೆ ಮಾಡಿದರು.
ಮಾರ್ಟಿನ್ ಕೂಪರ್ ಅವರು ತನ್ನ ಜೇಬಿನಿಂದ ಫೋನ್ ಪುಸ್ತಕವನ್ನು ತೆಗೆದು ಸಂಖ್ಯೆಯನ್ನು ಡಯಲ್ ಮಾಡುವ ಮೂಲಕ ಮೊಟ್ಟ ಮೊದಲ ಬಾರಿಗೆ ಮೊಬೈಲ್ ಮೂಲಕ ಕರೆ ಮಾಡಿದರು. ಮೊಟೊರೊಲಾ ಮೊಬೈಲ್‌ನಿಂದ ಮೊದಲ ಕರೆಯನ್ನು ನ್ಯೂಜರ್ಸಿಯ ಬೆಲ್ ಲ್ಯಾಬ್ ಗೆ ಮಾಡಲಾಗಿತ್ತು ಎಂಬುದು ಇಂದಿಗೆ ಇತಿಹಾಸ.
ಸ್ಥಿರ ದೂರವಾಣಿಯನ್ನೇ ನಂಬದಂತಹ ಕಾಲದಲ್ಲಿ ಮಾರ್ಟಿನ್ ಕೂಪರ್ ಅವರು ಮೊಬೈಲ್ ಮೂಲಕ ಕರೆ ಮಾಡಿದ್ದು ವಿಶ್ವದಾದ್ಯಂತ ಜನರಿಗೆ ಆಶ್ಚರ್ಯವನ್ನುಂಟು ಮಾಡಿತು. ಅಷ್ಟು ಸಣ್ಣ ಸಾಧನದಿಂದ ಯಾವುದೇ ವೈರ್ ಸಂಪರ್ಕ ಇಲ್ಲದೆ ಕರೆ ಮಾಡಿದ್ದು ಅಂದು ಯಾರಿಗೂ ನಂಬಲಾಗದಂತಹ ಪ್ರಮುಖ ವಿಷಯವಾಗಿತ್ತು.