Thursday, July 10, 2025
Homeಟಾಪ್ ನ್ಯೂಸ್ಪ್ರಶಾಂತ್ ಸಂಬರಗಿಯಿಂದ ದೇವೇಗೌಡರಿಗೆ ಅವಮಾನ, ಲಕ್ಷ ರೂ. ಬಾಂಡ್ ಬರೆಸಿಕೊಂಡ ಪೊಲೀಸರು

ಪ್ರಶಾಂತ್ ಸಂಬರಗಿಯಿಂದ ದೇವೇಗೌಡರಿಗೆ ಅವಮಾನ, ಲಕ್ಷ ರೂ. ಬಾಂಡ್ ಬರೆಸಿಕೊಂಡ ಪೊಲೀಸರು

ಬೆಂಗಳೂರು: ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್​ಡಿ ದೇವೇಗೌಡ ವಿರುದ್ಧ ಅವಹೇಳನಕಾರಿ ಸಂದೇಶ ಪ್ರಕಟಿಸಿದ್ದ ಆರೋಪಕ್ಕೆ ಸಂಬಂಧಿಸಿ ಬಿಗ್ ಬಾಸ್ ಖ್ಯಾತಿಯ ಪ್ರಶಾಂತ್ ಸಂಬರಗಿ ಅವರನ್ನು ನಗರದ ಶ್ರೀರಾಮಪುರ ಪೊಲೀಸರು ಬುಧವಾರ ವಿಚಾರಣೆ ನಡೆಸಿ ಅವರಿಂದ ಮುಚ್ಚಳಿಕೆ ಹಾಗೂ 1 ಲಕ್ಷ ರೂ. ಬಾಂಡ್ ಬರೆಸಿಕೊಂಡು ಕಳುಹಿಸಿಕೊಡಲಾಯಿತು.

ದೇವೇಗೌಡರ ವಿರುದ್ಧ ಅವಹೇಳನಕಾರಿ ಸಂದೇಶ ಪೋಸ್ಟ್ ಮಾಡಿದ್ದಾರೆ ಎಂದು ಆರೋಪಿಸಿ ಜೆಡಿಎಸ್ ​ನಾಯಕರು ಶ್ರೀರಾಮಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ರಾಹುಲ್ ಗಾಂಧಿ ಲೋಕಸಭಾ ಸದಸ್ಯತ್ವ ಅನರ್ಹಗೊಂಡ ಸಂದರ್ಭದಲ್ಲಿ ಅದಕ್ಕೆ ಪೂರಕವಾಗಿ ಸಾಮಾಜಿಕ ಮಾಧ್ಯಮದಲ್ಲಿ ಸಂದೇಶ ಪ್ರಕಟಿಸಿದ್ದ ಪ್ರಶಾಂತ್ ಸಂಬರಗಿ, ‘ಈ ಕೇಸ್ ಬಗ್ಗೆ ಸಿಂಪಲ್ ಆಗಿ ಹೇಳಬೇಕು ಎಂದರೆ, ದೇವೇಗೌಡ ಕಳ್ಳ ಅನ್ನೋದಕ್ಕೂ, ಗೌಡರು ಅನ್ನೋರೆಲ್ಲ ಕಳ್ಳರೇ ಯಾಕಿರುತ್ತಾರೆ ಅನ್ನೋದಕ್ಕೂ ವ್ಯತ್ಯಾಸ ಇದೆ. ಮೊದಲನೆಯದ್ದಕ್ಕೆ ದೇವೇಗೌಡರು ಕೇಸ್ ಹಾಕಬೇಕು, ಎರಡನೆಯದ್ದಕ್ಕೆ ಅವನ ಮಗನೋ, ಮೊಮ್ಮಗನೋ ಅಥವಾ ಯಾರಾದರೂ ಗೌಡ ಕೇಸ್ ಹಾಕಬಹುದು’ ಎಂದು ಉಲ್ಲೇಖಿಸಿದ್ದರು.

ಕ್ಷಮೆ ಯಾಚಿಸಿದ್ದ ಸಂಬರಗಿ

ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದಂತೆಯೇ ಕ್ಷಮೆ ಯಾಚಿಸಿದ್ದ ಸಂಬರಗಿ, ನನ್ನ ತಂದೆ ಸಮಾನರಾದ ದೇವೇಗೌಡರ ಬಗ್ಗೆ ನನಗೆ ಅಪಾರವಾದ ಗೌರವ ಇದೆ. ನಾನು ಒಂದು ಉದಾರಣೆಯಾಗಿ ದೇವೇಗೌಡ ಎಂದು ಹೆಸರನ್ನು ಬಳಸಿದೆನೇ ಹೊರತು ಯಾವುದೇ ದುರುದ್ದೇಷವಿರಲಿಲ್ಲ. ಇದು ಯಾವುದೇ ರೀತಿಯಲ್ಲೂ ಅವರ ಗೌರವಕ್ಕೆ ಚ್ಯುತಿ ತರುವುದಕ್ಕಾಗಿ ಅಲ್ಲ. ಇದರಿಂದ ಯಾರಿಗಾದರೂ ಅಸಮಾಧಾನವಾಗಿದ್ದರೆ ಕ್ಷಮೆ ಯಾಚಿಸುತ್ತೇನೆ ಎಂದು ಟ್ವೀಟ್ ಮಾಡಿದ್ದರು.

ಹೆಚ್ಚಿನ ಸುದ್ದಿ

While viewing the website, tap in the menu bar. Scroll down the list of options, then tap Add to Home Screen.
Use Safari for a better experience.
error: Content is protected !!