ಅಮೆಜಾನ್‌ಸಂಸ್ಥೆಯು ಸೋಮವಾರ 9,000 ಉದ್ಯೋಗಗಳನ್ನು ಕಡಿತಗೊಳಿಸುವುದಾಗಿ ಹೇಳಿದೆ. ಆ ಮೂಲಕ, ಸಂಭವನೀಯ ಆರ್ಥಿಕ ಹಿಂಜರಿತದ ಆತಂಕದಲ್ಲಿ ಎರಡನೇ ಸುತ್ತಿನ ಉದ್ಯೋಗ ಕಡಿತವನ್ನು ಘೋಷಿಸುತ್ತಿರುವ ಕಂಪೆನಿಗಳ ಸಾಲಿಗೆ ಅಮೆಜಾನ್ ಕೂಡಾ ಸೇರಿದೆ.
ಮೈಕ್ರೋಸಾಫ್ಟ್ ಕಾರ್ಪ್, ಸೇಲ್ಸ್‌ಫೋರ್ಸ್ ಇಂಕ್, ಆಲ್ಫಾಬೆಟ್ ಮತ್ತು ಮೆಟಾ ಸೇರಿದಂತೆ ಹಲವು ದೊಡ್ಡ ಕಂಪೆನಿಗಳು ಸಾವಿರಾರು ಉದ್ಯೋಗಿಗಳನ್ನು ಕೈ ಬಿಡುತ್ತಿದ್ದು, ಇದೀಗ ಅಮೆಜಾನ್ ಸಂಸ್ಥೆಯು ಎರಡನೇ ಸುತ್ತಿನ ಉದ್ಯೋಗ ಕಡಿತವನ್ನು ಘೋಷಿಸಿದೆ.
ಕಳೆದ ಕೆಲವು ವರ್ಷಗಳಲ್ಲಿ ಕಂಪನಿಯು ಗಣನೀಯ ಪ್ರಮಾಣದಲ್ಲಿ ಸಿಬ್ಬಂದಿಗಳನ್ನು ನೇಮಿಸಿದೆ. ಸದ್ಯದ, ಮಾರುಕಟ್ಟೆ ಅನಿಶ್ಚಿತತೆಯು ವೆಚ್ಚವನ್ನು ಕಡಿಮೆಗೊಳಿಸಲು ಒತ್ತಾಯಿಸಿದ್ದು, ಉದ್ಯೋಗ ಕಡಿತದ ಹೊರತಾಗಿ ಆಯ್ಕೆ ಇಲ್ಲದಂತಹ ಪರಿಸ್ಥಿತಿ ನಿರ್ಮಿಸಿದೆ ಎಂದು ಸಂಸ್ಥೆಯ ಸಿಇಒ ಆಂಡಿ ಜಾಸ್ಸಿ ಹೇಳಿದ್ದಾರೆ.
“ಸದ್ಯದ ಅನಿಶ್ಚಿತ ಆರ್ಥಿಕತೆ ಮತ್ತು ಮುಂದಿನ ದಿನಗಳಲ್ಲಿ ಮುಂದುವರೆಯಬಹುದಾದ ಅನಿಶ್ಚಿತತೆಯನ್ನು ಗಮನದಲ್ಲಿಟ್ಟುಕೊಂಡು, ನಮ್ಮ ವೆಚ್ಚಗಳನ್ನು ಹೆಚ್ಚು ಸುವ್ಯವಸ್ಥಿತವಾಗಿರಲು ನಾವು ಉದ್ಯೋಗ ಕಡಿತವನ್ನು ಆಯ್ಕೆ ಮಾಡಿಕೊಂಡಿದ್ದೇವೆ” ಎಂದು ಜಾಸ್ಸಿ ಹೇಳಿದ್ದಾರೆ.