Thursday, April 16, 2026
Homeಕ್ರೀಡೆVIRENDRA SINGH YADAV: ಪದ್ಮಶ್ರೀ ಹಿಂದಿರುಗಿಸಿದ ಮತ್ತೋರ್ವ ಕುಸ್ತಿಪಟು

VIRENDRA SINGH YADAV: ಪದ್ಮಶ್ರೀ ಹಿಂದಿರುಗಿಸಿದ ಮತ್ತೋರ್ವ ಕುಸ್ತಿಪಟು

ಮುಂಬಯಿ: ಭಾರತೀಯ ಕುಸ್ತಿ ಫೆಡರೇಶನ್ (Indian Wrestling Federation) ವಿರುದ್ಧ ಕುಸ್ತಿ ಪಟುಗಳ (wrestlers) ಆಕ್ರೋಶ ದಿನೇದಿನೇ ಹೆಚ್ಚಾಗುತ್ತಲೇ ಇದೆ. ಕುಸ್ತಿಪಟು ಸಾಕ್ಷಿ ಮಲಿಕ್ (sakshi Malik) ಕುಸ್ತಿಗೆ ವಿದಾಯ ಹೇಳಿದ ಬೆನ್ನಲ್ಲೇ ಬಜರಂಗ್ ಪೂನಿಯಾ (Bajrang Punia) ಪದ್ಮಶ್ರೀ (Padma Shri) ಹಿಂದಿರುಗಿಸಿದ್ದಾರೆ. ಇದೀಗ ಮತ್ತೋರ್ವ ಕುಸ್ತಿಪಟು ಕೂಡ ಸಾಕ್ಷಿಗೆ ಬೆಂಬಲವಾಗಿ ತಮ್ಮ ಪದ್ಮಶ್ರೀಯನ್ನು ಹಿಂದಿರುಗಿಸುವುದಾಗಿ ಘೋಷಿಸಿದ್ದಾರೆ.

ಭಾರತೀಯ ಕುಸ್ತಿ ಫೆಡರೇಶ್ ಅಧ್ಯಕ್ಷರಾಗಿ ಬ್ರಿಜ್ ಭೂಷಣ್ ಸಿಂಗ್ (Brij Bhushan Singh) ಆಪ್ತ ಸಂಜಯ್ ಸಿಂಗ್ (Sanjay Singh) ಆಯ್ಕೆಯಾಗಿರುವುದನ್ನು ವಿರೋಧಿಸಿ ಸಾಕ್ಷಿ ಮಲಿಕ್ ಕುಸ್ತಿಗೆ ವಿದಾಯ ಹೇಳಿದರು. ಇದೀಗ ಅವರಿಗೆ ಕುಸ್ತಿಪಟು ವೀರೇಂದ್ರ ಸಿಂಗ್ ಯಾದವ್ (virendra singh yadav) ಬೆಂಬಲ ಘೋಷಿಸಿದ್ದಾರೆ.

ಕುಸ್ತಿಪಟು ಬಜರಂಗ್ ಪೂನಿಯಾ ಪದ್ಮಶ್ರೀ ಮರಳಿಸಿದ ಬೆನ್ನಲ್ಲೇ ವೀರೇಂದ್ರ ಸಿಂಗ್ ಕೂಡ ಪದ್ಮಶ್ರೀ ವಾಪಸ್ ಕೊಡುವುದಾಗಿ ಹೇಳಿದ್ದಾರೆ.

ಈ ಕುರಿತು ಎಕ್ಸ್ ನಲ್ಲಿ (x) ಟ್ವಿಟ್ ಮಾಡಿರುವ ಅವರು, ನಾನು ನನ್ನ ಸಹೋದರಿ, ದೇಶದ ಮಗಳಿಗಾಗಿ ಪದ್ಮಶ್ರೀಯನ್ನು ಹಿಂದಿರುಗಿಸುತ್ತಿದ್ದೇನೆ. ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿಯವರೇ ಸಾಕ್ಷಿ ಮಲಿಕ್ ಬಗ್ಗೆ ನನಗೆ ಹೆಮ್ಮಯಿದೆ. ಈ ಬಗ್ಗೆ ದೇಶದ ಉನ್ನತ ಆಟಗಾರರ ನಿರ್ಧಾರವನ್ನು ಕೋರುತ್ತೇನೆ ಎಂದು ಹೇಳಿ ಟ್ವಿಟ್ ಅನ್ನು ಕ್ರಿಕೆಟ್ ತಾರೆ ಸಚಿನ್ ತೆಂಡೂಲ್ಕರ್, ಜಾವೆಲಿನ್ ಆಟಗಾರ ನೀರಜ್ ಚೋಪ್ರಾ ಅವರಿಗೆ ಟ್ಯಾಗ್ ಮಾಡಿದ್ದಾರೆ.

ಸಾಕ್ಷಿ ಮಲಿಕ್ ಅವರನ್ನು ಬೆಂಬಲಿಸಿ ಶುಕ್ರವಾರ ಸಂಜೆ ಬಜರಂಗ್ ಪೂನಿಯಾ ಅವರು ತಮ್ಮ ಪದ್ಮಶ್ರೀ ಪ್ರಶಸ್ತಿಯನ್ನು ದೆಹಲಿಯ ಕರ್ತವ್ಯ ಪಥದಲ್ಲಿ ಇಟ್ಟು ಇದನ್ನು ಪ್ರಧಾನಿ ಮೋದಿಯವರಿಗೆ ತಲುಪಿಸಿ ಎಂದಿದ್ದರು. ಬಳಿಕ ಪೊಲೀಸರು ಪ್ರಶಸ್ತಿಯನ್ನು ತೆಗೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ.

ಈ ಕುರಿತು ಮಾತನಾಡಿರುವ ಪೂನಿಯಾ, ಮಹಿಳಾ ಕುಸ್ತಿಪಟುಗಳಿಗೆ ಸರಿಯಾದ ಗೌರವ ಸಿಗದಿದ್ದಾಗ ನಾನು ಈ ಪ್ರಶಸ್ತಿ ಇಟ್ಟುಕೊಳ್ಳುವುದರಲ್ಲಿ ಅರ್ಥವಿಲ್ಲ. ನಮ್ಮ ಹೋರಾಟ ಸರ್ಕಾರದ ವಿರುದ್ಧವಲ್ಲ ಒಬ್ಬ ವ್ಯಕ್ತಿಯ ವಿರುದ್ದ. ನಾನು ನ್ಯಾಯಾಂಗವನ್ನು ನಂಬುತ್ತೇನೆ. ಆದರೆ, ಈಗ ಏನಾಗ್ತಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಹೆಚ್ಚಿನ ಸುದ್ದಿ

Change Language »
error: Content is protected !!