ತಮ್ಮ 60ನೇ ವರ್ಷದಲ್ಲಿ ಮೂರನೇ ಬಾರಿ ಪ್ರೀತಿಯಲ್ಲಿ ಬಿದ್ದಿರುವ ನಟ ಅಮೀರ್ ಖಾನ್ ತಮ್ಮ ಹೊಸ ಪ್ರೇಯಸಿಯನ್ನು ತಿಳಿಸಿದ್ದಾರೆ.
ಮಾರ್ಚ್ 14 ಅಂದರೆ ಇಂದಿಗೆ ಅಮೀರ್ ಖಾನ್ ತಮ್ಮ 60ನೇ ವರ್ಷದ ಹುಟ್ಟು ಹಬ್ಬಕ್ಕೆ ಕಾಲಿಟ್ಟಿದ್ದು, ಇದಕ್ಕೂ ಮೊದಲು ತಮ್ಮ ಹೊಸ ಸಂಗಾತಿ ಗೌರಿ ಸ್ಪ್ರಾತ್ ಅವರನ್ನು ಪರಿಚಯಿಸಿದ್ದು, ಇವರು ಮೂಲತಃ ಬೆಂಗಳೂರಿನವರು ಮತ್ತು ಅಮೀರ್ ಖಾನ್ ಪ್ರೊಡಕ್ಷನ್ಸ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
25 ವರ್ಷಗಳ ಹಿಂದೆಯೇ ಗೌರಿ ಪರಿಚಯ ಆಗಿದ್ದು, ಅಂದಿನಿಂದ ಪರಸ್ಪರ ಭೇಟಿ ಆಗುತ್ತಿದ್ದೆವು. ಇದೀಗ ಜೊತೆಯಾಗಿ ಇರಲು ನಿರ್ಧರಿಸಿದ್ದು, ಕಳೆದ ಒಂದೂವರೆ ವರ್ಷದಿಂದ ಜೊತೆಗೆ ಇದ್ದೇವೆ ಎಂದು ಅಮೀರ್ ಖಾನ್ ಹೇಳಿದ್ದಾರೆ.
ಅಮಿರ್ ಖಾನ್ ಮೊದಲ ಪತ್ನಿ ರೀನಾ ಖಾನ್ ಗೆ ಎರಡು ಮಕ್ಕಳು ಇದ್ದಾರೆ. ಇನ್ನು 2005 ರಲ್ಲಿ ಕಿರಣ್ ರಾವ್ ಅವರನ್ನು ಎರಡನೇ ಮದುವೆ ಆಗಿದ್ದ ಅಮೀರ್ 2021ರಲ್ಲಿ ವಿಚ್ಛೇದನ ನೀಡಿದ್ದರು. ಇದೀಗ ಮೂರನೇ ಸಂಗತಿ ಗೌರಿ ಸ್ಪ್ರಾತ್ ಅವರೊಂದಿಗೆ ಜೀವನ ಕಳೆಯುತ್ತಿದ್ದಾರೆ.
ಗೌರಿ ಹೇರ್ ಡ್ರೆಸ್ಸಿಂಗ್‌ನಲ್ಲಿ ವೃತ್ತಿಪರ ಹಿನ್ನೆಲೆಯನ್ನು ಹೊಂದಿದ್ದಾರೆ ಮತ್ತು ಫ್ಯಾಶನ್‌ನಲ್ಲಿ ಪದವಿಯನ್ನು ಪಡೆದಿದ್ದಾರೆ. ಗೌರಿ ಅವರಿಗೆ ಈಗಾಗಲೇ ಮದುವೆಯಾಗಿದ್ದು, ಆರು ವರ್ಷದ ಮಗನಿದ್ದಾನೆ. ಆಮಿರ್ ಮಕ್ಕಳು ಮತ್ತು ಕುಟುಂಬಸ್ಥರು ಗೌರಿಯನ್ನು ಭೇಟಿಯಾಗಿದ್ದು, ತುಂಬಾ ಸಂತೋಷವಾಗಿದ್ದಾರೆ ಎಂದು ಅಮೀರ್ ತಿಳಿಸಿದ್ದಾರೆ.