ಇಂದು ಕೇಂದ್ರ ಗೃಹಸಚಿವ ಬಿಜೆಪಿಯ ಪೊಲಿಟಿಕಲ್ ಮಾಸ್ಟರ್ ಮೈಂಡ್ ಅಮಿತ್ ಶಾ ಬೆಂಗಳೂರಿಗೆ ಆಗಮಿಸಿದ್ದಾರೆ. ನೆನ್ನೆ ರಾತ್ರಿ ಬೆಂಗಳೂರಿಗೆ ಬಂದವರು ಇವತ್ತು ಬೆಳಿಗ್ಗೆ ಮಾಜಿಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮನೆಗೆ ಉಪಾಹಾರಕ್ಕೆ ಬಂದಿದ್ರು.. ಅಲ್ಲಿ ಅಮಿತ್ ಶಾ ನಡೆದುಕೊಂಡ ರೀತಿ ಹಲವು ರಾಜಕೀಯ ಬದಲಾವಣೆಗಳ ಮುನ್ಸೂಚನೆ ನೀಡುವಂತಿತ್ತು.
ಬೆಳಿಗ್ಗೆ ಬಿಎಸ್‌ವೈ ಮನೆಗೆ ಕಾರಿನಲ್ಲಿ ಬಂದಿಳಿಯುತ್ತಿದ್ದಂತೆ ಯಡಿಯೂರಪ್ಪ ಹೂಗುಚ್ಛ ನೀಡಿ ಅವರನ್ನು ಸ್ವಾಗತಿಸಲು ಮುಂದಾದ್ರು.. ಆಗ ಅಮಿತ್ ಶಾ ವಿಜಯೇಂದ್ರರ ಕೈಯಿಂದಲೇ ಮೊದಲು ಹೂಗುಚ್ಛ ಕೊಡಿಸಿ ಎಂದು ತಾಕೀತು ಮಾಡಿದ್ರು. ಅರೆಕ್ಷಣ ಗೊಂದಲಕ್ಕೀಡಾದಂತೆ ಕಂಡ ಯಡಿಯೂರಪ್ಪ, ಮಗನ ಕೈಗೆ ಹೂಗುಚ್ಛ ನೀಡಿದ್ರು.. ನಂತರ ವಿಜಯೇಂದ್ರ ಅಮಿತ್ ಶಾಗೆ ಮೊದಲು ಹೂಗುಚ್ಛ ನೀಡಿ ಆತ್ಮೀಯವಾಗಿ ಸ್ವಾಗತ ಮಾಡಿದ್ರು. ವಿಜಯೇಂದ್ರ ನಂತರ ಯಡಿಯೂರಪ್ಪ ಹೂಗುಚ್ಛ ನೀಡಿದ್ರು.
ಇನ್ನು ಬ್ರೇಕ್‌ಫಾಸ್ಟ್ ಟೇಬಲ್‌ನಲ್ಲೂ ಕೂಡಾ ಅಮಿತ್ ಶಾರವರಿಗೆ ವಿಜಯೇಂದ್ರರೇ ತಿಂಡಿ ಬಡಿಸಿ ಉಪಚರಿಸಿದ್ರು. ತದನಂತರ ಉಪಾಹಾರಕ್ಕೆ ಬಂದಿದ್ದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ನಳಿನ್ಕುಮಾರ್ ಕಟೀಲು ಬಿಎಸ್‌ವ್ಐರೊಂದಿಗೆ ಚರ್ಚೆ ನಡೆಸಿದ್ರು..
ಅಮಿತ್ ಶಾ ರವರ ಈ ನಡವಳಿಕೆ ಬಿಎಸ್ ಯಡಿಯೂರಪ್ಪಗಿಂತ ಈಗ ರಾಜಕಾರಣದಲ್ಲಿ ಉದಯವಾಗುತ್ತಿರುವ ಯುವ ನಾಯಕ ಬಿ.ವೈ ವಿಜಯೇಂದ್ರರೇ ಮುಖ್ಯ ಎನ್ನುವಂತಿತ್ತು. ಅದಲ್ಲದೇ ಇತ್ತೀಚೆಗೆ ಸಚಿವ ಸೋಮಣ್ಣ ಕೂಡಾ ವಿಜಯೇಂದ್ರ ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದನ್ನು ಶಮನ ಮಾಡುವ ರೀತಿಯಲ್ಲೂ ಅಮಿತ್ ಶಾ ನಡೆದುಕೊಂಡಂತೆ ಕಾಣ್ತಿತ್ತು.
ಲಿಂಗಾಯತ ಮತಬ್ಯಾಂಕ್ ಭದ್ರವಾಗಿರಬೇಕಾದ್ರೆ ಯಡಿಯೂರಪ್ಪ ಕುಟುಂಬ ಬಿಜೆಪಿ ಜೊತೆ ನಿಲ್ಲುವುದು ಅನಿವಾರ್ಯ ಎಂಬುದನ್ನು ಮನಗಂಡಿರುವ ಬಿಜೆಪಿ ರಾಷ್ಟ್ರೀಯ ನಾಯಕರು ಇದೀಗ ಯಡಿಯೂರಪ್ಪರವರನ್ನು ಬಿಟ್ಟು ಚುನಾವಣೆ ಅಸಾಧ್ಯ ಎಂದು ತೀರ್ಮಾನಕ್ಕೆ ಬಂದಿದ್ದಾರೆ. ಇದದಕ್ಕಾಗಿಯೇ ಅಮಿತ್ ಶಾ ಇಷ್ಟೆಲ್ಲಾ ಓಲೈಕೆಯ ನಡವಳಿಕೆ ತೋರುತ್ತಿದ್ದಾರೆ ಎಂಬುದು ರಾಜಕೀಯ ಪಡಸಾಲೆಯಲ್ಲಿ ನಡೆಯುತ್ತಿರುವ ಚರ್ಚೆ.