ವಾಷಿಂಗ್ಟನ್: ಜೋ ಬೈಡನ್ ವಿರುದ್ಧ ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಪದೇ ಪದೇ ಕೆಂಡ ಕಾರುತ್ತಿದ್ದಾರೆ. ಜೋ ಬೈಡನ್ ನೀಡಿದ್ದ ಆಡಳಿತ ಅಮೆರಿಕದ ಈಗಿನ ಪರಿಸ್ಥಿತಿಗೆ ಕಾರಣ ಎಂಬ ಆರೋಪ ಕೂಡ ಮಾಡುತ್ತಿದ್ದಾರೆ ಟ್ರಂಪ್. ಇಷ್ಟೆಲ್ಲಾ ಬೆಳವಣಿಗೆ ನಡುವೆ ಜೋ ಬೈಡನ್ ನೇಮಕ ಮಾಡಿದ್ದ ಅಟಾರ್ನಿ ಜನರಲ್‌ಗಳ ಉಚ್ಛಾಟನೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದೇಶ ನೀಡಿದ್ದಾರೆ
ಅಮೆರಿಕದಲ್ಲಿ ಒಟ್ಟು 93 ಅಟಾರ್ನಿ ಜನರಲ್‌ಗಳು ಇದ್ದು, ಆ ದೇಶದ ಅತ್ಯುನ್ನತ ಕಾನೂನು ಅಧಿಕಾರಿಗಳಾಗಿ ಇವರು ಕಾರ್ಯನಿರ್ವಣೆ ಮಾಡುತ್ತಾರೆ. ಆದರೆ ಈಗಿರುವ ಎಲ್ಲಾ 93 ಅಟಾರ್ನಿ ಜನರಲ್‌ಗಳ ವಿರುದ್ಧ ಸಮರ ಸಾರಿರುವ ಡೊನಾಲ್ಡ್ ಟ್ರಂಪ್ , ಎಲ್ಲರನ್ನೂ ಮನೆಗೆ ಕಳುಹಿಸಲು ಆದೇಶ ಹೊರಡಿಸಿದ್ದಾರೆ.
ಜೋ ಬೈಡನ್ ಆಡಳಿತದಲ್ಲಿ ನೇಮಕವಾಗಿರುವ ಎಲ್ಲಾ ಅಟಾರ್ನಿ ಜನರಲ್‌ಗಳನ್ನು ತೆಗೆದು ಹಾಕಿ, ಕಾನೂನು ಇಲಾಖೆಯಲ್ಲಿ ಹಿಂದೆಂದೂ ಕಾಣದಷ್ಟು ರಾಜಕೀಯ ನಡೆಯುತ್ತಿದೆ ಎಂದು ಟ್ರಂಪ್ ಆರೋಪ ಮಾಡಿದ್ದಾರೆ.
ಕೆಲವು ದಿನಗಳ ಹಿಂದೆ ಸುಮಾರು 10,000 ಸರ್ಕಾರಿ ನೌಕರರ ಉಚ್ಛಾಟನೆಗೆ ಟ್ರಂಪ್ ಆದೇಶ ನೀಡಿದ್ದರು.