Wednesday, November 13, 2024
Homeರಾಜಕೀಯಐವತ್ತು ಕೋಟಿ ರೂ. ವೆಚ್ಚದಲ್ಲಿ ಗೋರ್ಟಾ ಹುತಾತ್ಮರ ಸ್ಮಾರಕ ಅಭಿವೃದ್ಧಿ – ಅಮಿತ್ ಶಾ ಘೋಷಣೆ

ಐವತ್ತು ಕೋಟಿ ರೂ. ವೆಚ್ಚದಲ್ಲಿ ಗೋರ್ಟಾ ಹುತಾತ್ಮರ ಸ್ಮಾರಕ ಅಭಿವೃದ್ಧಿ – ಅಮಿತ್ ಶಾ ಘೋಷಣೆ

ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಪುತ್ಥಳಿ ಹಾಗೂ 103 ಅಡಿ ಎತ್ತರದ ತ್ರಿವರ್ಣ ಧ್ವಜವನ್ನು ಗೋರ್ಟಾ (ಬಿ) ಗ್ರಾಮದಲ್ಲಿ ಗೃಹಸಚಿವ ಅಮಿತ್ ಶಾ ಲೋಕಾರ್ಪಣೆಗೊಳಿಸಿದರು. ಚುನಾವಣಾ ಪ್ರಚಾರಕ್ಕೆ ಶನಿವಾರ ರಾತ್ರಿಯೇ ರಾಜ್ಯಕ್ಕೆ ಆಗಮಿಸಿರುವ ಅಮಿತ್ ಶಾ, ಭಾನುವಾರ ದಿನವಿಡೀ ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.
ಅನುಭವ ಮಂಟಪದ ಪರಿಕಲ್ಪನೆಯ ಮೂಲಕ ಜಗತ್ತಿಗೆ ಮೊತ್ತಮೊದಲ ಬಾರಿಗೆ ಸಂಸತ್ತನ್ನು ಪರಿಚಯಿಸದಂತಹ ಮಹಾತ್ಮ ಬಸವೇಶ್ವರರ ನಾಡು ಇದು. ಇಲ್ಲಿರಲು ಸಂತೋಷವಾಗುತ್ತಿದೆ ಎಂದು ನುಡಿದ ಅಮಿತ್ ಶಾ, ಹೈದರಾಬಾದ್ ನಿಜಾಮರ ದುರಾಡಳಿತದಲ್ಲಿ ಮೃತಪಟ್ಟ ಸ್ವಾತಂತ್ರ್ಯ ವೀರರ ಸ್ಮಾರಕ ಕಾರ್ಯಕ್ಕೆ ಚಾಲನೆ ನೀಡಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು. ಇದೇ ವೇಳೆ ಭಾರತೀಯ ಸೈನ್ಯವನ್ನು ಕಳುಹಿಸಿ ಗೋರ್ಟಾ ಗ್ರಾಮವನ್ನು ಬಂಧಮುಕ್ತಗೊಳಿಸಿದ ಪಟೇಲರ ಸಾಹಸವನ್ನು ಕಾಂಗ್ರೆಸ್ ಉದ್ದೇಶಪೂರ್ವಕವಾಗಿ ಮರೆತಿದೆ ಎಂದು ಟೀಕಿಸಿದರು.
ಐವತ್ತು ಕೋಟಿ ರೂ. ವೆಚ್ಚದಲ್ಲಿ ಹುತಾತ್ಮರ ಸ್ಮಾರಕವನ್ನು ಪ್ರವಾಸಿ ತಾಣವನ್ನಾಗಿ ಮಾರ್ಪಡಿಸುವ ಅಭಿವೃದ್ಧಿಕಾರ್ಯ ಪ್ರಾರಂಭವಾಗಲಿದೆ ಎಂದು ಅಮಿತ್ ಶಾ ನುಡಿದಿದ್ದಾರೆ.

ಹೆಚ್ಚಿನ ಸುದ್ದಿ

error: Content is protected !!