Wednesday, February 19, 2025
Homeಕ್ರೈಂSHOCKING : ಬೀದಿ ನಾಯಿ ಮೇಲೆ ಆಟೋ ಚಾಲಕನ ದರ್ಪ - ಮಲಗಿದ್ದ ನಾಯಿಯನ್ನು...

SHOCKING : ಬೀದಿ ನಾಯಿ ಮೇಲೆ ಆಟೋ ಚಾಲಕನ ದರ್ಪ – ಮಲಗಿದ್ದ ನಾಯಿಯನ್ನು ಕಲ್ಲಿಂದ ಜಜ್ಜಿ ಕೊಂದು ವಿಕೃತಿ

ಶಿವಮೊಗ್ಗ: ಶ್ವಾನಗಳನ್ನು ತಮ್ಮ ಕುಟುಂಬದ ಸದಸ್ಯರಂತೆ ಪ್ರೀತಿ ಮಾಡೋ ಲಕ್ಷಾಂತರ ಜನ ನಮ್ಮ ಮಧ್ಯೆ ಇದ್ದಾರೆ. ಆದ್ರೆ ಅದೇ ಶ್ವಾನಗಳಿಗೆ ಚಿತ್ರ ಹಿಂಸೆ ನೀಡಿ ವಿಕೃತಿ ಮೆರೆಯೋ ದುರುಳರು ಇದ್ದಾರೆ. ಇಂಥದ್ದೇ ಒಂದು ಘಟನೆ ಶಿವಮೊಗ್ಗದ ಹೊಸನಗರ ತಾಲೂಕಿನ ಕೆಂಚನಾಲ ಗ್ರಾಮದಲ್ಲಿ ನಡೆದಿದೆ.

ಇಲ್ಲಿನ ರೈಲ್ವೆ ನಿಲ್ದಾಣದ ಬಳಿ ತನ್ನ ಪಾಡಿಗೆ ತಾನು ಮಲಗಿದ್ದ ನಾಯಿಯ ಮೇಲೆ ವ್ಯಕ್ತಿಯೊಬ್ಬ ಕಲ್ಲು ಎತ್ತು ಹಾಕಿ ಕೊಂದು ವಿಕೃತಿ ಮೆರೆದಿದ್ದಾನೆ.ಆಟೋ ಚಾಲಕನೊಬ್ಬ ಈ ರೀತಿ ಕೃತ್ಯವೆಸಗಿದ್ದು ಸದ್ಯ ಆತನ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿ ಆರೋಪಿಯನ್ನು ಬಂಧಿಸಿದ್ದಾರೆ.

ಈ ವ್ಯಕ್ತಿಯನ್ನು ಕೆಂಚನಾಲ ಗ್ರಾಮದ ಆಟೋ ಚಾಲಕ ವಾಜೀದ್ ಎಂದು ಗುರುತಿಸಲಾಗಿದೆ.ಈ ಆರೋಪಿ ವಾಜೀದ್ ಮೊದಲಿಗೆ ದೊಡ್ಡ ಕಲ್ಲನ್ನು ಎತ್ತಿ ನಾಯಿಯ ಮೇಲೆ ಹಾಕುತ್ತಾನೆ, ಗಾಯಗೊಂಡ ನಾಯಿ ಕಿರುಚುತ್ತಾ ಅಲ್ಲೇ ಕುಸಿದು ಬಿದ್ದಿದೆ. ಆ ನಂತರ ಮತ್ತೊಮ್ಮೆ ಅದೇ ಕಲ್ಲನ್ನು ಎತ್ತಿ ಮತ್ತೆ ತಲೆ ಮೇಲೆ ಹಾಕಿದ್ದಾನೆ. ಇದರಿಂದ ನಾಯಿ ಅರ್ಧ ಜೀವವಾಗಿ ಬಿದ್ದಿದೆ.

ಆ ನಂತರ ಅಲ್ಲಿಂದ ತೆರಳಿದ ಈತ ಪುನಃ ಬಂದು
ಮತ್ತೆ ಕ್ರೂರವಾಗಿ ಅದೇ ಕಲ್ಲನ್ನು ನಾಯಿಯ ತಲೆ ಮೇಲೆ ಹಾಕಿ ನಾಯಿಯನ್ನು ಕೊಂದಿದ್ದಾನೆ. ಆ ನಂತರ ನಾಯಿಯನ್ನು ಆಟೋ ಹಿಂಬದಿಗೆ ಕಟ್ಟಿ ರಸ್ತೆಯಲ್ಲಿ ಅಮಾನುಷವಾಗಿ ಎಳೆದೊಯ್ದಿದ್ದಾನೆ.
ಈ ಘಟನೆ ಬಗ್ಗೆ ಮಾಜಿ ಕೇಂದ್ರ ಸಚಿವೆ ಹಾಗೂ ಪ್ರಾಣಿ ದಯಾ ಸಂಘದ ರಾಷ್ಟ್ರೀಯ ಕಾರ್ಯಕರ್ತೆ ಮೇನಕಾ ಗಾಂಧಿ ವಿಕೃತ ವ್ಯಕ್ತಿಯ ಮೇಲೆ ಪ್ರಕರಣ ದಾಖಲಿಸುವಂತೆ ಸೂಚಿಸಿದ್ದಾರೆ.

ಹೆಚ್ಚಿನ ಸುದ್ದಿ

error: Content is protected !!