ಟೆಹ್ರಾನ್ : ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಕಾರ್ಮೋಡ ತಿಳಿಯಾಗುವ ಲಕ್ಷಣಗಳು ಕಾಣಿಸುತ್ತಿಲ್ಲ. ಅಮೆರಿಕದೊಂದಿಗೆ (America) ಸಂಘರ್ಷ ಅಂತ್ಯಗೊಳಿಸಲು ಇರಾನ್ (Iran) ಸಮ್ಮತಿ ಸೂಚಿಸಿದೆ. ಜೊತೆಗೆ ಅಮೆರಿಕದ ಪಡೆಗಳ ಮೇಲೆ ಭೀಕರ ದಾಳಿಗೆ ಯತ್ನಿಸಿದೆ. ಆದರೆ, ಏನೂ ಆಗಿಲ್ಲ ಎಂದು ಅಮೆರಿಕ ಹೇಳಿದೆ.
ಸುಧಾರಿತ ಕ್ಷಿಪಣಿಗಳು ಮತ್ತು ಡ್ರೋನ್‌ಗಳಿಂದ ದಾಳಿ ನಡೆಸಲಾಗಿದ್ದು, ಇರಾನ್‌ನ ಕಡಲ ಗಡಿಯಿಂದ ಸುಮಾರು 340 ಕಿ.ಮೀ ದೂರದಲ್ಲಿ ನೌಕೆ ಮೇಲೆ ದಾಳಿ ನಡೆದಿದೆ ಎಂದು ಇರಾನಿನ ಅಧಿಕಾರಿಗಳು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಯುದ್ಧ ಭೂಮಿಯಲ್ಲಿ ಕಾದಾಟ ಶುರುವಾಯ್ತು ಅಂದ್ರೆ ಅಲ್ಲಿ ಫೈಟರ್ ಜೆಟ್‌ಗಳು, ಮಾರಕ ಕ್ಷಿಪಣಿಗಳು ಘರ್ಜಿಸೋದು ಮಾಮೂಲಿ. ಆದರೆ, ಬರೀ ಶಸ್ತ್ರಾಸ್ತ್ರಗಳಿಂದಲೇ ಎದುರಾಳಿಯ ಎದೆ ನಡುಗಿಸೋದಕ್ಕೆ ಸಾಧ್ಯವಿಲ್ಲ. ಯಾಕಂದ್ರೆ, ರಣರಂಗದಲ್ಲಿ ಶಕ್ತಿಗಿಂತ ಯುಕ್ತಿ ಬಹಳ ಮುಖ್ಯ ಅನ್ನೋದನ್ನ ಇರಾನ್ ಈಗ ಇಡೀ ಜಗತ್ತಿಗೆ ಸಾರಿ ಸಾರಿ ಹೇಳ್ತಾ ಇದೆ.
ಬಲಿಷ್ಠ ಯುದ್ಧನೌಕೆಯೇ ಇರಾನ್ ಟಾರ್ಗೆಟ್
ಗಲ್ಫ್ ವಾರ್ಗೆ ಇರಾನ್ ಭಯಾನಕ ಟ್ವಿಸ್ಟ್ ಕೊಟ್ಟಿದೆ. ಮೆರಿಕದ ಬಲಿಷ್ಠ ಯುದ್ಧನೌಕೆ SS ಅಬ್ರಹಾಂ ಲಿಂಕನ್ ವಿಮಾನವಾಹಕ ನೌಕೆ ಮೇಲೆ ದಾಳಿ ನಡೆದಿದೆ. ಡ್ರೋನ್, ಮಿಸೈಲ್ಗಳ ಮೂಲಕ IRGC ಅಟ್ಯಾಕ್ ಮಾಡಿದೆ. ಈ ದಾಳಿಯಲ್ಲಿ ನೌಕೆಗೆ ಅಪಾರ ಹಾನಿಯಾಗಿದೆ ಎಂದು IRGC ಹೇಳಿದೆ.
ಯುದ್ಧ ನೌಕೆ ಜಸ್ಟ್ ಮಿಸ್!
