Wednesday, December 4, 2024
Homeಟಾಪ್ ನ್ಯೂಸ್Conversion : ಹಿಂದೂ ಹೆಣ್ಣು ಮಕ್ಕಳನ್ನ ಕ್ರೈಸ್ತ ಧರ್ಮಕ್ಕೆ ಮತಾಂತರ? ಪುನೀತ್ ಕೆರೆಹಳ್ಳಿ ಆರೋಪ

Conversion : ಹಿಂದೂ ಹೆಣ್ಣು ಮಕ್ಕಳನ್ನ ಕ್ರೈಸ್ತ ಧರ್ಮಕ್ಕೆ ಮತಾಂತರ? ಪುನೀತ್ ಕೆರೆಹಳ್ಳಿ ಆರೋಪ

ಬೆಂಗಳೂರು : ಹಣ ನೀಡಿ ಆಮಿಷ ಒಡ್ಡಿ ಹಿಂದೂ ಹೆಣ್ಣುಮಕ್ಕಳನ್ನು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಲು ಯತ್ನಿಸಲಾಗಿದೆ ಎಂದು ಹಿಂದೂ ಸಂಘಟನೆಯ ಕಾರ್ಯಕರ್ತರ ಪುನೀತ್ ಕೆರೆಹಳ್ಳಿ ಆರೋಪಿಸಿದ್ದಾರೆ.

ಈ ಕುರಿತು ಪುನೀತ್​ ಕೆರೆಗಳ್ಳಿ ವಿಡಿಯೋವೊಂದನ್ನು ‘X’ ಎಕ್ಸ್​ ಖಾತೆಯಲ್ಲಿ ಶೇರ್ ಮಾಡಿದ್ದು, ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ. ಕಾಂಗ್ರೆಸ್ ಸರ್ಕಾರದ ದುಷ್ಟ ಹಿಂದೂ ವಿರೋಧಿ ಆಡಳಿತ ಹಿಂದೂಗಳ ಪರಿಸ್ಥಿತಿ ಹೀಗಿದೆ.


ಕಾಂಗ್ರೆಸ್ಸ್ ಸರ್ಕಾರದಲ್ಲಿ ಬೆಂಗಳೂರಿನ ಶಾಂತಿನಗರದ ನಡುರಸ್ತೆಯಲ್ಲೇ ಪೊಲೀಸ್ ಠಾಣೆಯ ಎದುರು ಮತಾಂತರಕ್ಕೆ ಪ್ರಯತ್ನಿಸಲಾಗಿದೆ. ಈ ಕುರಿತು ಕಾರ್ಯಕರ್ತರು ದೂರು ನೀಡಿದರೂ ಕಾಂಗ್ರೆಸ್​​​​ನ ಯುವ ನಾಯಕ ನಲ್ಪಾಡ್ ಮತಾಂತರಕ್ಕೆ ಯತ್ನಿಸಿದ್ದವರ ವಿರುದ್ಧ ಎಫ್​​​​​​ಐಆರ್ ಮಾಡದಂತೆ ಪೊಲೀಸರಿಗೆ ಸೂಚಿಸಿದ್ದಾರೆಂದು ಕೆರೆಹಳ್ಳಿ ಆರೋಪಿಸಿದ್ದಾರೆ. ಮತಾಂತರಕ್ಕೆ ಯತ್ನಿಸಿದ ಆರೋಪಿಯನ್ನು ಬಂಧಿಸದಿದ್ದರೆ ಠಾಣೆಯ ಎದುರು ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಹೆಚ್ಚಿನ ಸುದ್ದಿ

error: Content is protected !!