ಆಂಧ್ರಪ್ರದೇಶ : ವೈಎಸ್‌ಆರ್‌ಸಿಪಿ (YSRCP) ಪಕ್ಷದ ನಾಯಕ, ಮಾಜಿ ಸಚಿವ ಅಂಬಟಿ ರಾಮ್ (Ambati ram babu) ಬಾಬು ಅವರ ಮನೆಯ ಮೇಲೆ ತೆಲುಗು ದೇಶಂ ಪಕ್ಷದ (TDP workers) ಕಾರ್ಯಕರ್ತರ ದೊಡ್ಡ ಗುಂಪು ಹಲ್ಲೆ ನಡೆಸಿದೆ. ಈ ವೇಳೆ ಕೆಲವರು ಮಾರಕಾಸ್ತ್ರಗಳನ್ನು ಹೊಂದಿದ್ದು ತಮ್ಮನ್ನು ಕೊಲ್ಲುವ ಉದ್ದೇಶವಿತ್ತು ಎಂದು ರಾಮ್ ಬಾಬು ಆರೋಪಿಸಿದ್ದಾರೆ.
ಇದನ್ನೂ ಓದಿ : ಶಿಕ್ಷಕನಿಗೆ ನೀರು ತರಲು ಹೋದ ವಿದ್ಯಾರ್ಥಿನಿ ಕರೆಂಟ್ ಶಾಕ್‌ಗೆ ಬ*ಲಿ
ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರ ಕುಮ್ಮಕ್ಕಿನಿಂದ ಟಿಡಿಪಿ ಶಾಸಕಿ ಗಲ್ಲಾ ಮಾಧವಿ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ನಾರಾ ಲೋಕೇಶ್ ಅವರ ಸೂಚನೆಯಂತೆ ಈ ದಾಳಿ ನಡೆಸಲಾಗಿದೆ ಎಂದು ಮಾಜಿ ಶಾಸಕ ಅಂಬಟಿ ರಾಮ್ ಬಾಬು ಆರೋಪಿಸಿದ್ದು, ತಮ್ಮನ್ನು ಕೊಲ್ಲುವ ಸಂಚು ರೂಪಿಸಲಾಗಿತ್ತು ಎಂದು ಆರೋಪಿಸಿದ್ದಾರೆ.
ಮಾಜಿ ಮಂತ್ರಿ ಅಂಬಟಿ ರಾಮ್ಬಾಬು ಕಚೇರಿ ಮೇಲೆ ಟಿಡಿಪಿ ಕಾರ್ಯಕರ್ತರಿಂದ ದಾಳಿ!#BIGBREAKINGNEWS#AttemptedMurder #ambatirambabu #TDP #KannadaNews #navasamajanews pic.twitter.com/PZFgaMsm9r
— navasamaja (@navasamajanews) January 31, 2026
ಇದ್ದಕ್ಕಿದ್ದಂತೆ ನಿವಾಸಕ್ಕೆ ಬಲವಂತವಾಗಿ ನುಗ್ಗಿದ ಗುಂಪೊಂದು ತಮ್ಮ ಮನೆಯನ್ನು ಧ್ವಂಸ ಮಾಡಿ ದೊಡ್ಡ ಹಾನಿಯನ್ನುಂಟುಮಾಡಿದೆ. ಈ ವೇಳೆ ಮಾರಕ ಶಸ್ತ್ರಾಸ್ತ್ರಗಳ ಬಳಕೆ ಮತ್ತು ಮಾರಣಾಂತಿಕ ಹಲ್ಲೆಗೆ ಉದ್ದೇಶಿಸಿದ್ದರು ಎಂದು ರಾಮ್ ಬಾಬು ಆರೋಪ ಮಾಡಿದ್ದಾರೆ. ಇಷ್ಟೆಲ್ಲಾ ನಡೆಯುತ್ತಿದ್ದರೂ ಪೊಲೀಸರು ಕೈಕಟ್ಟಿ ನಿಂತಿದ್ದರು ಎಂದು ಆರೋಪಿಸಿದ್ದಾರೆ.