ಬೆಂಗಳೂರು: ಏ. 4 ರ ಮಂಗಳವಾರದಂದು ಮಹಾವೀರ ಜಯಂತಿ ಪ್ರಯುಕ್ತ ಬಿಬಿಎಂಪಿ ವ್ಯಾಪ್ತಿಯಲ್ಲಿ ಮಾಂಸ ಮಾರಾಟವನ್ನು ನಿಷೇಧಿಸಲಾಗಿದೆ. ಈ ಕುರಿತು ಬಿಬಿಎಂಪಿ ಭಾನುವಾರ ಸುತ್ತೋಲೆ ಹೊರಡಿಸಿದೆ.
ಬಿಬಿಎಂಪಿ ಸುತ್ತೋಲೆಯಲ್ಲಿ ಮಂಗಳವಾರ ಪಾಲಿಕೆ ವ್ಯಾಪ್ತಿಯ ಕಸಾಯಿಖಾನೆಗಳಲ್ಲಿ ಪ್ರಾಣಿವಧೆ ಹಾಗೂ ಮಳಿಗೆಗಳಲ್ಲಿ ಮಾಂಸ ಮಾರಾಟವನ್ನು ನಿಷೇಧಿಸಿರುವುದಾಗಿ ಪಶುಪಾಲನಾ ಇಲಾಖೆಯ ಜಂಟಿ ನಿರ್ದೇಶಕರು ಆದೇಶಿಸಿದ್ದಾರೆ.
ಶ್ರೀರಾಮನವಮಿಯ ದಿನದಂದೂ ಸಹ ಪ್ರಾಣಿವಧೆ ಹಾಗೂ ಮಾಂಸಮಾರಾಟ ನಿಷೇಧಿಸಲಾಗಿತ್ತು.