Tuesday, November 5, 2024
Homeದೇಶಈ ಕಾರಣಕ್ಕೆ ಕಾಸ್ಮೆಟಿಕ್ ಸರ್ಜರಿ ಮಾಡಿಸಿಕೊಂಡಿದ್ದ ಅಮೃತ್ ಪಾಲ್ ಸಿಂಗ್

ಈ ಕಾರಣಕ್ಕೆ ಕಾಸ್ಮೆಟಿಕ್ ಸರ್ಜರಿ ಮಾಡಿಸಿಕೊಂಡಿದ್ದ ಅಮೃತ್ ಪಾಲ್ ಸಿಂಗ್

ಪಂಜಾಬ್: ಸದ್ಯ ತಲೆಮರಿಸಿಕೊಂಡಿರುವ ವಾರಿಸ್ ಪಂಜಾಬ್ ದೇ ನಾಯಕ ಅಮೃತ್ ಪಾಲ್ ಸಿಂಗ್ 2022ರಲ್ಲಿ ಭಾರತಕ್ಕೆ ಬರುವ ಮೊದಲು ತಾನು ಖಾಲಿಸ್ತಾನಿ ನಾಯಕ ಜರ್ನೈಲ್ ಸಿಂಗ್ ಬಿಂಧ್ರನ್ವಾಲೆ ತರಹ ಕಾಣಿಸಲು ಜಾರ್ಜಿಯಾದಲ್ಲಿ ಕಾಸ್ಮೆಟಿಕ್ ಸರ್ಜರಿ ಮಾಡಿಸಿಕೊಂಡಿದ್ದ ಎಂದು ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.

ಸದ್ಯ ಅಸ್ಸಾಂ ಸೆಂಟ್ರಲ್ ಜೈಲ್ ನಲ್ಲಿ ಇರುವಂತಹ ಅಮೃತ್ ಪಾಲ್ ಆಪ್ತರು ಈ ಮಾಹಿತಿಯನ್ನು ಗುಪ್ತಚರ ಇಲಾಖೆಯೊಂದಿಗೆ ಹಂಚಿಕೊಂಡಿದ್ದಾರೆ ಎನ್ನಲಾಗಿದೆ.

ಈ ಸರ್ಜರಿಯಾಗಿ ಅಮೃತ್ ಪಾಲ್ ಸಿಂಗ್ ಸುಮಾರು ಎರಡು ತಿಂಗಳಷ್ಟು ಕಾಲ ಜಾರ್ಜಿಯಾದಲ್ಲಿ ಇದ್ದ ಎನ್ನುವ ಮಾಹಿತಿ ಲಭಿಸಿದೆ. ಅಮೃತ್ ಪಾಲ್ ನನ್ನು ಸೆರೆಹಿಡಿಯಲು ಪಂಜಾಬ್ ಪೊಲೀಸರು ನಿರಂತರ ಪ್ರಯತ್ನ ನಡೆಸುತ್ತಿದ್ದು, ಅಮೃತ್ ಪಾಲ್ ಎಲ್ಲಿದ್ದಾನೆ ಎನ್ನುವ ಮಾಹಿತಿ ಯಾರಿಗೂ ಇಲ್ಲ.

ಹೆಚ್ಚಿನ ಸುದ್ದಿ

error: Content is protected !!