ವಾಷಿಂಗ್ಟನ್: 2008ರ ಮುಂಬೈ ಭಯೋತ್ಪಾದನಾ ದಾಳಿಯಲ್ಲಿ ಭಾಗಿಯಾಗಿದ್ದ ದೋಷಿ ಎಂದು ಸಾಬೀತಾಗಿರುವ ತಹವ್ವುರ್ ಹುಸೇನ್ ರಾಣಾ ಭಾರತಕ್ಕೆ ಹಸ್ತಾಂತರಿಸಲು ಅಮೆರಿಕದ ಸುಪ್ರೀಂಕೋರ್ಟ್ ಒಪ್ಪಿಗೆ ನೀಡಿದೆ.
ಶನಿವಾರ ಅಮೆರಿಕ ಸುಪ್ರೀಂಕೋರ್ಟ್ ತಹವ್ವುರ್ ಹುಸೇನ್ ರಾಣಾರನ್ನು ಭಾರತಕ್ಕೆ ಹಸ್ತಾಂತರ ಮಾಡುವ ಪ್ರಕ್ರಿಯೆಗಳಿಗೆ ಒಪ್ಪಿಗೆ ನೀಡಿದೆ, ತಹವ್ವುರ್ ಹುಸೇನ್ ರಾಣಾ ಭಾರತಕ್ಕೆ ಕರೆ ತಂದರೆ ಮುಂಬೈ ದಾಳಿಯ ಕುರಿತು ಇನ್ನಷ್ಟು ವಿಷಯಗಳು ಬೆಳಕಿಗೆ ಬರಲಿದೆ.
ಭಾರತ ತಹವ್ವುರ್ ಹುಸೇನ್ ರಾಣಾನನ್ನು ಭಾರತಕ್ಕೆ ಗಡಿಪಾರು ಮಾಡಬೇಕೆಂದು ಹಲವು ವರ್ಷಗಳಿಂದ ಅಮೇರಿಕಾವನ್ನು ಒತ್ತಾಯಿಸುತ್ತಿತ್ತು. ಪಾಕಿಸ್ತಾನಿ ಮೂಲದ ತಹವ್ವುರ್ ಹುಸೇನ್ ರಾಣಾ ಗಡಿಪಾರು ಮಾಡಲು ಈಗ ಒಪ್ಪಿಗೆ ಸಿಕ್ಕಿದೆ. ಹೀಗಾಗಿ ಅಮೇರಿಕಾ ಹಾಗೂ ಭಾರತದ ನಡುವಿನ ಬಾಂಧವ್ಯದಲ್ಲಿ ಮಹತ್ವದ ಬೆಳವಣಿಗೆ ಇದಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.