Saturday, May 16, 2026
Homeಕ್ರೈಂCRIME: ATM ಕದಿಯಲು ಎಂಥಾ ಪ್ಲ್ಯಾನ್‌ ಮಾಡಿದ್ದಾರೆ ನೋಡಿ ಈ ಖದೀಮರು! VIDEO

CRIME: ATM ಕದಿಯಲು ಎಂಥಾ ಪ್ಲ್ಯಾನ್‌ ಮಾಡಿದ್ದಾರೆ ನೋಡಿ ಈ ಖದೀಮರು! VIDEO

ಧರ್ಮವರಂ: ಆಂಧ್ರಪ್ರದೇಶದ (Andra pradesh) ಶ್ರೀ ಸತ್ಯಸಾಯಿ ಜಿಲ್ಲೆಯ ಪಾರ್ಥಸಾರಥಿ ನಗರದಲ್ಲಿ ಬೊಲೆರೋ ವಾಹನ ಬಳಸಿ ಎಟಿಎಂ (ATM) ಒಂದನ್ನು ಅಪರಿಚಿತ ಕಳ್ಳರು ತೆಗೆದುಕೊಂಡು ಹೋಗಿರುವ ಘಟನೆ ನಡೆದಿದೆ.

ಬುಧವಾರ ಮುಂಜಾನೆ ವೇಳೆ ಬೊಲೆರೋ ವಾಹನದಲ್ಲಿ ಬಂದ ಮೂವರು ಮುಖವಾಡಧಾರಿ ಕಳ್ಳರು, ಐಡಿಎಫ್‌ಸಿ ಫಸ್ಟ್ ಬ್ಯಾಂಕ್‌ಗೆ (IDFC FIRST Bank) ಸೇರಿದ ಎಟಿಎಂ ಕೇಂದ್ರಕ್ಕೆ ನುಗ್ಗಿದ್ದಾರೆ. ಮೊದಲು ಕಬ್ಬಿಣದ ರಾಡ್‌ಗಳಿಂದ ಎಟಿಎಂ ಯಂತ್ರವನ್ನು ಒಡೆಯಲು ಯತ್ನಿಸಿದ್ದಾರೆ. ಆದರೆ ಅದು ಸಾಧ್ಯವಾಗದಿದ್ದಾಗ, ಯಂತ್ರಕ್ಕೆ ಹಗ್ಗವನ್ನು ಕಟ್ಟಿ ತಮ್ಮ ಬೊಲೆರೋ ವಾಹನದ ಮೂಲಕ ಜೋರಾಗಿ ಎಳೆದು ಬಳಿಕ ಇಡೀ ಎಟಿಎಂ ಯಂತ್ರವನ್ನೇ ವಾಹನಕ್ಕೆ ತುಂಬಿಸಿಕೊಂಡು ಕಳ್ಳರು ಪರಾರಿಯಾಗಿದ್ದಾರೆ.

ಜನನಿಬಿಡ ರಸ್ತೆಯ ಪಕ್ಕದಲ್ಲೇ ಈ ಘಟನೆ ನಡೆದಿರುವುದು ಸ್ಥಳೀಯ ನಿವಾಸಿಗಳಲ್ಲಿ ಆತಂಕ ಮೂಡಿಸಿದೆ. ಕಳ್ಳರು ಬತಲಪಲ್ಲಿ ಕಡೆಗೆ ಪರಾರಿಯಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಘಟನಾ ಸ್ಥಳಕ್ಕೆ ಧಾವಿಸಿರುವ ಪೊಲೀಸ್ ತಂಡಗಳು ತನಿಖೆ ಆರಂಭಿಸಿವೆ. ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದ್ದು, ಆರೋಪಿಗಳ ಪತ್ತೆಗಾಗಿ ವಿಶೇಷ ತಂಡಗಳನ್ನು ರಚಿಸಲಾಗಿದೆ. ಎಟಿಎಂನಲ್ಲಿ ಎಷ್ಟು ಹಣವಿತ್ತು ಎಂಬ ಬಗ್ಗೆ ಇನ್ನು ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.

