ನವದೆಹಲಿ: ನಾನು ಯಾವುದೇ ಕಾರಣಕ್ಕೂ ಪಲಾಯನ ಮಾಡಲ್ಲ. ಆದಷ್ಟು ಬೇಗ ಜಗತ್ತಿನ ಮುಂದೆ ಕಾಣಿಸಿಕೊಳ್ಳುತ್ತೇನೆ ಎಂದು ಖಾಲಿಸ್ತಾನ ಬೆಂಬಲಿಗ ಅಮೃತ್ ಪಾಲ್ ಸಿಂಗ್ ಹೇಳಿದ್ದಾನೆ.
ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಮತ್ತೊಂದು ವಿಡಿಯೊದಲ್ಲಿ ಆತ ಈ ಮಾತುಗಳನ್ನು ಹೇಳಿದ್ದಾನೆ.
“ಯಾವುದೇ ಕಾರಣಕ್ಕೂ ನಾನು ಶರಣಾಗುವುದಿಲ್ಲ. ಶರಣಾಗತಿಗಾಗಿ ಯಾವ ಕಂಡಿಶನ್ ಕೂಡ ಹಾಕಿಲ್ಲ. ನಾನು ಸಾವಿಗೆ ಹೆದರಿಲ್ಲ. ಬೇಗ ಜಗತ್ತಿನ ಎದುರು ಕಾಣಿಸಿಕೊಳ್ಳಲಿದ್ದೇನೆ. ವಿದೇಶಗಳಿಗೆ ಹೋಗಿ ಅಲ್ಲಿಂದ ವಿಡಿಯೊ ಕಳುಹಿಸುವವನು ನಾನಲ್ಲ” ಎಂದು ಅಮೃತ್ ಪಾಲ್ ವಿಡಿಯೊದಲ್ಲಿ ಹೇಳಿದ್ದಾನೆ.