ಹೈದ್ರಾಬಾದ್: ಆಂಧ್ರಪ್ರದೇಶದ (Andra Pradesh) ಉಪಮುಖ್ಯಮಂತ್ರಿ (Dcm) ಮತ್ತು ಜನಸೇನಾ ಪಕ್ಷದ ಅಧ್ಯಕ್ಷ ಪವನ್ ಕಲ್ಯಾಣ್ (Pawan Kalyan) ತೆಲಂಗಾಣದ ಕಾಂಗ್ರೆಸ್ ನಾಯಕರ ವಿರುದ್ಧ ಗುಡುಗಿದ್ದಾರೆ. ತೆಲಂಗಾಣ ರಚನೆಯ ದಿನದಂದು ತಮ್ಮ ಪಕ್ಷ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಿದ ಸರ್ಕಾರದ ಕ್ರಮಕ್ಕೆ ಅವರು ಆಕ್ರೋಶ ವ್ಯಕ್ತಪಡಿಸಿದರು. ತೆಲಂಗಾಣ ಯಾವುದೇ ನಿರ್ದಿಷ್ಟ ರಾಜಕೀಯ ಗುಂಪು ಅಥವಾ ವ್ಯಕ್ತಿಯ ಸ್ವತ್ತಲ್ಲ ಎಂದು ಪ್ರಶ್ನಿಸಿದ ಅವರು, ರಾಜ್ಯವನ್ನು ಪ್ರವೇಶಿಸದಂತೆ ತಡೆಯಲು ಯತ್ನಿಸುತ್ತಿರುವ ನಾಯಕರ ಧೋರಣೆಯನ್ನು ಖಂಡಿಸಿದರು.
నేను ఇప్పటిదాకా నిర్ణయించుకోలేదు.. ఇప్పుడు చెబుతున్నా తెలంగాణలో జనసేన ఉంటుంది
తెలంగాణలో తిరుగుతాం.. పోటీ చేస్తాం
– పవన్ కళ్యాణ్ pic.twitter.com/QJA1tROYwS
— Telugu Scribe (@TeluguScribe) June 2, 2026
ನಾವು ಎಂದಿಗೂ ತೆಲಂಗಾಣ ರಾಜ್ಯ ರಚನೆಯನ್ನು ವಿರೋಧಿಸಿಲ್ಲ, ಬದಲಿಗೆ ಅಂದು ಸಂಸತ್ತಿನಲ್ಲಿ ವಿಭಜನೆ ನಡೆದ ಅಸಂವಿಧಾನಿಕ ವಿಧಾನವನ್ನು ಮಾತ್ರ ಪ್ರಶ್ನಿಸಿದ್ದಾಗಿ ಸ್ಪಷ್ಟಪಡಿಸಿದರು. ಹೈದರಾಬಾದ್ ನಗರದಲ್ಲಿ ಜನಸೇನಾ ಪಕ್ಷದ ಉಗಮವಾಗಿದ್ದು, ಅಲ್ಲಿ ಒಂದು ಲಕ್ಷಕ್ಕೂ ಹೆಚ್ಚು ನಿಷ್ಠಾವಂತ ಕಾರ್ಯಕರ್ತರಿದ್ದಾರೆ.ಆದ್ದರಿಂದ ಮುಂಬರುವ ದಿನಗಳಲ್ಲಿ ತೆಲಂಗಾಣದಲ್ಲಿ ರಾಜಕೀಯ ಚಟುವಟಿಕೆಗಳನ್ನು ವಿಸ್ತರಿಸುವುದರ ಜೊತೆಗೆ ಚುನಾವಣೆ ಎದುರಿಸುವುದು ತಮ್ಮ ಪಕ್ಷದ ಮುಖ್ಯ ಗುರಿಯಾಗಿದೆ ಎಂದರು.
ಇದನ್ನೂ ಓದಿ : ಶಾಸಕರನ್ನು ಬಿಟ್ಟು ಪ್ರೆಸ್‌ಮೀಟ್‌ಗೆ ಬಂದ ಸಂಸದ ಸುಧಾಕರ್‌ಗೆ ಸ್ವಪಕ್ಷದವರಿಂದಲೇ ತರಾಟೆ!
ತೆಲಂಗಾಣದ ಪ್ರತಿಯೊಂದು ಸಮಸ್ಯೆಗೆ ಆಂಧ್ರಪ್ರದೇಶದ ಜನರನ್ನು ಹೊಣೆ ಮಾಡುವುದು ಸರಿಯಲ್ಲ ಎಂದು ಎಚ್ಚರಿಸಿದ ಪವನ್ ಕಲ್ಯಾಣ್, ರಾಜಕೀಯ ಲಾಭಕ್ಕಾಗಿ ಪ್ರಾದೇಶಿಕ ಭಾವನೆಗಳನ್ನು ಕೆರಳಿಸುವ ಪ್ರಯತ್ನಗಳು ನಿಲ್ಲಬೇಕು ಎಂದು ಆಗ್ರಹಿಸಿದರು. ಕೇವಲ ಅಧಿಕಾರ ಹಿಡಿಯುವುದಕ್ಕಿಂತ ಸಾಮಾಜಿಕ ಒಳಗೊಳ್ಳುವಿಕೆ ಮತ್ತು ರಚನಾತ್ಮಕ ಬದಲಾವಣೆ ತರುವುದು ತಮ್ಮ ರಾಜಕೀಯದ ಆಶಯ ಎಂದು ಅವರು ಸ್ಪಷ್ಟಪಡಿಸಿದ್ದಾರೆ.