ಇರಾನ್‌ನ ಐಆರ್ಜಿಸಿ ಪಕ್ಕಾ ಪ್ಲಾನ್ ಮಾಡಿ ದಾಳಿ ಮಾಡಿದೆ. ಆತ್ಮಾಹುತಿ ದೋಣಿಗಳನ್ನು ನೌಕೆ ಸಮೀಪಕ್ಕೆ ಕಳಿಸಲಾಗಿತ್ತು. ಅಮೆರಿಕ ಯೋಧರು ಯಾಮಾರಿದ್ರೂ ದೊಡ್ಡ ಅನಾಹುತ ಸಂಭವಿಸುತ್ತಿತ್ತು. ಆ ದೋಣಿಗಳ ಮೇಲೆ ಅಮೆರಿಕ ಪಡೆ ಗುಂಡಿನ ದಾಳಿ ಮಾಡಿವೆ. ಇರಾನ್ ದಾಳಿಯಿಂದ ಯುದ್ಧನೌಕೆ ಜಸ್ಟ್ ಮಿಸ್ ಆಗಿದೆ. ಅತ್ತ ಅಮೆರಿಕದ ಮತ್ತೊಂದು ವಿಮಾನವಾಹಕ ನೌಕೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ವಿಶ್ವದ ಅತಿದೊಡ್ಡ ಏರ್ಕ್ರಾಫ್ಟ್ ಕ್ಯಾರಿಯರ್ USS ಜೇರಾಲ್ಡ್ ಫೋರ್ಡ್ ಯುದ್ಧನೌಕೆಯಲ್ಲಿ ಬೆಂಕಿ ಕಾಣಿಸಿದೆ. ಈ ಘಟನೆಯಿಂದ ಮೂವರು ಯೋಧರಿಗೆ ಗಾಯಗಳಾಗಿವೆ.
ಏನೂ ಆಗಿಲ್ಲ ಎಂದ ಅಮೆರಿಕ
‘ಅಬ್ರಹಾಂ ಲಿಂಕನ್ ಕಾರ್ಯಾಚರಣೆಯ ತಂಡವು ಆಪರೇಷನ್ ಎಪಿಕ್ ಫ್ಯೂರಿ ಮತ್ತು ಸಮುದ್ರದಿಂದ ವಿದ್ಯುತ್ ಯೋಜನೆಗೆ ಬೆಂಬಲವನ್ನು ಮುಂದುವರೆಸಿದೆ’ ಎಂದು ಅಮೆರಿಕ ಸೆಂಟ್ರಲ್ ಕಮಾಂಡ್ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದೆ.
ಮಾರ್ಕ್ -45 ನೌಕಾ ಹಡಗಿನ ಬಂದೂಕನ್ನು ಬಳಸಿ ನಮ್ಮ ಹಡಗಿನ ಮೇಲೆ ಗುಂಡು ಹಾರಿಸಲು ಪ್ರಯತ್ನಿಸಲಾಯಿತು ಎಂದು ಅಮೆರಿಕದ ಇಬ್ಬರು ಅಧಿಕಾರಿಗಳು ಸಿಬಿಎಸ್ ನ್ಯೂಸ್‌ಗೆ ತಿಳಿಸಿದ್ದಾರೆ. ಬಳಿಕ, ಇರಾನ್ ಹಡಗಿನ ಮೇಲೆ ದಾಳಿ ನಡೆಸಲಾಯಿತು ಎಂದು ಅವರು ತಿಳಿಸಿದ್ದಾರೆ.
ಇರಾಕ್ನ ತೈಲ ರಿಫೈನರಿ ಮೇಲೆ ಡ್ರೋನ್ ದಾಳಿ
ಮೊಜ್ತಾಬಾ ಪಟ್ಟಾಭಿಷೇಕದ ಬೆನ್ನಲ್ಲೇ ಇರಾನ್ ಆರ್ಭಟಿಸುತ್ತಿವೆ. ಗಲ್ಪ್ ರಾಷ್ಟ್ರಗಳ ತೈಲ ಭಂಡಾರಕ್ಕೆ ಕೊಳ್ಳಿ ಇಡುತ್ತಿದೆ. ಇರಾಕ್ನ ತೈಲ ರಿಫೈನರಿ ಮೇಲೆ ಡ್ರೋನ್ ದಾಳಿ ನಡೆದಿದ್ದು, ಅಪಾರ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದೆ.
ಇರಾನ್ ನ್ಯಾಯಾಂಗ ಮುಖ್ಯಸ್ಥ ಜಸ್ಟ್ಮಿಸ್!
ಇರಾನ್ನಲ್ಲಿ ಇವತ್ತು ಱಲಿ ನಡೆಯುತ್ತಿತ್ತು. ಆಗ ನ್ಯಾಯಾಂಗ ಮುಖ್ಯಸ್ಥರಿದ್ದ ಸ್ಥಳದ ಬಳಿ ಕ್ಷಿಪಣಿ ದಾಳಿ ನಡೆದಿದೆ. ಆಗ ಘೋಲಂ ಹೊಸೇನ್ ಮೊಹ್ಸೇನಿ ಜಸ್ಟ್ ಮಿಸ್ ಆಗಿದ್ದಾರೆ.