ಚೆನ್ನೈ : ತಮಿಳುನಾಡು ( Tamilnadu ) ಎಲೆಕ್ಷನ್ ಗೂ ಮುನ್ನ ಬಿಜೆಪಿಗೆ (Bjp ) ದೊಡ್ಡ ಶಾಕ್ ಎದುರಾಗಿದೆ. ಆರು ಜಿಲ್ಲೆಗಳ ಚುನಾವಣಾ ಉಸ್ತುವಾರಿಯಾಗಿದ್ದ ಮಾಜಿ ಐಪಿಎಸ್ ಅಧಿಕಾರಿ ಕೆ.ಅಣ್ಣಾಮಲೈ (Annamalai) ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ತಂದೆಯ ಆರೈಕೆಗಾಗಿ ಕೊಯಮತ್ತೂರಿನಲ್ಲಿ ಇರಬೇಕಾಗಿರುವುದರಿಂದ ಚುನಾವಣೆಯಲ್ಲಿ ಪ್ರಯಾಣಿಸುವ ಸ್ಥಿತಿಯಲ್ಲಿಲ್ಲ. ಹೀಗಾಗಿ ಚುನಾವಣಾ ಕೆಲಸದ ಜವಾಬ್ದಾರಿಯನ್ನು ನಿರಾಕರಿಸಿರುವುದಾಗಿ ಅಣ್ಣಾಮಲೈ ಹೇಳಿದ್ದಾರೆ.
ಮತ್ತೊಂದೆಡೆ ಕೇವಲ 6 ಕ್ಷೇತ್ರಗಳ ಜವಾಬ್ದಾರಿ ವಹಿಸಿದ ಹಿನ್ನೆಲೆಯಲ್ಲಿ ರಾಜ್ಯ ನಾಯಕತ್ವದ ವಿರುದ್ಧ ಅಣ್ಣಾಮಲೈ ಮುನಿಸಿಕೊಂಡಿದ್ದಾರೆ. AIADMK ವಿಷಯದಲ್ಲಿ ಬಿಜೆಪಿ ಧೋರಣೆಯೂ ಅಸಮಾಧಾನ ತಂದಿದೆ ಎಂದು ಮೂಲಗಳು ತಿಳಿಸಿವೆ.
ಎಐಎಡಿಎಂಕೆ ಜತೆ ಬಿಜೆಪಿ ಮೈತ್ರಿ ಮಾಡಿಕೊಳ್ಳುವ ಸಲುವಾಗಿ ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿದ ನಂತರ ಅಣ್ಣಾಮಲೈ ಅವರನ್ನು ಕಡೆಗಣಿಸಲಾಗುತ್ತಿದೆ ಎನ್ನಲಾಗುತ್ತಿದ್ದು, ಈ ಸಲ ಎಲೆಕ್ಷನ್ ಗೂ ಅಣ್ಣಾಮಲೈ ಸ್ಪರ್ಧಿಸೋದಿಲ್ಲ ಎಂಬ ಗುಸುಗುಸು ಆರಂಭವಾಗಿದೆ.
ಇನ್ನು,ವೈಯಕ್ತಿಕ ಕಾರಣಗಳಿಂದ ಚುನಾವಣೆಗೆ ಸಂಬಂಧಿಸಿದ ಕೆಲಸಗಳಿಗಾಗಿ ನಿಯೋಜಿಸಲಾದ ಜವಾಬ್ದಾರಿಗಳನ್ನು ನಿರ್ವಹಿಸಲು ನಾನು ಅಸಮರ್ಥನಾಗಿದ್ದೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನೈನಾರ್ ನಾಗೇಂದ್ರನ್ ಅವರಿಗೆ ಅಣ್ಣಾಮಲೈ ತಿಳಿಸಿದ್ದಾರೆ.
ಅಣ್ಣಾಮಲೈ ಅವರನ್ನು ಕಾರೈಕುಡಿ, ಸಿಂಗನಲ್ಲೂರು, ಶ್ರೀವೈಕುಂಟಂ, ವಿರುಗಂಬಕ್ಕಂ, ಮಧುರೈ (ದಕ್ಷಿಣ), ಪದ್ಮನಾಭಪುರಂ ವಿಧಾನಸಭಾ ಕ್ಷೇತ್ರಗಳಿಗೆ ಅಣ್ಣಾಮಲೈ ಅವರನ್ನು ಚುನಾವಣಾ ಉಸ್ತುವಾರಿಯಾಗಿ ಬಿಜೆಪಿ ನೇಮಿಸಿತ್ತು.
ಇದನ್ನೂ ಓದಿ : ಕುಡಿದು ಹುಚ್ಚಾಟ ನಡೆಸಿದ ಕೇರಳ ಕುಟ್ಟಿಗಳು – ಟೋಲ್ ಬಳಿ ಪಟಾಕಿ ಹಚ್ಚಿ ರಂಪ! – VIDEO