ಹಣ ವಾಪಸ್ ಕೇಳಿದ್ದಕ್ಕೆ ಜಾತಿ ನಿಂದನೆ ಆರೋಪ – ಪಲಾಶ್ ಮುಚ್ಚಲ್ ವಿರುದ್ಧ ದೂರು ದಾಖಲು

ದೆಹಲಿ: ಬಾಲಿವುಡ್ ಸಂಗೀತ ಸಂಯೋಜಕ ಮತ್ತು ಚಲನಚಿತ್ರ ನಿರ್ಮಾಪಕ ಪಲಾಶ್ ಮುಚ್ಚಲ್ ವಿರುದ್ಧ ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಅಟ್ರೋಸಿಟಿ (SC/ST ಕಾಯ್ದೆ) ಪ್ರಕರಣ ದಾಖಲಾಗಿದೆ.

ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಉಪನಾಯಕಿ ಸ್ಮೃತಿ ಮಂಧಾನ ಅವರ ಗೆಳೆಯ ವಿಜ್ಞಾನ್ ಮಾನೆ ಎಂಬವರಿಗೆ ಜಾತಿ ನಿಂದನೆ ಮಾಡಿದ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ. ಹಣದ ವ್ಯವಹಾರಕ್ಕೆ ಸಂಬಂಧಿಸಿದಂತೆ ಪಲಾಶ್ ಮುಚ್ಚಲ್ ಅವರು ತಮ್ಮ ಮೇಲೆ ಜಾತಿ ನಿಂದನೆ ಮಾಡಿದ್ದಾರೆ ಎಂದು ಸಾಂಗ್ಲಿ ನಿವಾಸಿಯಾದ ವಿಜ್ಞಾನ್ ಮಾನೆ ಪೊಲೀಸ್ ದೂರು ನೀಡಿದ್ದಾರೆ.

‘ನಜರಿಯಾ’ (Nazariya) ಎಂಬ ಚಿತ್ರದ ಯೋಜನೆಗಾಗಿ 25 ಲಕ್ಷ ರೂಪಾಯಿ ಹೂಡಿಕೆ ಮಾಡಿಸಿಕೊಂಡು, ಅದನ್ನು ಮರಳಿ ನೀಡದೆ ವಂಚಿಸಿದ್ದಾರೆ ಮತ್ತು ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ನವೆಂಬರ್ 22 ರಂದು ಸಾಂಗ್ಲಿ-ಅಷ್ಟಾ ರಸ್ತೆಯ ಟೋಲ್ ಪ್ಲಾಜಾದಲ್ಲಿ ಹಣದ ವಿಚಾರವಾಗಿ ನಡೆದ ಜಗಳದ ಸಂದರ್ಭದಲ್ಲಿ ಪಲಾಶ್ ಮುಚ್ಚಲ್ ಜಾತಿ ನಿಂದನೆ ಮಾಡಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
ಸಾಂಗ್ಲಿ ಸಿಟಿ ಪೊಲೀಸ್ ಠಾಣೆಯಲ್ಲಿ ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯ ಸೆಕ್ಷನ್ 3(1)(R)(S) ಮತ್ತು ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 351(2), 352 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಈ ಸಂಬಂಧ ತನಿಖೆ ಪ್ರಗತಿಯಲ್ಲಿದೆ. ಈ ಹಿಂದೆ ಪಲಾಶ್ ಮುಚ್ಚಲ್ ಮತ್ತು ಸ್ಮೃತಿ ಮಂಧನಾ ಅವರ ವಿವಾಹ ನಿಶ್ಚಯವಾಗಿ, ನಂತರ ಮುರಿದುಬಿದ್ದಿತ್ತು.

ಹೆಚ್ಚಿನ ಸುದ್ದಿ

Change Language »
error: Content is protected !!