Sunday, January 25, 2026
Homeಕ್ರೈಂAMERICA : ಭಾರೀ ಪ್ರಮಾಣದ ಕೊಕೇನ್ ಸಾಗಾಟ - ಇಬ್ಬರು ಭಾರತೀಯರು ಯುಎಸ್‌ನಲ್ಲಿ ಅರೆಸ್ಟ್!

AMERICA : ಭಾರೀ ಪ್ರಮಾಣದ ಕೊಕೇನ್ ಸಾಗಾಟ – ಇಬ್ಬರು ಭಾರತೀಯರು ಯುಎಸ್‌ನಲ್ಲಿ ಅರೆಸ್ಟ್!

ಅಮೇರಿಕ : ಅಮೇರಿಕಾದಲ್ಲಿನ (America ) ದೊಡ್ಡ ಡ್ರಗ್ಸ್ (Illegal substance ) ಜಾಲದ ಮೇಲೆ ಸ್ಥಳೀಯ ಪೋಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿದ್ದು, ಮಾಫಿಯಾದಲ್ಲಿದ್ದ ಇಬ್ಬರು ಭಾರತೀಯರ ಮೇಲೆ ಕ್ರಮ ಆಗಿದೆ.

ಇಂಡಿಯಾನಾದಲ್ಲಿ 7 ಮಿಲಿಯನ್ ಡಾಲರ್ ಮೌಲ್ಯದ 309 ಪೌಂಡ್ ಕೊಕೇನ್ (Cocaine) ಸಾಗಿಸುತ್ತಿದ್ದ ಇಬ್ಬರು ಭಾರತೀಯ ಟ್ರಕ್ ಚಾಲಕರನ್ನು ಬಂಧಿಸಲಾಗಿದೆ.

25 ವರ್ಷದ ಗುರುಪ್ರೀತ್ ಸಿಂಗ್ ಮತ್ತು 30 ವರ್ಷದ ಜಸ್ವೀರ್ ಸಿಂಗ್ ಕ್ರಮವಾಗಿ 2017 ಮತ್ತು 2023 ರಲ್ಲಿ ಅಮೆರಿಕಕ್ಕೆ ಪ್ರವೇಶಿಸಿದ್ದರು. ಗುರುಪ್ರೀತ್ ಸಿಂಗ್ 2023ರ ಮಾರ್ಚ್ 11 ರಂದು ಅರಿಜೋನಾದಿಂದ ಅಕ್ರಮವಾಗಿ ಅಮೆರಿಕ ಪ್ರವೇಶಿಸಿದ್ದ. ಜಸ್ವೀರ್ ಸಿಂಗ್ 2017ರ ಮಾರ್ಚ್ 21 ರಂದು ಕ್ಯಾಲಿಫೋರ್ನಿಯಾದಿಂದ ಅಕ್ರಮವಾಗಿ ಅಮೆರಿಕ ಪ್ರವೇಶಿಸಿದ್ದ ಎಂದು ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ. ಕಾರ್ಯಾಚರಣೆ ವೇಳೆ ಟ್ರಕ್‌ನ ಸ್ಲೀಪರ್ ಬರ್ತ್‌ನಲ್ಲಿ ಕಂಬಳಿಯಿಂದ ಮುಚ್ಚಿದ ಹಲವಾರು ರಟ್ಟಿನ ಬಾಕ್ಸ್‌ಗಳು ಸಿಕ್ಕಿವೆ.

ಸೆಮಿ-ಟ್ರಕ್‌ನ ಸ್ಲೀಪರ್ ಬರ್ತ್‌ನಲ್ಲಿ ಕೊಕೇನ್ ಇರುವುದು ಕಂಡುಬಂದಿದೆ. ಹೈವೆಯಲ್ಲಿ ತೀವ್ರ ತಪಾಸಣೆ ವೇಳೆ ಇಬ್ಬರು ಸಿಕ್ಕಿಬಿದ್ದಿದ್ದಾರೆ.ಚಾಲಕರನ್ನು ಪುಟ್ನಮ್ ಕೌಂಟಿ ಜೈಲಿಗೆ ಕರೆದೊಯ್ಯಲಾಯಿತು. ಆರೋಪಿಗಳು ಮಾದಕ ದ್ರವ್ಯ ವ್ಯವಹಾರ ಆರೋಪಗಳನ್ನು ಎದುರಿಸುತ್ತಿದ್ದು, ಅವರ ಮೇಲೆ ಗಡೀಪಾರು ನಿರ್ಬಂಧಗಳನ್ನು ವಿಧಿಸಲಾಗಿದೆ.

ಇದನ್ನೂ ಓದಿ: ಮಲೆಯಾಳಿ ಭಾಷಾ ಮಸೂದೆ, ಕಾಸರಗೋಡಿನ ಕನ್ನಡಿಗರಿಗೆ ವಂಚನೆ: ಕೇರಳ ನಡೆಗೆ ಸಿದ್ದು ಖಂಡನೆ 

ಹೆಚ್ಚಿನ ಸುದ್ದಿ

Change Language »
While viewing the website, tap in the menu bar. Scroll down the list of options, then tap Add to Home Screen.
Use Safari for a better experience.
error: Content is protected !!